* ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಬಲಪಡಿಸಲು ಸಿದ್ಧರಾಗಿ
* ಶಿಡ್ಲಘಟ್ಟ ಬಿಜೆಪಿ ಕಾರ್ಯಕರ್ತರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕರೆ
* ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಸಭೆ
ರವಿಕುಮಾರ್ ವಿ
ಚಿಕ್ಕಬಳ್ಳಾಪುರ(ಮಾ.31): ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಬಗ್ಗೆ ಜನರಿಗೆ ಹೆಚ್ಚಿನ ಒಲವಿದ್ದು, ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಜಿಲ್ಲೆಯಾದ್ಯಂತ ಬಿಜೆಪಿ ಹವಾ ಎಬ್ಬಿಸಲು ಕಾರ್ಯೋನ್ಮುಖರಾಗಬೇಕೆಂದು ಆರೋಗ್ಯ ಸಚಿವ ಡಾ.ಸುಧಾಕರ್(Dr K Sudhakar) ಕರೆ ನೀಡಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ದೇಶದ ಗೃಹ ಮಂತ್ರಿ ಅಮಿತ್ ಶಾ(Amit Shah) ಅವರ ಭೇಟಿಯ ಹಿನ್ನೆಲೆಯಲ್ಲಿ ಬಿಜೆಪಿ(BJP) ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂದಿನ ಕೆಲವೇ ದಿನಗಳಲ್ಲಿ ತಾವು ಎರಡೂ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗಾಗಿ ಸಮಯ ಮಿಸಲಿಡುವುದಾಗಿ ತಿಳಿಸಿದರು, ಪಕ್ಷದ ಕಾರ್ಯಕರ್ತರು ಇಂದಿನಿಂದಲೇ ಸಮರೋಪಾದಿಯಲ್ಲಿ ಸಿದ್ದತೆ ಮಾಡಿಕೊಳ್ಳಲು ಸೂಚಿಸಿದರು. ಬಹಳಷ್ಟು ಜಿಲ್ಲೆಗಳಲ್ಲಿ ಒಂದೇ ಒಂದು ಮೆಡಿಕಲ್ ಕಾಲೇಜ್(Medical College) ಇಲ್ಲ. ನಮ್ಮ ಜಿಲ್ಲೆಗೆ ಈಗಾಗಲೇ ಎರಡು ಮೆಡಿಕಲ್ ಕಾಲೇಜ್‌ಗಳಿಗೆ ಮಂಜೂರಾತಿ ದೊರೆತಿದೆ. ಮುಂದಿನ ವರ್ಷದಲ್ಲಿ ಒಂದು ಮೆಡಿಕಲ್ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದರು.
Karnataka Politics: ಇಂದು ಕರ್ನಾಟಕಕ್ಕೆ ಅಮಿತ್ ಶಾ, ಕಮಲ ಪಾಳಯದಲ್ಲಿ ಭಾರೀ ಸಂಚಲನ
ಏಪ್ರಿಲ್ 1ರಂದು ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 540 ಕೋಟಿ ರು. ವೆಚ್ಚದಲ್ಲಿ 400 ಹಾಸಿಗೆಗಳ ಬೃಹತ್ ಆಸ್ಪತ್ರೆ(Hospital) ನಿರ್ಮಾಣವಾಗಲಿದೆ. ರಾಷ್ಟ್ರದ ಗೃಹಮಂತ್ರಿ ಅಮಿತ್ ಶಾ ಏಪ್ರಿಲ್ 1ರಂದು ಶಂಕುಸ್ಥಾಪನೆ ನೆರವೇರಿಸಲು ಆಗಮಿಸಲಿದ್ದಾರೆ. ಈಗಾಗಲೇ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕಾಮಗಾರಿ ಆರಂಭಿಕ ಹಂತದಲ್ಲಿ ಇದ್ದು ಶಂಕುಸ್ಥಾಪನೆ ನೆರವೇರಲಿದೆ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೂರಾರು ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದರು.
ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಒಪ್ಪಿಗೆ:
ಶಿಡ್ಲಘಟ್ಟ ತಾಲೂಕಿನಲ್ಲಿ 30 ಕೋಟೆ ರೂಗಳ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ(High-tech Silk Market) ಒಪ್ಪಿಗೆ ಸೂಚಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟವಿಧಾಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಗೆಲ್ಲಲಿದ್ದು, ಇದನ್ನು ತಪ್ಪಿಸಲು ಯಾರಿಗೂ ಸಾಧ್ಯ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವಂತ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದೆಂದರು.
ಜಿಲ್ಲೆಗೆ ಕ್ರಿಯಾಶೀಲ ನಾಯಕತ್ವ:
ಮಾಜಿ ಶಾಸಕ ಎಂ.ರಾಜಣ್ಣ(M Rajanna) ಮಾತನಾಡಿ, ಜಿಲ್ಲೆಯಲ್ಲಿ ಓರ್ವ ಕ್ರಿಯಾಶೀಲ ದಕ್ಷ ಆಡಳಿತಗಾರನ ನಾಯಕತ್ವ ಸಿಕ್ಕಿದೆ. ಡಾ.ಸುಧಾಕರ್ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಿ ತಾಲೂಕಿನಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಬಿಜೆಪಿ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಸೌಲಭ್ಯಗಳನ್ನು ತಿಳಿಸಬೇಕೆಂದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಮುಖಂಡ ಕೇಶವ ಪ್ರಸಾದ್, ತಾಲೂಕು ಮಂಡಲ್ ಅಧ್ಯಕ್ಷ ಕಂಬದ ಹಳ್ಳಿ ಸುರೇಂದ್ರಗೌಡ, ನಗರಮಂಡಲ ಅಧ್ಯಕ್ಷ ರಾಘವೇಂದ್ರ, ನಗರಸಭೆಯ ಸದಸ್ಯ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಲಕ್ಷಮಯ್ಯ, ದೇವರಾಜ್, ಮುಕೇಶ್, ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಬಿಸಿ ನಂದೀಶ್, ಮುಂತಾದವರು ಉಪಸ್ಥಿತರಿದ್ದರು.
ಏಪ್ರಿಲ್ 1ರ ಕಾರ್ಯಕ್ರಮ ಖಾಸಗಿಯವರಿಂದ ಆಯೋಜನೆ ಮಾಡಲಾಗಿದ್ದು, ಕಾರ್ಯಕರ್ತರು ಯಾವುದೇ ರೀತಿಯ ಅಡಚಣೆಯಾದರು ಸಹಕರಿಸಲು ಮನವಿ ಮಾಡಿದರು. ಕೇವಲ 800 ಮಂದಿಯಷ್ಟೇಶ್ವೇತ ವಸ್ತ್ರದಾರಿಗಳಾಗಿ ಕೇಸರಿ ಶಾಲುಗಳನ್ನು ಧರಿಸಿ ಆಗಮಿಸಬೇಕು.
ಮೊದಲಿಗೆ ತಮಕೂರಿನ ಸಿದ್ದಗಂಗಾ ಮಠಕ್ಕೆ ಬರಲಿದ್ದು, ಅಲ್ಲಿಂದ ಹೆಲಿಪಾಡ್ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮಕ್ಕೆ ಅಮಿತ್ ಶಾ ಬರಲಿದ್ದಾರೆ. ಬೆಂಗಳೂರಿನ ಬಳಿಕ ಅರಮನೆ ಮೈದಾನಲ್ಲಿ ಆಯೋಜಿಸಿರುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ 400 ಬೆಡ್ ಗಳ ಆಸ್ಪ್ತತ್ರೆಗೆ ಅಮಿತ್ ಶಾ ಶಂಕುಸ್ಥಾಪನೆ ಮಾಡಲಿದ್ದಾರೆ. ಹೀಗಾಗಿ ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮಕ್ಕೆ ಜಿಲ್ಲಾಧಿಕಾರಿ ಆರ್. ಲತಾ, ಎಸ್‌ಪಿ ಮಿಥುನ್ ಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಜೊತೆಗೆ ಕೇಂದ್ರ ಸರ್ಕಾರದ ಭಧ್ರತಾ ಸಿಬ್ಬಂದಿ ಜೊತೆ ಎಸ್‌ಪಿ ಮಿಥುನ್ ಕುಮಾರ್ ಭದ್ರತೆಯ ಬಗ್ಗೆ ಪರಿಶೀನಾ ಸಭೆ ಮಾಡಿದ್ದಾರೆ.
ಸತ್ಯಸಾಯಿ ಆಶ್ರಮದಲ್ಲಿ ಭರದ ಸಿದ್ಧತೆಗಳು
ಕೇಂದ್ರ ಗೃಹ ಸಚಿವ ಅಮಿತ್ ಶಾ ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮದಲ್ಲಿ ಮಾಡಲು ಉದ್ದೇಶಿಸಿರುವ ಸತ್ಯಸಾಯಿ ಸರಳ ಮೆಮೋರಿಯಲ್ 400 ಬೆಡ್ ಗಳ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಹೀಗಾಗಿ ಸತ್ಯಸಾಯಿ ಆಶ್ರಮದಲ್ಲಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳನ್ನ ಮಾಡಲಾಗುತ್ತಿದೆ. ಈಗಾಗಲೇ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಆಲ್ ಲತಾ, ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸತ್ಯಸಾಯಿ ಆಶ್ರಮ ಹಾಗೂ ಅಧಿಕಾರಿಗಳ ಜೊತೆ ಸಭೆ ಕೂಡ ನಡೆಸಿದ್ದಾರೆ.
Chikkaballapura Nandi Hill: ಪ್ರವಾಸಿಗರಿಗೆ ವಿಕೇಂಡ್‌ನಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ಮುಕ್ತ!
ಸತ್ಯಸಾಯಿ ಆಶ್ರಮದ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ
ತುಮಕೂರಿನಿಂದ ಮುದ್ದೇನಹಳ್ಳಿ ಗ್ರಾಮಕ್ಕೆ ಬರಲಿರುವ ಅಮಿತ್ ಶಾ ಸತ್ಯಸಾಯಿ ಆಶ್ರಮದಲ್ಲಿರೋ ಕ್ರೀಡಾಂಗಣಕ್ಕೆ ಬರಲಿದ್ದು, ಅಲ್ಲಿಯೇ 50 ನಿಮಿಷಗಳ ಕಾಲ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇನ್ನೂ ಕಾರ್ಯಕ್ರಮ ನಡೆಯುವ ಈ ಜಾಗದಲ್ಲಿ ಹೆಚ್ಚು ಭದ್ರತಾ ಪರಿಶೀಲನೆ ನಡೆಸಿದ್ದು, ಮುದ್ದೇನಹಳ್ಳಿಯ ಸತ್ಯಸಾಯಿ ಕ್ಯಾಂಪಸ್ ಸುತ್ತಮುತ್ತ ಪೊಲೀಸರ ಹೈ ಅಲರ್ಟ್ ಮಾಡಿದ್ದಾರೆ
ಜೆಡ್ ಪ್ಲಸ್ ಭದ್ರತಾ ಹಿನ್ನೆಲೆ ಹಿರಿಯ ಅಧಿಕಾರಿಗಳು ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಹಿನ್ನೆಲೆ ಜೆಡ್ ಪ್ಲಸ್ ಕೆಟಗರಿ ಭದ್ರತೆ ಒದಗಿಸಬೇಕಾಗಿದ್ದು, ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮಕ್ಕೆ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು, ಸಿಎಎಸ್, ಸಿಐಎಸ್ ಎಫ್ ಸೇರಿದಂತೆ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ ಕುಮಾರ್ ಭೇಟಿ ನೀಡಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳು ಕೈಗೊಳ್ಳಬೇಕು ಎಂಬುದರ ಬಗ್ಗೆ ಪರಿಶೀಲಿಸಿದರು.
ಅಮಿತ್ ಶಾಗೆ ಬೊಮ್ಮಾಯಿ ಸಾಥ್
ಮುದ್ದೇನಹಳ್ಳಿ ಸತ್ಯಸಾಯಿ ಆಶ್ರಮದಲ್ಲಿ ಆಸ್ಪತ್ರೆಯ ಶಂಕುಸ್ಥಾಪನೆಗೆ ಬರಲಿರು ಅಮಿತ್ ಶಾ ಗೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಸಾಥ್ ನೀಡಲಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಎ ನಾರಾಯಣಸ್ವಾಮಿ ಸಚಿವರಾದ ಡಾ.ಕೆ., ಸುಧಾಕರ್, ಎಂಟಿಬಿ ನಾಗರಾಜ್, ಸೇರಿದಂತೆ ಹಲವು ಸಚಿವರು, ಸಂಸದರು ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.