ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಇನ್ನೊಬ್ಬರು ಮುಖ್ಯಮಂತ್ರಿ ಆಗುವ ಬಗ್ಗೆ ಚರ್ಚೆ ಮಾಡೋದು ಅಪ್ರಸ್ತುತ, ಅನಾವಶ್ಯಕ, ಅನಗತ್ಯ ಎಂದು ಹೇಳಿದ ಸಚಿವ ದಿನೇಶ್ ಗುಂಡೂರಾವ್
ಬಾಗಲಕೋಟೆ(ಜೂ.29): ಒಬ್ಬ ಮುಖ್ಯಮಂತ್ರಿ ಇದ್ದಾಗ ಇನ್ನೊಬ್ಬರು ಆಗಬೇಕು ಎನ್ನುವುದು ಸರಿಯಲ್ಲ. ಅದು ಆಗಲೂಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಪಾದಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಇನ್ನೊಬ್ಬರು ಮುಖ್ಯಮಂತ್ರಿ ಆಗುವ ಬಗ್ಗೆ ಚರ್ಚೆ ಮಾಡೋದು ಅಪ್ರಸ್ತುತ, ಅನಾವಶ್ಯಕ, ಅನಗತ್ಯ ಎಂದು ಹೇಳಿದ್ದಾರೆ.
ನೀಟ್ ಬಗ್ಗೆ ಅಧ್ಯಯನ ಬೇಕೇ? ಬೇಡವೇ ಚರ್ಚೆಯಾಗಲಿ: ಸಚಿವ ದಿನೇಶ್ ಗುಂಡೂರಾವ್
ಸಿಎಂ ಅನ್ನು ಹೈಕಮಾಂಡ್ ಚರ್ಚಿಸಿಯೇ ಮಾಡುತ್ತದೆ. ಇದೆಲ್ಲಾ ಆಂತರಿಕ ವಿಚಾರ. ಬಹಿರಂಗ ಚರ್ಚೆ ಅನಗತ್ಯ. ವಿನಾ ಕಾರಣ ಚರ್ಚೆ ಆಗುತ್ತಿದೆ, ಆಗಬಾರದು. ಈ ಚರ್ಚೆಯಿಂದ ಯಾರಿಗೂ ಒಳ್ಳೆಯದಲ್ಲ. ನಮಗೂ, ಜನರಿಗೂ ಮತ್ತು ರಾಜ್ಯಕ್ಕೂ ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.