ವಿರೋಧ ಪಕ್ಷ ಬಿಜೆಪಿಗೆ ಕೆಲಸ ಇಲ್ಲವಾ?. ರಾಜ್ಯದಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಅದರ ಬಗ್ಗೆ ಬಿಜೆಪಿ ಪ್ರಸ್ತಾಪವನ್ನೇ ಮಾಡ್ತಾ ಇಲ್ಲ. ಮುಡಾ ಸೈಟ್ ಹೆಚ್ಚೆಚ್ಚು ಪಡೆದುಕೊಂಡವರೇ ಈಗ ಹೆಚ್ಚೆಚ್ಚು ಮಾತಾಡ್ತಾ ಇರೋದು. ಮುಡಾದಲ್ಲಿ ಸಿಎಂ ಹಾಗೂ ಅವರ ಕುಟುಂಬ ಇಲ್ಲ. ನಕಲಿ ದಾಖಲೆ ಸೃಷ್ಟಿಸುವ ಮಟ್ಟಕ್ಕೆ ಅವರ ಕುಟುಂಬ ಹೋಗಿಲ್ಲ. ಹೆಣ್ಣು ಮಗಳು ಪಾಪದವರು, ಅವರನ್ನು ಬೀದಿಗೆ ತಂದು ಕಪ್ಪು ಚುಕ್ಕೆ ಅಂಟಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ ಸಚಿವ ಎಚ್.ಸಿ ಮಹದೇವಪ್ಪ
ಬೆಂಗಳೂರು(ಆ.30): ಮುಡಾ ಹಗರಣ ಪ್ರಸ್ತಾಪ ಆಗಿ ಎರಡು ತಿಂಗಳಾಗಿದೆ. ಅಸೆಂಬ್ಲಿ ನಡೆಯದೇ ಇರುವ ಮಟ್ಟಕ್ಕೆ ನಡೆಯಿತು. ವಿಷಯ ಇಲ್ಲದೇ ಇರುವುದನ್ನು ವಿಷಯ ಮಾಡ್ತಿದ್ದಾರೆ ಬಿಜೆಪಿಯವರು. ಸಿಎಂ ಸಿದ್ದರಾಮಯ್ಯ ಕುಟುಂಬದ ಘನತೆ ಗೌರವವನ್ನು ಹಾಳು ಮಾಡುವ ಪ್ರಯತ್ನ ಇದಾಗಿದೆ ಎಂದು ಸಚಿವ ಎಚ್.ಸಿ ಮಹದೇವಪ್ಪ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಚ್.ಸಿ ಮಹದೇವಪ್ಪ ಅವರು, ವಿರೋಧ ಪಕ್ಷ ಬಿಜೆಪಿಗೆ ಕೆಲಸ ಇಲ್ಲವಾ?. ರಾಜ್ಯದಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಅದರ ಬಗ್ಗೆ ಬಿಜೆಪಿ ಪ್ರಸ್ತಾಪವನ್ನೇ ಮಾಡ್ತಾ ಇಲ್ಲ. ಮುಡಾ ಸೈಟ್ ಹೆಚ್ಚೆಚ್ಚು ಪಡೆದುಕೊಂಡವರೇ ಈಗ ಹೆಚ್ಚೆಚ್ಚು ಮಾತಾಡ್ತಾ ಇರೋದು. ಮುಡಾದಲ್ಲಿ ಸಿಎಂ ಹಾಗೂ ಅವರ ಕುಟುಂಬ ಇಲ್ಲ. ನಕಲಿ ದಾಖಲೆ ಸೃಷ್ಟಿಸುವ ಮಟ್ಟಕ್ಕೆ ಅವರ ಕುಟುಂಬ ಹೋಗಿಲ್ಲ. ಹೆಣ್ಣು ಮಗಳು ಪಾಪದವರು, ಅವರನ್ನು ಬೀದಿಗೆ ತಂದು ಕಪ್ಪು ಚುಕ್ಕೆ ಅಂಟಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್: ನಾಳೆ ರಾಜಭವನ ಚಲೋಗೆ ಕಾಂಗ್ರೆಸ್ ಕರೆ
ಇಷ್ಟಕ್ಕೇ ಸಾಕು, ಇದು ಅತಿಯಾಯ್ತು ಅಂತ ಅನಿಸುತ್ತಿದೆ ನನಗೆ. ಕೆಲಸ ಇಲ್ಲದ ಕುರುಡ ಕೆರೆದುಕೊಂಡು ಹುಣ್ಣು ಮಾಡಿಕೊಂಡನಂತೆ ಹಾಗಾಗಿದೆ. ಎಲ್ಲವೂ ಕಾನೂನು ಅಡಿಯಲ್ಲೇ ನಡೆಯುತ್ತಿದೆ. ಹಿಂದುಳಿದ ವರ್ಗದ ನಾಯಕನ ದನಿ ಅಡಗಿಸಲು ಕೋಮುವಾದಿಗಳ ಪ್ರಯತ್ನ ಇದಾಗಿದೆ. ಜನರು ಇದನ್ನು ತಡೆದೇ ತಡೆಯುತ್ತಾರೆ. ಭ್ರಷ್ಟಾಚಾರ ಸ್ವಜನ ಪಕ್ಷಪಾತ ಎರಡರಲ್ಲೂ ಸಿಎಂ ಪಾತ್ರ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ.