ಆ ಕ್ಷೇತ್ರಕ್ಕೆ ಬನ್ನಿ, ಈ ಕ್ಷೇತ್ರಕ್ಕೆ ಬನ್ನಿ ಎನ್ನಲು ಸಿದ್ದು ಏನು ಜೋಕರ್ರಾ?: ಸಚಿವ ಸುಧಾಕರ್‌

Published : Jul 26, 2022, 05:00 AM IST
ಆ ಕ್ಷೇತ್ರಕ್ಕೆ ಬನ್ನಿ, ಈ ಕ್ಷೇತ್ರಕ್ಕೆ ಬನ್ನಿ ಎನ್ನಲು ಸಿದ್ದು ಏನು ಜೋಕರ್ರಾ?: ಸಚಿವ ಸುಧಾಕರ್‌

ಸಾರಾಂಶ

‘ಸಿದ್ದರಾಮಣ್ಣನವರು ನಮ್ಮ ನಾಯಕರಾಗಿದ್ದವರು ಅವರ ಬಗ್ಗೆ ಲೇವಡಿ ಮತ್ತು ಅಪಮಾನ ಮಾಡಬಾರದು. ಅವರನ್ನು ಈ ಕ್ಷೇತ್ರಕ್ಕೆ ಬನ್ನಿ, ಆ ಕ್ಷೇತ್ರಕ್ಕೆ ಬನ್ನಿ ಎಂದು ಕರೆಯಲು ಅವರೇನು ಜೋಕರ್ರೇ’ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ವ್ಯಂಗ್ಯವಾಡಿದ್ದಾರೆ. 

ಕೋಲಾರ (ಜು.26): ‘ಸಿದ್ದರಾಮಣ್ಣನವರು ನಮ್ಮ ನಾಯಕರಾಗಿದ್ದವರು ಅವರ ಬಗ್ಗೆ ಲೇವಡಿ ಮತ್ತು ಅಪಮಾನ ಮಾಡಬಾರದು. ಅವರನ್ನು ಈ ಕ್ಷೇತ್ರಕ್ಕೆ ಬನ್ನಿ, ಆ ಕ್ಷೇತ್ರಕ್ಕೆ ಬನ್ನಿ ಎಂದು ಕರೆಯಲು ಅವರೇನು ಜೋಕರ್ರೇ’ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ವ್ಯಂಗ್ಯವಾಡಿದ್ದಾರೆ. ಅವರಿಗೂ ಒಂದು ಕ್ಷೇತ್ರ ಎನ್ನುವುದು ಇದೆ. ಆ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ, ಸಿದ್ದರಾಮಣ್ಣ ಮಹಾನ್‌ ನಾಯಕರು ಅವರನ್ನು ಅಪಮಾನ ಮಾಡಬಾರದು ಎಂದು ಹೇಳಿದ್ದಾರೆ. 

ಮುಖ್ಯಮಂತ್ರಿಗಳ ಒಂದು ವರ್ಷದ ಸಾಧನಾ ಸಮಾವೇಶಕ್ಕೆ ಕಾರ್ಯಕರ್ತರಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇ.ಡಿ, ಐಟಿ ಮತ್ತು ಸಿಬಿಐ ಕಾಂಗ್ರೆಸ್‌ ಸರ್ಕಾರದಲ್ಲಿ ಏನು ಕೆಲಸ ಮಾಡುತ್ತಿತ್ತೋ, ಆ ಕೆಲಸವನ್ನು ಈಗಲೂ ಮಾಡುತ್ತಿದೆ. ನಾವು ಅದನ್ನು ಬಳಸಿಕೊಂಡು ಯಾರಿಗೂ ತೊಂದರೆ ನೀಡುವ ಕೆಲಸ ಮಾಡುತ್ತಿಲ್ಲ ಎಂದರು. 54 ವರ್ಷಗಳ ಕಾಲ ಕಾಂಗ್ರೆಸ್‌ ಈ ದೇಶವನ್ನು ಆಳಿದೆ, ಆಗ ಯಾವ ರೀತಿ ಕೆಲಸ ಮಾಡುತ್ತಿತ್ತೋ ಈಗಲೂ ಅದನ್ನೇ ಮುಂದುವರೆಸಿವೆ ಎಂದರು.

ಅವರಪ್ಪನಾಣೆಗೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ: ಸಚಿವ ಕೆ.ಸುಧಾಕರ್

ಕಾಂಗ್ರೆಸ್‌ ಪ್ರಬಲತೆ ಕುಗ್ಗಿಸಿ ಬಿಜೆಪಿ ಬಲಪಡಿಸಿ: 60 ವರ್ಷಗಳ ಕಾಲ ಆಡಳಿತ ಮಾಡಿರುವ ಕಾಂಗ್ರೆಸ್‌ ಪಕ್ಷ ರೈತರಿಗೆ 1 ಸಾವಿರ ರೂ ಆದರೂ ಕೊಟ್ಟು ಪಾಪಕ್ಕೋಗಿಲ್ಲ, ಆದರೆ ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ರೈತರಿಗೆ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆಯೆಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ತಿಳಿಸಿದರು. 

ನಗರದ ವಾರ್ಡನಂ 31ರ ತಿಮ್ಮಸಂದ್ರ ರಸ್ತೆಯಲ್ಲಿನ ಬಿವಿಎಂ ಕಲ್ಯಾಣ ಮಂಟಪದಲಿ ಬಿಜೆಪಿ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅ​ಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದ್ದು, ಬಸವರಾಜ್‌ ಬೊಮ್ಮಾಯಿರು ಮುಖ್ಯಮಂತ್ರಿಯಾಗಿ 1 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಜನೋತ್ಸವ ಸಮಾವೇಶವನ್ನು ಜು.28ರಂದು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದು ಚಿಂತಾಮಣಿ ತಾಲೂಕಿನಿಂದ ಸಹಸ್ರಾರು ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು.

ಆದರೆ, ಬಿಜೆಪಿ ಸರಕಾರ 10 ವರ್ಷಗಳಲ್ಲಿ ರೈತರ ಪರವಾದ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದು ರೈತರ ಪರವಾಗಿದೆ. ಕೇಂದ್ರ 6 ಸಾವಿರ ಮತ್ತು ರಾಜ್ಯ ಸರ್ಕಾರ 4 ಸಾವಿರ ರು. ಒಟ್ಟಾರೆ 10 ಸಾವಿರ ರು. ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗುವಂತೆ ಮಾಡುವುದರ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತರಿಗೆ ಹಣ ಸಂದಾಯ ಮಾಡಿದ ಸರ್ಕಾರವಾಗಿದೆ. ರೈತರ ಮಕ್ಕಳ ವಿದ್ಯಾರ್ಜನೆಗಾಗಿ ವಿದ್ಯಾನಿ​ಯೋಜನೆ, ರೈತರ ಆದಾಯ ದುಪ್ಪಟ್ಟುಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಫಲವಾಗಿದೆಯೆಂದರು.

ವೀರೇಂದ್ರ ಹೆಗ್ಗಡೆ ಮಾತನಾಡುವ ದೇವರು: ಸಚಿವ ಸುಧಾಕರ್

ಬಿಜೆಪಿ ಪಕ್ಷದ ಪ್ರಬಲತೆ ಕಡಿಮೆ ಇರಬಹುದು, ಪ್ರಾರಂಭದಲ್ಲಿ ಕೇವಲ 2 ಲೋಕಸಭಾ ಕ್ಷೇತ್ರಗಳನ್ನು ಗೆದ್ದ ಪಕ್ಷ ಇಂದು 300ಕ್ಕೂ ಅಧಿ​ಕ ಲೋಕಸಭಾ ಸ್ಥಾನಗಳೊಂದಿಗೆ ಸರ್ಕಾರ ರಚಿಸುವಷ್ಟುಪ್ರಬಲವಾಗಿದೆ. ಮುಂದಿನ ದಿನಗಳಲ್ಲಿ ಕೆಂದ್ರದಲ್ಲಿ ಕಾಂಗ್ರೆಸ್‌ ಪ್ರಬಲತೆಯನ್ನು ಕುಗ್ಗಿಸಿದಂತೆ, ಚಿಂತಾಮಣಿಯಲ್ಲಿಯೂ ಕಾಂಗ್ರೆಸ್‌ ಪ್ರಾಬಲ್ಯವನ್ನು ಕುಗ್ಗಿಸಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರು ಒಗ್ಗೂಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!