ಸದ್ಯದಲ್ಲೇ ರಾಜ್ಯ ಸಂಪುಟ ಪುನಾರಚನೆಯಾಗಲಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ. ಇದರ ನಡುವೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಸಚಿವರೊಬ್ಬರು ದಿಢೀರನೆ ದೆಹಲಿಗೆ ಹಾರಿದ್ದಾರೆ.
ಬೆಂಗಳೂರು, (ಆ.18): ಮುಂಬರುವ ದಿನಗಳಲ್ಲಿ ಯಾವುದೇ ಸಂದರ್ಭದಲ್ಲಿ ಸಂಪುಟ ಪುನಾರಚನೆ ಮಾಡುವ ಸಂಭವವಿದ್ದು, ಕೆಲ ಸಚಿವರಿಗೆ ಕೊಕ್ ನೀಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಒಬ್ಬರಿಂದೊಬ್ಬರು ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ.
ಹೌದು..ಸದ್ಯದಲ್ಲೇ ರಾಜ್ಯ ಸಂಪುಟ ಪುನಾರಚನೆಯಾಗಲಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ. ಇದರ ನಡುವೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಇಂದು (ಮಂಗಳವಾರ) ದಿಢೀರನೆ ದೆಹಲಿಗೆ ಹಾರಿದ್ದಾರೆ.
ಸಿಪಿವೈಗೆ ಸಚಿವಗಿರಿ, ಹಳೇ ಮೈಸೂರು ಸಂಘಟನೆ ಹೊಣೆ?
ಇಲಾಖೆಯ ವಿವಿಧ ಯೋಜನೆಗೆ ಒಪ್ಪಿಗೆ ಪಡೆಯುವ ನೆಪದಲ್ಲಿ ಶ್ರೀನಿವಾಸ ಪೂಜಾರಿ ದೆಹಲಿಗೆ ತೆರಳಿದ್ದಾರೆ. ಆದ್ರೆ ಅವರು ಮಂತ್ರಿ ಸ್ಥಾನ ಉಳಿಸಿಕೊಳ್ಳುಲು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡ್ತಿದ್ದಾರೆ ಎನ್ನಲಾಗಿದೆ.
ಸಚಿವರಾಗಿ ತಾವು ಮಾಡಿರೋ ಯೋಜನೆಗಳು ಹಾಗೂ ಸಾಧನೆಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿರುವ ಅವರು, ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಇತರೆ ಕೇಂದ್ರ ನಾಯಕರನ್ನ ಭೇಟಿ ಮಾಡಿ, ಸಚಿವ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.
ಹಿಟ್ ಲಿಸ್ಟ್‌ನಲ್ಲಿ ಶಶಿಕಲಾ ಜೊಲ್ಲೆ
ಇನ್ನು ನಿರೀಕ್ಷೆಗೆ ತಕ್ಕಂತೆ ಇಲಾಖೆಯಲ್ಲಿ ಪ್ರಗತಿ ಸಾಸಲು ವಿಫಲರಾಗಿರುವ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಂಪುಟದಿಂದ ಕೋಕ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅಕಾರ ಸ್ವೀಕರಿಸಿ ಒಂದು ವರ್ಷವಾದರೂ ಇಲಾಖೆಯಲ್ಲಿ ಯಾವುದೇ ಸುಧಾರಣೆ ಮಾಡದಿರುವುದೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.