ಜೆಡಿಎಸ್‌ನಿಂದ ನಂಬಿಕೆ ದ್ರೋಹ: ಸಚಿವ ಅಶ್ವತ್ಥನಾರಾಯಣ

By Govindaraj SFirst Published Dec 31, 2022, 11:18 PM IST
Highlights

ಜೆಡಿಎಸ್‌ ಒಂದು ನಂಬಿಕೆ ದ್ರೋಹಿ ಪಕ್ಷ. ಜನರ ಭಾವನೆಯನ್ನು ಗೌರವಿಸದೆ ಕಣ್ಣೀರು ಸುರಿಸಿ, ವಿಶ್ವಾಸ ದ್ರೋಹ ಮಾಡಿರುವ ಜೆಡಿಎಸ್‌ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು. 

ಮಂಡ್ಯ (ಡಿ.31): ಜೆಡಿಎಸ್‌ ಒಂದು ನಂಬಿಕೆ ದ್ರೋಹಿ ಪಕ್ಷ. ಜನರ ಭಾವನೆಯನ್ನು ಗೌರವಿಸದೆ ಕಣ್ಣೀರು ಸುರಿಸಿ, ವಿಶ್ವಾಸ ದ್ರೋಹ ಮಾಡಿರುವ ಜೆಡಿಎಸ್‌ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು. ನಗರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ಮಾಡದೆ, ಜನರ ನಂಬಿಕೆಯನ್ನು ಹುಸಿಗೊಳಿಸಿದ ಜೆಡಿಎಸ್‌ಗೆ ಮತದಾರರು ಅವಕಾಶ ಕೊಟ್ಟಿದ್ದರು. ಏಳಕ್ಕೆ ಏಳು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೂ ಜಿಲ್ಲೆ ಪ್ರಗತಿಯನ್ನು ಕಾಣಲಿಲ್ಲ. 

ಮುಖ್ಯಮಂತ್ರಿ ಸ್ಥಾನಕ್ಕೇರಿದರೂ ರೈತರು, ಮಹಿಳೆಯರು, ಬಡವರನ್ನು ಉದ್ಧಾರ ಮಾಡಲಿಲ್ಲ. ರಾಜಕೀಯವಾಗಿ ಕಣ್ಣೀರು ಸುರಿಸಿ ನಾಟಕ ಮಾಡಿದರು. ಸ್ವಾರ್ಥತನ ಮೆರೆದರು. ಲೋಕಸಭಾ ಚುನಾವಣೆಯಲ್ಲಿ ತಿರಸ್ಕಾರ ಮಾಡಿದ ರೀತಿಯಲ್ಲೇ ಮುಂಬರುವ ಚುನಾವಣೆಯಲ್ಲೂ ಸಂಪೂರ್ಣವಾಗಿ ತಿರಸ್ಕರಿಸುವಂತೆ ಸಲಹೆ ನೀಡಿದರು. ಕಾಂಗ್ರೆಸ್‌-ಜೆಡಿಎಸ್‌ ಜನರು ಮತ್ತು ಕಾರ್ಯಕರ್ತರ ಪಕ್ಷವಲ್ಲ. ಅವೆರಡೂ ಕುಟುಂಬಕ್ಕೆ ಸೀಮಿತವಾದ ಪಕ್ಷಗಳು. ಜಾತಿ ಜಾತಿಗಳ ನಡುವೆ ವೈಮನಸ್ಸು ಸೃಷ್ಟಿಸುವ ಹಾಗೂ ಅಭಿವೃದ್ಧಿಯನ್ನು ಮರೆತಿರುವ ಪಕ್ಷಗಳು. ಹಾಗಾಗಿ ಬಿಜೆಪಿಯನ್ನು ಬೆಂಬಲಿಸುವುದರೊಂದಿಗೆ ಮಹಾರಾಜರ ಕಾಲದ ಮಾದರಿಯಲ್ಲೇ ಜಿಲ್ಲೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಅವಕಾಶ ಮಾಡಿಕೊಡುವಂತೆ ಕೋರಿದರು.

ಜೆಡಿಎಸ್‌ನಿಂದ ಜಿಲ್ಲೆಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ: ಸಿ.ಪಿ.ಯೋಗೇಶ್ವರ್‌

ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಮಂಡ್ಯ ಜಿಲ್ಲೆಯೊಳಗೆ ಜೆಡಿಎಸ್‌ ಭದ್ರಕೋಟೆಯನ್ನು ಒಡೆದಾಗಿದೆ. ಇನ್ನು ಚೂರು ಚೂರು ಮಾಡುವುದಷ್ಟೇ ಬಾಕಿ ಇದೆ. ಮುಂಬರುವ ಚುನಾವಣೆಯಲ್ಲಿ ಮಂಡ್ಯದೊಳಗೆ ಬಿಜೆಪಿದ 4 ರಿಂದ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು. ಜೆಡಿಎಸ್‌ನವರ ಗೊಡ್ಡು ಬೆದರಿಕೆಗೆ ನಾನು ಹೆದರುವುದಿಲ್ಲ. ಕೆ.ಆರ್‌.ಪೇಟೆ ಉಪ ಚುನಾವಣೆ ವೇಳೆ ನನ್ನ ಮನೆಗೆ ಕಲ್ಲು ಹೊಡೆದರು, ಬೆಂಕಿ ಹಚ್ಚಿದರು. ಅವರ ಕಥೆ ಏನಾಯ್ತು. 2023ರ ಚುನಾವಣೆಯಲ್ಲಿ ಮಂಡ್ಯದಲ್ಲಿ ನಾಲ್ಕೈದು ಸ್ಥಾನ ಗೆದ್ದು ಜೆಡಿಎಸ್‌ನವರ ಮುಖಕ್ಕೆ ಮಸಿ ಬಳಿಯೋಣ ಎಂದರು.

ಚರ್ಚ್ ಸ್ಟ್ರೀಟ್‌ನಲ್ಲಿ Free Hug ಅಭಿಯಾನ: ಪೋಸ್ಟರ್ ಹಿಡಿದು ನಿಂತ ಯುವತಿ

ಬಿಜೆಪಿ ಸರ್ಕಾರ ಡಬಲ್‌ ಇಂಜಿನ್‌ ಸರ್ಕಾರ. ಮಂಡ್ಯ ಅಭಿವೃದ್ಧಿ ಆಗಿದ್ದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ. ಪಾಂಡವಪುರ ಹಾಗೂ ಮೈಷುಗರ್‌ ಕಾರ್ಖಾನೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು. ಆಗ ಕಾಂಗ್ರೆಸ್‌, ಜೆಡಿಎಸ್‌ನವರು ಎಲ್ಲಿದ್ದರು ಎಂದು ಪ್ರಶ್ನಿಸಿದ ನಾರಾಯಣಗೌಡ, ಸುಮ್ಮನೆ ಭದ್ರಕೋಟೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಜೆಡಿಎಸ್‌ ಶಾಸಕರು ರಾತ್ರಿ ಹೊತ್ತು ಮುಖ್ಯಮಂತ್ರಿಗಳ ಬಳಿಗೆ ಬಂದು ಅನುದಾನ ಬರೆಸಿಕೊಂಡು ಹೋಗುತ್ತಾರೆ. ನಂತರ ಬಿಜೆಪಿಯವರನ್ನೇ ಬೈಯ್ಯುತ್ತಾರೆ ಎಂದು ಮೂದಲಿಸಿದರು.

click me!