ರಾಮಮಂದಿರ ಒಂದೇ ಇಟ್ಟುಕೊಂಡು ಬಿಜೆಪಿ ಮುಖಂಡರಿಂದ ರಾಜಕಾರಣ: ಸಚಿವ ಎಚ್.ಕೆ.ಪಾಟೀಲ್‌

By Govindaraj S  |  First Published Jan 14, 2024, 4:00 AM IST

ಬಿಜೆಪಿ ಮುಖಂಡರು ರಾಮಮಂದಿರ ಒಂದೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ‌ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.


ಗದಗ (ಜ.12): ಬಿಜೆಪಿ ಮುಖಂಡರು ರಾಮಮಂದಿರ ಒಂದೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ‌ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ಬೇರೆ ಸಾಧನೆಗಳು ಇಲ್ಲ, ಸರಕಾರದ ಸಾಧನೆಯನ್ನು ವಿವೇಕದಿಂದ ನೋಡುತ್ತಿದ್ದಾರೆ. ಇವರು ಏನೇ‌ ಸುಳ್ಳು ಹೇಳಿದರೂ ಜನ ನಂಬಲ್ಲ. ರಾಮಮಂದಿರ ಅಪೂರ್ಣ ಅಂತಾ ನಾನು ಹೇಳೋದಲ್ಲ, ಶಂಕರಾಚಾರ್ಯರು ಹೇಳುತ್ತಾರೆ. ಧರ್ಮದಲ್ಲಿ ನಿಷ್ಠೆ ಇರುವವರು ಶಂಕರಾಚಾರ್ಯರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತೇವೆ. ಶಂಕರಾಚಾರ್ಯರು ಹೇಳೋದನ್ನ ನಂಬುತ್ತೇವೆ ಹೊರತು, ಬಿಜೆಪಿ ಅಧ್ಯಕ್ಷ ಹೇಳೋದನ್ನ ನಂಬಬೇಕಾ? 

ದೇಶದಲ್ಲಿ ರಾಜಕೀಯ ವ್ಯಕ್ತಿಗಳು ಧರ್ಮವನ್ನು ಹೇಗೆ ದುರುಪಯೋಗ ಮಾಡಿಕೊಳ್ಳುತ್ತಾರೆ ಅನ್ನೋದನ್ನ ಶಂಕರಾಚಾರ್ಯರು ಮಾರ್ಗದರ್ಶನ ಮೂಲಕ ತಿಳಿಸಿದ್ದಾರೆ. ರಾಜಕೀಯವಾಗಿ ಧರ್ಮ ಹೇಗೆ ಬಳಕೆಯಾಗುತ್ತೆ ಅನ್ನೋದನ್ನ ತಿಳಿಯಲು ಇದು ಪರ್ವಕಾಲ ಎಂದರೆ ತಪ್ಪಾಗಲಾರದು ಎಂದರು. ಶಂಕರಾಚಾರ್ಯರೇ ಹೋಗಲ್ಲ‌ ಎಂದರೆ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ, ಯಾರು ಅತ್ಯಂತ ಎತ್ತರದವರು ಅಂತಾ ನಾವು ಪರಿಗಣಿಸುತ್ತೇವೋ ಅವರೇ ಹೋಗುತ್ತಿಲ್ಲ ಎಂದರೆ ಇನ್ನೇನು? ನಾಲ್ಕು ಮಠಗಳ ಪೈಕಿ ಇಬ್ಬರು ಸ್ವಾಮೀಜಿಗಳು ಹೇಳಿಕೆ, ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅದರ ಬಗ್ಗೆ ಹೆಚ್ಚಿನ ಅವಶ್ಯಕತೆ ಇದೆ ಎಂದರು.

Tap to resize

Latest Videos

ರಾಮಮಂದಿರ ನಿರ್ಮಾಣ ಸಂಬಂಧ ಸ್ಥಳದ ಸರ್ವೆ ವರದಿ ಕೇಳಿದ್ದೇನೆ: ಸಂಸದ ಡಿ.ಕೆ.ಸುರೇಶ್

ಕುಡಿಯುವ ನೀರಿನ ವ್ಯತ್ಯಯವಾಗದಂತೆ ಜಾಗ್ರತೆ ವಹಿಸಿ: ಗದಗ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಜಿಲ್ಲೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಬರಗಾಲದ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಈ ಬಗ್ಗೆ ಸಂಬಂಧಿತ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಸೂಚಿಸಿದರು. ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರಗುಂದ ಶಾಸಕ ಸಿ.ಸಿ.ಪಾಟೀಲ ಹಾಗೂ ಜಿ.ಎಸ್.ಪಾಟೀಲ ನರಗುಂದ ಹಾಗೂ ರೋಣ ತಾಲೂಕುಗಳಿಗೆ ಮಲಪ್ರಭಾ ನದಿಯಿಂದ ಪೂರೈಕೆ ಮಾಡಲಾಗುವ ನೀರು ಇನ್ನೆರೆಡು ತಿಂಗಳಲ್ಲಿ ಕಡಿಮೆ ಆಗಲಿದೆ ಎಂದು ಮಾಹಿತಿ ಬಂದಿದೆ. 

ಹಾಗಾದರೇ ಮುಂದೆ ನರಗುಂದ ಮತ್ತು ರೋಣ ತಾಲೂಕುಗಳಿಗೆ ಕುಡಿಯುವ ನೀರಿನ ಪೂರೈಕೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಗಮನಿಸಬೇಕು ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ. ಪಾಟೀಲ ಅವರು ಜಿಲ್ಲಾಧಿಕಾರಿಗಳು ಕೂಡಲೇ ನೀರು ಪೂರೈಕೆ ಮಾಡುವ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಸಿಗೆ ಮುಗಿಯವರೆಗೂ ಕುಡಿಯುವ ನೀರು ಸಮರ್ಪಕ ಪೂರೈಸುವ ಬಗ್ಗೆ ಸೂಕ್ತ ಕ್ರಮಗಳನ್ನು ವಹಿಸುವಂತೆ ತಿಳಿಸಿದರು. ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಲಕ್ಷ್ಮೇಶ್ವರ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. 

ರಾಮ ಜನ್ಮಭೂಮಿ ವಿಚಾರದಲ್ಲಿ ಕಾಂಗ್ರೆಸ್‌ ಪಾತ್ರ ಇಲ್ಲ: ಸಂಸದ ಪ್ರತಾಪ್ ಸಿಂಹ

ಪ್ರತಿ 15-20 ದಿನಕ್ಕೊಮ್ಮೆ ಕುಡಿಯುವ ನೀರು ಒದಗಿಸಿದರೆ ಹೇಗೆ ? ಸಾರ್ವಜನಿಕರು ಈ ಬಗ್ಗೆ ಹಲವಾರು ಬಾರಿ ದೂರುಗಳನ್ನು ನೀಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ವಿಧಾನ ಪರಿಷತ ಸದಸ್ಯ ಎಸ್.ವಿ. ಸಂಕನೂರ ಅವಳಿ ನಗರಕ್ಕೆ ಸಮರ್ಪಕ ನೀರು ಪೂರೈಕೆ ಆಗದಿರುವ ಕುರಿತು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ ಅವರು ಅಧಿಕಾರಿಗಳು ಸಮರ್ಪಕ ನೀರು ಪೂರೈಕೆ ಬಗ್ಗೆ ಗಮನ ಹರಿಸಬೇಕು. ಮಳೆಗಾಲ ಪ್ರಾರಂಭ ಆಗುವ ವರೆಗೂ ಯಾವುದೆ ಕಾರಣಕ್ಕೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

click me!