ತಾಪಂ, ಜಿಪಂ ಚುನಾವಣೆ ಎದುರಿಸಲು ಸಜ್ಜಾಗಿ: ಸಚಿವ ಸುಧಾಕರ್‌

By Kannadaprabha News  |  First Published Jun 15, 2022, 3:29 AM IST

*  ಬಿಜೆಪಿ ಪ್ರಕೋಷ್ಟಗಳ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಕರೆ 
*  2023ರ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕನಿಷ್ಠ ಬಿಜೆಪಿ 4 ಕ್ಷೇತ್ರ ಗೆಲ್ಲಬೇಕಿದೆ 
*  ಶಾಶ್ವತ ನೀರಾವರಿಗೆ ಒತ್ತು 


ಚಿಕ್ಕಬಳ್ಳಾಪುರ(ಜೂ.15): ಶೀಘ್ರದಲ್ಲಿಯೇ ತಾಪಂ ಮತ್ತು ಜಿಪಂ ಚುನಾವಣೆಗಳು ಎದುರಾಗಲಿದ್ದು ಬಿಜೆಪಿ ವಿವಿಧ ಪ್ರಕೋಷ್ಟಗಳ ಮುಖ್ಯಸ್ಥರು, ಕಾರ್ಯಕರ್ತರು ಈಗನಿಂದಲೇ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿ ಪಕ್ಷವನ್ನು ಚುನಾವಣೆಗೆ ಸದೃಢಗೊಳಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ವಿವಿಧ ಪ್ರಕೋಷ್ಠಗಳ ಪದಾಧಿಕಾರಿಗಳ ಜಿಲ್ಲಾ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಕೆಲಸವಾಗಬೇಕು. 2023ರ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕನಿಷ್ಠ ಬಿಜೆಪಿ 4 ಕ್ಷೇತ್ರ ಗೆಲ್ಲಬೇಕಿದೆ ಎಂದರು.

Tap to resize

Latest Videos

ಬಿಜೆಪಿ ಮುಂಚೂಣಿ ಘಟಕಗಳಾದ ಇಡಿ, ಐಟಿ: ಸಲೀಂ ಅಹ್ಮದ್‌

ಶಾಶ್ವತ ನೀರಾವರಿಗೆ ಒತ್ತು:

ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಚಾಲ್ತಿಯಲ್ಲಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದ ಕೆರೆಗಳು ಈಗಾಗಲೇ ಎಚ…ಎನ್‌ ವ್ಯಾಲಿ ನೀರಿನಿಂದ ತುಂಬಿವೆ. 60 ಕೋಟಿ ವೆಚ್ಚದಲ್ಲಿ ಬಾಗೇಪಲ್ಲಿ ತಾಲೂಕಿಗೆ ಎಚ…ಎನ್‌ ವ್ಯಾಲಿ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರವೇ ಬಾಗೇಪಲ್ಲಿ ತಾಲೂಕಿನ ಕೆರೆಗಳೂ ಎಚ್‌ಎನ್‌ ವ್ಯಾಲಿ ನೀರಿನಿಂದ ತುಂಬಲಿವೆ. ಅಲ್ಲದೆ ಎತ್ತಿನಹೊಳೆ ಯೋಜನೆಯ ನೀರು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜಿಲ್ಲೆಯ ಗಡಿಗೆ ಆಗಮಿಸಲಿದ್ದು, ಮುಂದಿನ ಎರಡು ವರ್ಷದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ಕೆರೆಗಳಿಗೂ ಎತ್ತಿನಹೊಳೆ ನೀರು ತುಂಬಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಮೂಲ ಸೌಲಭ್ಯ, ಆರೋಗ್ಯ ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ರಂಗಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ನಿರ್ಮಿಸಲು ಪ್ರಧಾನಿಗಳು ಪಣ ತೊಟ್ಟಿದ್ದಾರೆ. ಮುಂದಿನ ಜನವರಿ ತಿಂಗಳ ಸಂಕ್ರಾಂತಿ ವೇಳೆಗೆ ಜಿಲ್ಲೆಯ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಲಿದೆ, ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದು ಈಗಾಗಲೇ ಸಾಬೀತಾಗಿದೆ. ಜಿಲ್ಲೆಯಲ್ಲಿ 24 ಪ್ರಕೋಷ್ಟಗಳಿದ್ದು, ಎಲ್ಲರೂ ಶ್ರಮ ವಹಿಸಿದರೆ ಪಕ್ಷದ ಅಭಿವೃದ್ಧಿಯೊಂದಿಗೆ ಎಲ್ಲರ ಅಭಿವೃದ್ಧಿ ಸಾಧ್ಯವಾಗಲಿದೆ. ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸುವ ಕೆಲಸವಾಗಬೇಕು ಎಂದರು.

National Herald Case ಮೋದಿ ಸರ್ಕಾರ, ದೆಹಲಿ ಪೊಲೀಸರ ವಿರುದ್ಧ ಕಾಂಗ್ರೆಸ್ ಕೆಂಡ

ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಮಾವು ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್‌, ಉಸ್ತುವಾರಿಗಳಾದ ಕಾಂತರಾಜ್‌, ಪ್ರಕಾಶ್‌ ಮಂಡೋತ್‌, ಬೈರೇಗೌಡ , ಶ್ರೀನಿವಾಸರೆಡ್ಡಿ, ಅರುಣ್‌ ಬಾಬು, ಅಶೋಕ್‌, ಲಕ್ಷ್ಮೇಪತಿ, ಲಕ್ಷ್ಮೇನಾರಾಯಣ ಗುಪ್ತ, ಮತ್ತಿತರರು ಇದ್ದರು.

ಕಾಂಗ್ರೆಸ್‌ 35 ವರ್ಷಗಳ ಹಿಂದೆಯೆ ದೇಶದಲ್ಲಿ ಬಡತನ ನಿರ್ಮೂಲನೆಗೆ ಗರಿಬೀ ಹಠವೋ ನಡೆಸಿದರೂ ಇಂದಿಗೂ ಬಡತನ ನಿರ್ಮೂಲನೆ ಆಗಿಲ್ಲ. ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸುತ್ತಿದೆ. ರೈತರ ಆದಾಯ ದ್ವಿಗುಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕ್ರಮಬದ್ಧವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ ಅಂತ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. 
 

click me!