ಬಿಜೆಪಿಯವರು ಶ್ರೀಮಂತರ ತೆರಿಗೆ ಕಡಿಮೆ ಮಾಡಿ ಬಡವರ ಮೇಲೆ ಹಾಕಿದ್ದಾರೆ. ಅಗತ್ಯ ವಸ್ತುಗಳಿಗೂ ತೆರಿಗೆ ಕಟ್ಟುವ ಬಡವರ ಟ್ಯಾಕ್ಸ್‌ನ್ನು ಗ್ಯಾರಂಟಿ ಯೋಜನೆ ಮೂಲಕ ಅವರಿಗೇ ವಾಪಸ್ ಕೊಡುತ್ತಿದ್ದೇವೆ ಎಂದ ಸಚಿವ ಕೃಷ್ಣ ಬೈರೇಗೌಡ
ಮಂಗಳೂರು(ಮಾ.10): ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಅಂತಾರೆ. ಅವರ ಸರ್ಕಾರ ಶ್ರೀಮಂತರ ಮೇಲಿನ 2.50 ಲಕ್ಷ ಕೋಟಿ ರು. ತೆರಿಗೆ ವಿನಾಯ್ತಿ ನೀಡಿದ್ದು ಬಿಟ್ಟಿ ಭಾಗ್ಯ ಅಲ್ವಾ? 20 ಲಕ್ಷ ಕೋಟಿ ರು. ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಅದು ಬಿಟ್ಟಿ ಭಾಗ್ಯ ಅಲ್ವಾ? ಬಡವರಿಗೆ ಹಣ ಕೊಟ್ಟರೆ ಮಾತ್ರ ಅಪಹಾಸ್ಯ ಮಾಡ್ತೀರಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ಷೇಪಿಸಿದ್ದಾರೆ.
ನಗರದ ಹೊರವಲಯದ ಕಲ್ಲಾಪುವಿನಲ್ಲಿ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ಶ್ರೀಮಂತರ ತೆರಿಗೆ ಕಡಿಮೆ ಮಾಡಿ ಬಡವರ ಮೇಲೆ ಹಾಕಿದ್ದಾರೆ. ಅಗತ್ಯ ವಸ್ತುಗಳಿಗೂ ತೆರಿಗೆ ಕಟ್ಟುವ ಬಡವರ ಟ್ಯಾಕ್ಸ್‌ನ್ನು ಗ್ಯಾರಂಟಿ ಯೋಜನೆ ಮೂಲಕ ಅವರಿಗೇ ವಾಪಸ್ ಕೊಡುತ್ತಿದ್ದೇವೆ ಎಂದರು.
ಇದು ಪ್ರಜಾಪ್ರಭುತ್ವ, ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ: ನಳಿನ್ ಕುಮಾರ್ ಕಟೀಲ್
ಜಿಲ್ಲಾ ಉಸ್ತುವಾರಿ ಸಚಿವ ಗುಂಡುರಾವ್ ಮಾತನಾಡಿ, ಗ್ಯಾರಂಟಿ ಯೋಜನೆಗೆ ವಿನಿಯೋಗವಾಗುತ್ತಿರುವ 50 ಸಾವಿರ ಕೋಟಿ ರು.ಗಳಷ್ಟು ದೊಡ್ಡ ಮೊತ್ತವನ್ನು ಜನರಿಗೆ ನೀಡಲು ಯಾವ ಸರ್ಕಾರವೂ ತೀರ್ಮಾನ ಕೈಗೊಳ್ಳಲು ಆಗಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇಷ್ಟು ದೊಡ್ಡ ಮೊತ್ತದಲ್ಲಿ ಒಂದೇ ಒಂದು ಪೈಸೆ ಭ್ರಷ್ಟಾಚಾರವಿಲ್ಲದೆ ಅನುಷ್ಠಾನ ತೋರಿಸಿದ್ದೇವೆ ಎಂದರು. ಮಾಡಿ
ಬೆಂಗಳೂರು ಕಾರಿಡಾರ್:
ಪ್ರಸ್ತುತ ದ.ಕ. ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಂಗಳೂರು- ಮಂಗಳೂರು ವಿಶೇಷ ಆರ್ಥಿಕ ಕಾರಿಡಾರ್‌ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಇದು ಸಾಕಾರವಾದರೆ 3-4 ಗಂಟೆಯೊಳಗೆ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲ ಆಗಲಿದೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಚುನಾವಣೆಗೆ ಮೊದಲುಗ್ಯಾರಂಟಿ ಅನುಷ್ಠಾನ ಆಗಲ್ಲ ಎಂಬ ಚರ್ಚೆ ನಡೆದಿತ್ತು. ಸರ್ಕಾರ ರಚನೆಯಾಗಿ ಆರು ತಿಂಗಳಲ್ಲಿ ಅನುಷ್ಠಾನ ಮಾಡದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದೆ. ಆದರೆ ಅದಕ್ಕಿಂತ ಮೊದಲೇ ಜಾರಿ ಮಾಡಿ ಸರ್ಕಾರ ಮಾತು ಉಳಿಸಿದೆ. ಜನರು ಸ್ವಾಭಿಮಾನದಿಂದ ಬದುಕುವ ಗ್ಯಾರಂಟಿ ಕೊಡುಗೆ ನೀಡಿದೆ. ಉಳ್ಳಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಶಾಂತಿ- ಸಾಮರಸ್ಯವನ್ನು ನನ್ನ ಕೈಗೆ ಕೊಡಿ, ಅಭಿವೃದ್ಧಿ ಮಾಡಿ ತೋರಿಸ್ತೇನೆ ಎಂದರು.
ಬಿಜೆಪಿ ಸಂಧಾನ ವಿಫಲ: ಲೋಕಸಭಾ ಚುನಾವಣೆಯಲ್ಲಿ ಪುತ್ತಿಲ ಸ್ಪರ್ಧೆ
ಶಾಸಕರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಬಿ.ಎಂ. ಫಾರೂಕ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾಧಿಕಾರಿ ಮುಲೈ ಮುಗಿಲನ್, ಜಿಪಂ ಸಿಇಒ ಆನಂದ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ತಹಸೀಲ್ದಾರ್ ಪುಟ್ಟರಾಜು, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಉಪವಿಭಾಗಾಧಿಕಾರಿ ಹರ್ಷವರ್ಧನ್ ಕೆ. ಇದ್ದರು.
ಭೂಸುಧಾರಣಾ ಕಾಯ್ದೆ 50ರ ಸಂಭ್ರಮಾಚರಣೆ
ಬಡ ಭೂರಹಿತ ಕೂಲಿ ಕಾರ್ಮಿಕರು ತಾವು ಉಳುಮೆ ಮಾಡಿದ ಭೂಮಿಗೆ ಮಾಲೀಕರಾಗುವಂತೆ ಮಾಡಿದ ಭೂಸುಧಾರಣಾ ಕಾಯ್ದೆ ಜಾರಿಯಾಗಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ 50ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ದುರದೃಷ್ಟವಶಾತ್ ಈ ಕಾಯ್ದೆ ಜಾರಿಯಿಂದ ಆಗುವ ಲಾಭವನ್ನು ಹಲವರು ಮರೆತಿದ್ದಾರೆ. ಅದನ್ನು ಈ ಸಂಭ್ರಮಾಚರಣೆ ಕಾರ್ಯಕ್ರಮದ ಮೂಲಕ ನೆನಪಿಸಲಾಗುವುದು ಎಂದರು. ಇದೀಗ ಮತ್ತೆ ಬಗರ್‌ಹುಕುಂ ಸಮಿತಿ ಊರ್ಜಿತ ಮಾಡಿದ್ದೇವೆ. ಬಿಜೆಪಿ ಕಾಲದಲ್ಲಿ ಇದು ಸ್ಥಗಿತಗೊಂಡಿತ್ತು. ಅರ್ಜಿಗಳನ್ನು 8 ತಿಂಗಳೊಳಗೆ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ನೀಡುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.