'10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ'?

By Suvarna News  |  First Published May 10, 2021, 3:36 PM IST

*ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಸಚಿವ ಈಶ್ವರಪ್ಪ ಗರಂ
* ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂ. ನೀಡಬೇಕೆಂದಿದ್ದ ಸಿದ್ದರಾಮಯ್ಯ
* ಸಿದ್ದರಾಮಯ್ಯನವರು ಈ ಹೇಳಿಕೆಗೆ ಸಚಿವ ಈಶ್ವರಪ್ಪ ತಿರುಗೇಟು


ಶಿವಮೊಗ್ಗ, (ಮೇ.10): ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಗರಂ ಆಗಿದ್ದಾರೆ.

 ಸರ್ಕಾರ ಪ್ರತಿಯೊಬ್ಬರಿಗೂ  ತಿಂಗಳಿಗೆ ತಲಾ 10 ಕೆ.ಜಿ ವಿತರಣೆ ಮಾಡಿ ಆಹಾರದ ಕೊರತೆ ನೀಗಿಸಿ. ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಮೊದಲಿಗೆ ರು.10,000  ನೀಡಬೇಕು. ನಂತರ ತಿಂಗಳಿಗೆ ರು. 6,000 ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಿಎಸ್‌ ಯಡಿಯೂರಪ್ಪನವರಿಗೆ ಹೇಳಿದ್ದರು.

Tap to resize

Latest Videos

ಬಡವರಿಗೆ ಹಣ-ಅಕ್ಕಿ, ಉದ್ಯೋಗಕ್ಕೂ ಆದ್ಯತೆ ನೀಡಿ : ಸಿಎಂಗೆ ಸಿದ್ದರಾಮಯ್ಯ ಸಲಹೆ

ಇನ್ನು ಈ ಬಗ್ಗೆ ಇಂದು (ಸೋಮವಾರ) ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಈಶ್ವರಪ್ಪ, 10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು  ಪ್ರಿಂಟ್ ಮಾಡ್ತೀವಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

 ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ 14 ದಿನ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ನೀವು ಬಾಯಿಗ ಬೀಗ ಹಾಕಿಕೊಂಡರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ. ಅದಾದ ಮೇಲೆ ನಾವು, ನೀವು ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳೋಣ ಎಂದರು.

ರಾಜ್ಯದ ಜನ ಸಾಯುತ್ತದ್ದಾರೆ. ಇಂತಹ ವೇಳೆ ಬಾಯಿಗೆ ಬಂದಂಗೆ ಟೀಕೆ ಮಾಡುತ್ತಿದ್ದಾರೆ. ಒಳ್ಳೆಯದಕ್ಕೆ ಒಂದಾದರೂ ಅಭಿನಂದನೆ ಸಲ್ಲಿಸಿದ್ದೀರಾ? ಟೀಕೆ ಮಾಡುವುದಕ್ಕೆ ವಿರೋಧ ಪಕ್ಷ ಇದೆ ಎನ್ನುವಂತಾಗಿದೆ. ರೋಗಿಗಳಿಗೆ ಅನುಕೂಲವಾಗುವ ನಿಟ್ಟನಲ್ಲಿ ಏನಾದರೂ ಸಲಹೆ ನೀಡಿದರೆ ಅದನ್ನು ಮಾಡುತ್ತೇವೆ ಎಂದು ಗುಡುಗಿದರು.

ನೂರು ವರ್ಷದ ನಂತರ ಇಂತಹ ಕಾಯಿಲೆ ಬಂದಿದ್ದು ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಕೂಡ ನಿರೀಕ್ಷೆ ಮಾಡಿರಲಿಲ್ಲ. ಟೀಕೆ ವಿರೋಧ ಪಕ್ಷದ ಕರ್ತವ್ಯ. ಆದರೆ ಬಾಯಿಗೆ ಬಂದಂಗೆ ಟೀಕೆ ಮಾಡುವುದು ಒಳ್ಳೆಯದಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

click me!