ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಸದ್ದು, ಮುಂದಿನ ಎಐಸಿಸಿ ಅಧ್ಯಕ್ಷ ಯಾರು?

By Suvarna NewsFirst Published May 10, 2021, 3:17 PM IST
Highlights

* ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮುಂದಿನ ಅಧ್ಯಕ್ಷರು ಯಾರು?
* ಮತ್ತೆ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ 
* ಇಂದು (ಸೋಮವಾರ) ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಚುನಾವಣೆ

ನವದೆಹಲಿ, (ಮೇ.10): ಕೊರೋನಾ ಎರಡನೇ ಅಲೆ ಮಧ್ಯೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಭಾರಿ ಸದ್ದುಮಾಡುತ್ತಿದೆ.

ಇದೇ ಜೂನ್ 23ಕ್ಕೆ  ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರ ಆಯ್ಕೆ ಸಂಬಂಧ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಈ ಬಗ್ಗೆ ಇಂದು (ಸೋಮವಾರ) ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಜೂನ್ 23ಕ್ಕೆ ನಿಗದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ  ಎಐಸಿಸಿ ಅಧ್ಯಕ್ಷ ಯಾರಗಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.

ಮತ್ತೆ ಕಾಂಗ್ರೆಸ್‌ ಅಧ್ಯಕ್ಷರಾಗಲು ರಾಹುಲ್‌ ರೆಡಿ?

ಕೊರೋನಾ ಸಮಯದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬೇಡ ಎಂದು ಹಿರಿಯ ನಾಯಕರು ಆಗ್ರಹಿಸಿದ್ದು, ಅಶೋಕ್ ಗೆಹ್ಲೋಟ್,  ಗುಲಾಮ್ ನಬಿ ಅಜಾದ್, ಆನಂದ್ ಶರ್ಮಾ ಮುಂತಾದವರಿಂದ ಆಕ್ಷೇಪ ವ್ಯಕ್ತವಾಗಿದೆ. 

 ಸೋನಿಯಾ ಗಾಂಧಿ ಅವರು, ಹೊಸ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜೂನ್ 23 ರಂದು ನಡೆಯಲಿದೆ ಪ್ರಕಟಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಮತ್ತೆ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕೂಗು ಕೇಳಿ ಬರುತ್ತಿವೆ. ಮತ್ತೊಂದೆಡೆ ಗಾಂಧಿ ಕುಟುಂಬವನ್ನು ಬಿಟ್ಟು ಬೇರೆಯವರಿಗೆ ಅವಕಾಶ ನಿಡಬೇಕೆಂಬ ಮಾತುಗಳು ಕಾಂಗ್ರೆಸ್‌ ವಲಯಲ್ಲಿಯೇ ಹರಿದಾಡುತ್ತಿದೆ.

click me!