ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಖುಷಿಯಲ್ಲಿ ಸಚಿವ ಸಿ.ಟಿ. ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಇದೀಗ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಮಗಳೂರು, (ಸೆ.28): ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಚಿವ ಸಿ.ಟಿ.ರವಿ ದತ್ತ ಪಾದುಕೆ ದರ್ಶನ ಮಾಡಲು ಬಾಬಾಬುಡನ್ ಗಿರಿಯ ಸ್ವಾಮಿ ದರ್ಗಾಗೆ ತೆರಳಿದ್ದು, ದರ್ಗಾದಲ್ಲಿ ಫೋಟೊ ತೆಗೆಸಿಕೊಂಡು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆ ಇಂದು (ಸೋಮವಾರ) ಸಚಿವ ಸಿ.ಟಿ.ರವಿ ಅವರು ದತ್ತಪೀಠಕ್ಕೆ ತೆರಳಿದ್ದರು. ಇದೇ ವೇಳೆ ಅಲ್ಲಿ ಅವರ ಬೆಂಬಲಿಗರು, ಸಿಟಿ ರವಿ ಅವರು ನಮಸ್ಕಾರ ಮಾಡುತ್ತಿರುವ ಅವರ ಫೋಟೊವನ್ನು ಕ್ಲಿಕ್ಕಿ ಮಾಡಿದ್ದಾರೆ. ಸಚಿವರು ದರ್ಗಾದಲ್ಲಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಬಿಜೆಪಿಯಲ್ಲಿ ಬಿಗ್ ಚೇಂಜ್: ರಾಜ್ಯ ನಾಯಕರಿಗೆ ಹೈಕಮಾಂಡ್ ಭರ್ಜರಿ ಗಿಫ್ಟ್
ಸದ್ಯ ಇನಾಂ ದತ್ತಪೀಠದ ವಿಚಾರ ಕೋರ್ಟ್ ನಲ್ಲಿದ್ದು, ಯಾವುದೇ ಫೋಟೊ, ವಿಡಿಯೋ ಮಾಡದಂತೆ ಕೋರ್ಟ್ ಆದೇಶಿಸಿದೆ. ಆದರೆ, ಸಿ.ಟಿ.ರವಿ ದತ್ತಪೀಠದ ಒಳಗೆ ಇರುವ ಫೋಟೊ, ವಿಡಿಯೋ ತೆಗೆಸಿಕೊಂಡಿದ್ದು, ಆ ಫೋಟೊಗಳನ್ನು ವಾಟ್ಸಪ್ ಗ್ರೂಪನಲ್ಲಿ ಶೇರ್ ಮಾಡಿ, ನಂತರ ಅವರು ಅವೆಲ್ಲವನ್ನೂ ಡಿಲೀಟ್ ಮಾಡಿದ್ದಾರೆ. ಇದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.