ರಾಜ್ಯಾಂಗ ಮಾರ್ಗದ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಕೇಂದ್ರ ಸರ್ಕಾರವು ಬದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.
ಮೈಸೂರು (ಜ.12): ರಾಜ್ಯಾಂಗ ಮಾರ್ಗದ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಕೇಂದ್ರ ಸರ್ಕಾರವು ಬದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ. ಸಂವಿಧಾನದ ಆಶಯಕ್ಕೆ ಪೂರಕವಾಗಿ ರಾಜ್ಯಾಂಗಬದ್ಧವಾಗಿ ಆಡಳಿತ ನಡೆಸಬೇಕಾದ ಕೇಂದ್ರ ಸರ್ಕಾರವು, ಧಾರ್ಮಿಕ ಸಂಸ್ಥೆಯೊಂದರ ಆಡಳಿತ ಮಂಡಳಿಯಾಗಿ ಬದಲಾಗಿರುವುದು ಸಂವಿಧಾನ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಮೌಲ್ಯವನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಆಶಯದ ವಿರುದ್ಧದ ನಡೆಯಾಗಿದೆ ಎಂದು ಅವರು ಖಂಡಿಸಿದ್ದಾರೆ.
ಅತಿರೇಕದ ಧಾರ್ಮಿಕತೆಯನ್ನು ಆಚರಿಸುತ್ತಿರುವ ಸರ್ಕಾರವು ರಾಜ್ಯಾಂಗಬದ್ಧ ವ್ಯವಸ್ಥೆಯನ್ನು ಅರಿಯುವಲ್ಲಿ ಸಂಪೂರ್ಣ ಸೋತಿದೆ. ಧಾರ್ಮಿಕತೆ ಎಂಬುದು ವ್ಯಕ್ತಿಯೋರ್ವನ ಐಚ್ಛಿಕ ವಿಷಯವಾಗಿದೆ. ಈ ಕಾರಣಕ್ಕಾಗಿಯೇ ಕೆಲವರು ಮಂದಿರಗಳಿಗೆ ಹೋಗುತ್ತಾರೆ, ಇನ್ನೂ ಕೆಲವರು ಮಸೀದಿಗೆ, ಮತ್ತೆ ಕೆಲವರು ಚರ್ಚ್, ಬೌದ್ಧ ಸ್ಥೂಪಗಳಿಗೆ ತೆರಳುತ್ತಾರೆ. ಇತ್ತೀಚಿಗೆ ಬಾಬಾ ಸಾಹೇಬರ ದೀಕ್ಷಾಭೂಮಿಗೂ ಹೆಚ್ಚಿನ ಜನರು ತೆರಳುತ್ತಿರುವುದನ್ನು ನಾವು ಕಾಣಬಹುದು ಎಂದು ತಿಳಿಸಿದ್ದಾರೆ.
undefined
ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪುವ ಮಾತೇ ಇಲ್ಲ: ಶಿಕ್ಷಕರ ಬೇಡಿಕೆ ಮಧು ಬಂಗಾರಪ್ಪ ಹೇಳಿದ್ದೇನು?
ಈ ಹಿನ್ನಲೆಯಲ್ಲಿ ಒಬ್ಬರ ಐಚ್ಛಿಕ ವಿಷಯವಾದ ಧಾರ್ಮಿಕತೆಯನ್ನು ರಾಜಕೀಯ ಪರಿಧಿಯ ಒಳಗೆ ತಂದು, ಧರ್ಮವನ್ನೂ ರಾಜಕೀಯದ ಲಾಭಕ್ಕಾಗಿ ಬಳಸಿಕೊಳ್ಳುವ ಇವರ ಸಂವಿಧಾನ ವಿರೋಧಿ ಕೆಲಸವನ್ನು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲರೂ ವಿರೋಧಿಸಬೇಕು. ಚುನಾವಣೆಗಳು ಅಭಿವೃದ್ಧಿ ಮತ್ತು ಜನಪರತೆಯ ಆಧಾರದಲ್ಲಿ ನಡೆಯಬೇಕೇ ವಿನಃ ಧಾರ್ಮಿಕತೆಯ ಮೇಲಲ್ಲ ಎಂದು ಅವರು ತಿಳಿಸಿದ್ದಾರೆ.
ಪೀಳಿಗೆಯನ್ನೇ ಪ್ರಭಾವಿಸಿದ ಮಹಾನ್ ವ್ಯಕ್ತಿ ಕುವೆಂಪು: ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹರಾದ ಕುವೆಂಪು ಅವರು ತಮ್ಮ ವೈಚಾರಿಕತೆ ಹಾಗೂ ವೈಜ್ಞಾನಿಕ ಹಾದಿಯ ಮೂಲಕ ಒಂದು ಪೀಳಿಗೆಯನ್ನೇ ಪ್ರಭಾವಿಸಿದ ಮಹಾನ್ ವ್ಯಕ್ತಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಮನುಜ ಮತ ವಿಶ್ವಪಥ ಎಂಬ ಮಹತ್ವದ ತಿಳುವಳಿಕೆಯನ್ನು ನಮ್ಮೆಲ್ಲರಿಗೂ ನೀಡಿದ ರಾಷ್ಟ್ರಕವಿ ಕುವೆಂಪು ಅವರು ಕೆಳವರ್ಗಗಳು ಸಾಕ್ಷರತೆ ಹೊಂದಿ, ಪ್ರಜ್ಞಾವಂತರಾಗಿ ಮೌಢ್ಯತೆ ಹಾಗೂ ಕಂದಾಚಾರಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕೆಂದು ಬಯಸಿದ್ದರು ಎಂದು ಹೇಳಿದ್ದಾರೆ.
ರಾಮ ಜನ್ಮಭೂಮಿ ವಿಚಾರದಲ್ಲಿ ಕಾಂಗ್ರೆಸ್ ಪಾತ್ರ ಇಲ್ಲ: ಸಂಸದ ಪ್ರತಾಪ್ ಸಿಂಹ
ಮಹಿಳಾ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಕುವೆಂಪು ಅವರು, ತಮ್ಮೆಲ್ಲಾ ಕೃತಿಗಳಲ್ಲಿ ಸಮಾನ ಹಕ್ಕುಗಳ ಜೊತೆಗೆ ನಿಸರ್ಗದ ಮಹತ್ವವನ್ನೂ ಪ್ರತಿಪಾದಿಸಿದ್ದಾರೆ. ಇನ್ನೂ ಯುವ ಸಮುದಾಯದಲ್ಲಿ ಅತ್ಯಂತ ನಂಬಿಕೆ ಇಟ್ಟುಕೊಂಡಿದ್ದ ಕುವೆಂಪು ಅವರು, ಸಾಹಿತ್ಯದ ಮೂಲಕ ಮೊದಲ ಬಾರಿಗೆ ಅವರಿಗೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಓರ್ವ ದಾರ್ಶನಿಕ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ. ಮಹಾಛಂದಸ್ಸಿನ ಮೂಲಕ 'ರಾಮಾಯಣ ದರ್ಶನಂ' ಕೃತಿಯನ್ನು ಬರೆದು, ಶೂದ್ರ ವರ್ಗಗಳೂ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವುದನ್ನು ಸಾಧಿಸಿ ತೋರಿಸಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಸ್ಪರ್ಶವನ್ನು ನೀಡಿದಂತವರು ಎಂದು ಅವರು ಹೇಳಿದ್ದಾರೆ.