ಮೈಸೂರು- ಬೆಂಗಳೂರು ದಶಪಥ ಯೋಜನೆಯ ಕ್ರೆಡಿಟ್ ವಾರ್ ಮತ್ತೆ ಆರಂಭವಾಗಿದೆ. ದಶಪಥ ಯೋಜನೆ ಕುರಿತು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ಧಾಳಿ ನಡೆಸಿದ್ದರು.
ಮೈಸೂರು (ಡಿ.29): ಮೈಸೂರು- ಬೆಂಗಳೂರು ದಶಪಥ ಯೋಜನೆಯ ಕ್ರೆಡಿಟ್ ವಾರ್ ಮತ್ತೆ ಆರಂಭವಾಗಿದೆ. ದಶಪಥ ಯೋಜನೆ ಕುರಿತು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಈ ಸಂಬಂಧ ವಾಗ್ದಾಳಿ ಮುಂದುವರೆಸಿದ್ದಾರೆ ಸುದ್ದಿಗಾರರೊಡನೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಸುಮ್ಮನೆ ಬುರುಡೆ ಬಿಡ್ತಾನೆ. ಪ್ರತಾಪ್ ಸಿಂಹ ಏನು ಮೇಸ್ತ್ರಿ ಏನ್ರಿ? ಸಿದ್ದರಾಮಯ್ಯ- ಪ್ರತಾಪ್ ಸಿಂಹ ಇಕ್ವಲ್ ಲೀಡರಾ (ಸಮಾನ ನಾಯಕರ)? ಮೈಸೂರು- ಬೆಂಗಳೂರು ರಾಜ್ಯ ಹೆದ್ದಾರಿ ಆಗಿದ್ದಾಗ ಪ್ರತಾಪ ಸಿಂಹ ಸಂಸದ ಆಗಿರಲಿಲ್ಲ.
ಯುಪಿಎ ಸರ್ಕಾರದ ಅವಧಿಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಘೋಷಣೆ ಆಗಿತ್ತು. ಆಗ ಪ್ರತಪಾ ಸಿಂಹ ಸಂಸದನೇ ಆಗಿರಲಿಲ್ವಲ್ಲಾ ಎಂದು ಅವರು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಘೋಷಣೆ ಆದ ಮೇಲೆ ಅದನ್ನ ಮಾಡೊದು ಸರ್ಕಾರದ ಕೆಲಸ ಅಲ್ವಾ? ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇವರಿಗೆ ಇನ್ ಚಾರ್ಜ್ ಕೊಟ್ಟಿದ್ರಾ? ಡಿಪಿಆರ್ ಮಾಡ್ಕೊಡು ಅಂತ ಕೇಳಿದ್ದರಾ? ಸುಮ್ಮನೆ ಬುರುಡೆ ಬಿಡುವ ಕೆಲಸ ಮಾಡಬಾರದು. ಕೆಲಸ ಮಾಡಿದ್ದರೆ ಖಂಡಿತ ಅಭಿನಂದನೆ ಸಲ್ಲಿಸುವೆ. ಒಂದು ಯೋಜನೆ ತಯಾರಾಗಲು ರಾಜ್ಯ ಸರ್ಕಾರಗಳು ಪ್ರಸ್ತಾಪ ಸಲ್ಲಿಸಿ, ಹಲವು ಹಂತಗಳ ಬಳಿಕ ಹೆದ್ದಾರಿ ಆಗುತ್ತದೆ ಎಂದರು.
ಸುಮ್ಮನೆ ಅವರ ಹೇಳಿಕೆಗಳಿಗೆ ಮೈಲೇಜ್ ಕೊಡಬಾರದು. ನೀರು ತುಂಬಿರೋದನ್ನು ನೋಡಲು ಇವರು ಯಾಕೆ ಹೋಗಿದ್ದರು. ಪ್ರವಾಹ ಬಂದರೆ ಎಲ್ಲರೂ ಹೋಗುತ್ತಾರೆ. ಹಾಗಂತ ನೀರಲ್ಲಿ ಬಿದ್ದು ನಾನೇ ಮರಗಳನ್ನು ಜನರನ್ನು ರಕ್ಷಣೆ ಮಾಡಿದ್ದು ಅಂದ್ರೆ ಹೇಗೆ? ವಾಟ್ ಈಸ್ ದಿಸ್ ನಾನ್ ಸೆನ್ಸ್ ಎಂದು ತಮ್ಮದೇ ದಾಟಿಯಲ್ಲಿ ಚಾಟಿ ಬೀಸಿದರು.
ಕೋಮುವಾದಿ ರಾಜಕಾರಣ ಕೊನೆಗಾಣಿಸಬೇಕು: ಸಚಿವ ಮಹದೇವಪ್ಪ
ಖರ್ಗೆ ಸ್ಪರ್ಧೆ ಪ್ರಸ್ತಾಪವಾಗಿಲ್ಲ: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದರೆ ಸಂತೋಷ. ಆದರೆ ಇದೆಲ್ಲ ಅಂತೆ ಕಂತೆಗಳು. ಅವರು ಇಲ್ಲಿಂದ ಸ್ಪರ್ಧಿಸಿದರೆ ಒಂದು ಲಕ್ಷ ಲೀಡ್‌ನಲ್ಲಿ ಗೆಲ್ಲಿಸುತ್ತೇವೆ. ಅವರು ನಮ್ಮ ರಾಷ್ಟ್ರೀಯ ನಾಯಕರು. ಅವರು ಬಯಸಿದರೆ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಇದೆಲ್ಲ ಪಕ್ಷದಲ್ಲಿ ಚರ್ಚೆ ಆಗಿಲ್ಲ ಎಂದರು.