ನಾವಿಕನಿಲ್ಲದೆ ಬಿಜೆಪಿ ದೋಣಿ ಅಲುಗಾಡುತ್ತಿದೆ. ಬಿಜೆಪಿ ಮುಳುಗುತ್ತಿದೆ ಅನ್ನೋ ಭಯ ಬಿಜೆಪಿ ಶಾಸಕರಿಗೆ ಕಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವ್ಯಂಗ್ಯವಾಡಿದರು.
ಬೀದರ್ (ಆ.25): ನಾವಿಕನಿಲ್ಲದೆ ಬಿಜೆಪಿ ದೋಣಿ ಅಲುಗಾಡುತ್ತಿದೆ. ಬಿಜೆಪಿ ಮುಳುಗುತ್ತಿದೆ ಅನ್ನೋ ಭಯ ಬಿಜೆಪಿ ಶಾಸಕರಿಗೆ ಕಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವ್ಯಂಗ್ಯವಾಡಿದರು. ಸುದ್ದಿಗಾರರ ಜೊತೆ ಮಾತನಾಡಿ, ಸರ್ಕಾರ ರಚನೆಯಾಗಿ 100 ದಿನ ಕಳೆಯುತ್ತಾ ಬಂದರೂ, ವಿಪಕ್ಷ ನಾಯಕನ ಅಯ್ಕೆ ಮಾಡುವ ಸಾಮರ್ಥ್ಯ ವಿಪಕ್ಷಗಳಿಗೆ ಇಲ್ಲ. ವಿಪಕ್ಷ ನಾಯಕನನ್ನು ಮುಖ್ಯಮಂತ್ರಿಗಳ ನೆರಳು ಎಂದು ಕರಿಯುತ್ತಾರೆ. ಆದರೆ, ರಾಜ್ಯದಲ್ಲಿ ವಿಪಕ್ಷ ನಾಯಕನನ್ನು ಅಯ್ಕೆ ಮಾಡದೆ ರಾಜ್ಯಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವೇ ಹೆಚ್ಚಾಗಿದೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ಒದ್ದಾಡುತ್ತಿದೆ. ಬಿಜೆಪಿ ಸಂಪೂರ್ಣ ಗೊಂದಲದ ಗೂಡಾಗಿದೆ. ಜೆಡಿಎಸ್ ಪಕ್ಷ ಕೂಡಾ ಅದೇ ರೀತಿಯಾಗಿದೆ ಎಂದು ವ್ಯಂಗ್ಯವಾಡಿದರು. ಬೇರೆ ಪಕ್ಷಗಳಿಗೆ ಹೊಲಿಸಿದರೆ ನಮ್ಮ ಪಕ್ಷ ಜನಪರವಾಗಿದೆ. ಹಾಗಾಗಿ, ಬೇರೆ ಶಾಸಕರು ನಮ್ಮ ಪಕ್ಷಕ್ಕೆ ಬರೋಕೆ ಮನಸ್ಸು ಮಾಡಿರಬಹುದು ಎಂದರು. ನನಗೆ ಎಷ್ಟುಜನ ಬರ್ತಾರೆ ಅನ್ನೊ ಮಾಹಿತಿ ಇಲ್ಲ. ನಮಗೇನು ಶಾಸಕರನ್ನು ಕರೆ ತರಬೇಕು ಎನ್ನುವ ಅವಶ್ಯಕತೆಯಿಲ್ಲ, ನಮ್ಮ ಸರ್ಕಾರ ಸುಭದ್ರವಾಗಿದೆ. ಬರುವವರ ಬಗ್ಗೆ ಪಕ್ಷದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಊಹಾಪೋಹ: ಆರ್.ಅಶೋಕ್
ಅನಿರೀಕ್ಷಿತ ಭೇಟಿ: ಕಚೇರಿಗಳಿಂದ ನೀಡಲಾಗುತ್ತಿರುವ ಸೇವೆಗಳ ಕುರಿತು ವಿಳಂಬ ನೀತಿ ತಪ್ಪಿಸಲು, ಟೆಕ್ನಾಲಾಜಿಯಾಗಲಿ ಅಥವಾ ಬೇರೆ ಮಾರ್ಗದ ಮುಖಾಂತರ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಕಡಿಮೆ ಮಾಡಿ ಸುಲಲಿತವಾಗಿ ಕೆಲಸ ಸೀಗುವುದಕ್ಕೋಸ್ಕರ ಕಚೇರಿಗೆ ಭೇಟಿ ನೀಡಿ ಜನರ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಅರ್ಥ ಮಾಡಿಕೊಳ್ಳಲು ಈ ಅನಿರೀಕ್ಷಿತ ಭೇಟಿ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು. ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ದಿಢೀರ ಭೇಟಿ ನೀಡಿ, ಇಲ್ಲಿನ ನಾಡ ಕಚೇರಿ, ಹುಮನಾಬಾದ್ ಹಾಗೂ ಚಿಟಗುಪ್ಪ ತಾಲೂಕಿನ ಕಂದಾಯ ಸಂಬಂಧಿತ ದಾಖಲೆ ಕೋಣೆ ಹಾಗೂ ಉಪನೋಂದಣಿ ಇಲಾಖೆಯಿಂದ ಸಾರ್ವಜನಿಕರ ಹಾಗೂ ಅಧಿಕಾರಿಗಳಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಆಲಿಸಿದರು.
ಇಲಾಖೆಯಲ್ಲಿ ಸಾರ್ವಜನಿಕರ ಹಾಗೂ ಅಧಿಕಾರಿಗಳೊಂದಿಗೆ ಸ್ಥಳೀಯವಾಗಿ ಪರಿಹಾರ ಕಲ್ಪಿಸಲು ಏನು ಸುಧಾರಣೆ ಮಾಡಬೇಕು ಎನ್ನುವ ಕುರಿತು ವಿಚಾರ ತಿಳಿದುಕೊಳ್ಳಲು ನಾನು ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಉಪನೋಂದಣಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಕಚೇರಿಗೆ ಭೇಟಿ ನೀಡುತ್ತಿದ್ದೇವೆ. ತಾಲೂಕು ಕಚೇರಿಯಲ್ಲೇ ತಂತ್ರಜ್ಞಾನ ಅಳವಡಿಸಿಕೊಂಡು, ತಾಲೂಕು ಕಚೇರಿಯ ಆಡಳಿತವನ್ನು ವೇಗವಾಗಿ ಜತೆಗೆ ಜನರು ತಮ್ಮ ಸೇವೆಗಳನ್ನು ಮನೆಯಿಂದಲೆ ಪಡೆದುಕೊಳ್ಳುವ ರೀತಿಯಲ್ಲಿ ಬದಲಾವಣೆ ತರುವ ಆಲೋಚನೆ ಮಾಡಲಾಗುತ್ತಿದೆ.
ನಾವು ‘ಆಪರೇಷನ್ ಹಸ್ತ’ ಮಾಡುತ್ತಿಲ್ಲ, ಅವರೇ ಬರ್ತಿದ್ದಾರೆ: ಸಚಿವ ಎಂ.ಬಿ.ಪಾಟೀಲ್
ವಿಧಾನಪರಿಷತ್ ಸದಸ್ಯ ಭೀಮರಾವ ಪಾಟೀಲ್, ಕಂದಾಯ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ, ಪಿಆರ್‌ಎಸ್ ಡಿಸೇಟರ್ ಆಡಳಿತಾಧಿಕಾರಿ ಭೂಮಿ ಹಾಗೂ ಯುಪಿಒಆರ್ ವಿ.ರಶ್ಮಿ, ಕಂದಾಯ ಆಯುಕ್ತ ಪಿ. ಸುನೀಲಕುಮಾರ, ಸಹಾಯಕ ಆಯುಕ್ತ ಕೆ.ಜಯಪ್ರಕಾಶ, ಕಲಬುರ್ಗಿ ವಿಭಾಗಿಯ ಆಯುಕ್ತ ಕೃಷ್ಣ ಬಾಜಪೇಯಿ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಮಾಜಿ ಎಂಎಲ್‌ಸಿ ವಿಜಯಸಿಂಗ್, ಸೋನುಸಿಂಗ್ ಹಜಾರೆ, ಜಿಲ್ಲಾಧಿಕಾರಿ ಡಾ. ಗೋವಿಂದರೆಡ್ಡಿ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದ್ರಿ, ತಹಸೀಲ್ದಾರ್ ಅಂಜುಮ್ ತಬಸುಮ್, ಗ್ರೇಡ-2 ತಹಸೀಲ್ದಾರ್ ಮಂಜುನಾಥ ಪಂಚಾಳ, ಶಿರಸ್ತೆದಾರ ಹೇಮಾ, ನಾಡ ಕಚೇರಿ ಕಂಪ್ಯೂೕಟರ್ ಆಪರೇಟರ್ ಪ್ರೀಯಾಂಕಾ ಕೋಬಲ್, ದ್ವಿತೀಯ ದರ್ಜೆ ಸಹಾಯಕ ಮಹ್ಮದ್ ಸಾಜೀದ ಅಲಿ, ಉಪನೋಂದಣಿ ಅಧಿಕಾರಿ ಪ್ರೀಯಾಂಕಾ ಕೆ. ಪಾಟೀಲ್ ಸೇರಿದಂತೆ ಇದ್ದರು.