'ಸಮುದಾಯದ ಹೋರಾಟಕ್ಕೆ ಸಿದ್ದರಾಮಯ್ಯ ಮನವೊಲಿಸುವ ತೆವಲು ನನಗಿಲ್ಲ'

Published : Dec 29, 2020, 02:49 PM IST
'ಸಮುದಾಯದ ಹೋರಾಟಕ್ಕೆ ಸಿದ್ದರಾಮಯ್ಯ ಮನವೊಲಿಸುವ ತೆವಲು ನನಗಿಲ್ಲ'

ಸಾರಾಂಶ

ಕುರುಬ ಸಮುದಾಯವನ್ನು  ಎಸ್‌ಟಿಗೆ ಸೇರ್ಪಡೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ.  

ಮೈಸೂರು, (ಡಿ.29): ನಮ್ಮ ಸಮುದಾಯದ ಹೋರಾಟಕ್ಕೆ ಸಿದ್ದರಾಮಯ್ಯ ಸಹಕಾರ ನೀಡುವಂತೆ ಮನವೊಲಿಸುವ ತೆವಲು ನನಗಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು (ಮಂಗಳವಾರ) ಏರ್ಪಡಿಸಿದ್ದ ಕುರುಬರ ಎಸ್.ಟಿ. ಹೋರಾಟ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನನ್ನು ಮನವೊಲಿಸುವ ಅಗತ್ಯವಿಲ್ಲ, ಅಪೇಕ್ಷೆ ಇದ್ದವರು ಬರುತ್ತಾರೆ. ರಾಜ್ಯದಲ್ಲಿ ಕೋಟ್ಯಾಂತರ ಜನ ಇದ್ದಾರೆ, ಅವರನ್ನೆಲ್ಲಾ ಮನವೊಲಿಸಲು ಆಗುತ್ತಾ. ಸಮುದಾಯದ ಮೇಲೆ ಯಾರಿಗೆ ನಂಬಿಕೆ ಆಸಕ್ತಿ ಇದೆಯೋ ಅವರೆಲ್ಲಾ ಬರುತ್ತಾರೆ ಎಂದು ಹೇಳಿದರು.

'ಕುರುಬ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯರನ್ನ ವೀಕ್ ಮಾಡಲು RSS ಹುನ್ನಾರ'

ಸಿದ್ದರಾಮಯ್ಯ ಸಹಕಾರ ಕೊಡ್ಲಿಲ್ಲ ಎಂದು ಮನವೊಲಿಸುವ ತೆವಲು‌ ನನಗೇನು. ನಮ್ಮ ಹಿಂದೆ ಸಮುದಾಯದ ಸ್ವಾಮೀಜಿಗಳಿದ್ದಾರೆ. ಹೋರಾಟದಲ್ಲಿ ಯಶಸ್ವಿಯಾಗುವ ಬಗ್ಗೆ ನಮಗೆ ನಂಬಿಕೆ ಇದೆ‌. ಇದು ಹೋರಾಟವಲ್ಲ ಜನ ಜಾಗೃತಿ. ಸ್ವಾತಂತ್ರ್ಯ ಪೂರ್ವದಿಂದಲೂ ಕುರುಬರು ಒಂದುಗೂಡಿಲ್ಲ. ಈ ಹಿನ್ನೆಲೆಯಲ್ಲಿ ಒಂದುಗೂಡಿಸುವ ಸಲುವಾಗಿ ಸಭೆ ನಡೆಸುತ್ತಿದ್ದೇವೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲೇ ಕುರುಬರು ಎಸ್‌ಟಿಗೆ ಸೇರಿದ್ದಾರೆ ಎಂಬ ದಾಖಲೆಗಳಿವೆ ಎನ್ನುತ್ತಾರೆ. ಎಸ್‌ಟಿಗೆ ಸೇರಿಸಲು ರಾಮಕೃಷ್ಣ ಹೆಗ್ಡೆ, ದೇವರಾಜ ಅರಸುರವರ ಸಹಕಾರ ಕೇಳಿದ್ದೆವು ಆದರೆ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಸಮುದಾಯವನ್ನ ಎಸ್‌ಟಿಗೆ ಸೇರಿಸಿ ಅಂತ ಸಭೆ ಮಾಡುತ್ತಿದ್ದೇವೆ. ಮಠಾಧೀಶರ ವಿರೋಧವಿಲ್ಲ, ಮಠಾಧೀಶರನ್ನ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕುರುಬ ಸಮುದಾಯ ಇಬ್ಬಾಗ ಆಗುತ್ತಿಲ್ಲ ಎಂದು ತಿಳಿಸಿದರು.

ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಧರ್ಮೇಗೌಡ ಆತ್ಮಹತ್ಯೆ ತುಂಬಾ‌ ನೋವಿನ ವಿಚಾರ. ಅವರು ಸಾಯುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಅವರು ಯಾವ ವಿಚಾರಕ್ಕೆ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ