ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು..!

By Suvarna NewsFirst Published Sep 28, 2020, 5:05 PM IST
Highlights

ಕಲಬುರಗಿ ಬಿಜೆಪಿ ಸಂಸದರ ಡಾ. ಉಮೇಶ ಜಾಧವ್ ಅವರು  ಜಯದೇವ ಆಸ್ಪತ್ರೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು/ಕಲಬುರಗಿ, (ಸೆ.28): ಕಲಬುರಗಿ ಬಿಜೆಪಿ ಸಂಸದರ ಡಾ. ಉಮೇಶ ಜಾಧವ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಇಂದು (ಸೋಮವಾರ) ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಚಿಕಿತ್ಸೆಗೆಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳಿದ್ದರು. ಆದ್ರೆ, ಆರೋಗ್ಯದಲ್ಲಿ ಏರುಪೇರು ಆದ ಹಿನ್ನಲೆಯಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಮಂಜುನಾಥ್ ನಿರ್ದೆಶನ ಮೇರೆಗೆ ಅಡ್ಮಿಟ್ ಆಗಿದ್ದಾರೆ.

ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು

ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಇಂದು (ಸೋಮವಾರ) ಬೆಳಿಗ್ಗೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಜಯದೇವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಆರೋಗ್ಯವನ್ನು ತಪಾಸಣೆಯನ್ನು ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜನಾಥ್ ಅವರು ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಸೂಚಿಸಿದ್ದು, ಅವರ ಸೂಚನೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾರೂ ಆತಂಕ ಪಡಬಾರದು ಎಂದಿದ್ದಾರೆ.

Due to mild chest pain felt this morning, visited , Bangalore & I have undergone some routine test under the supervision of Dr Manjunath CN, Director.

I am being advised to get admitted for further evaluation.

Nothing to worry, I will be fine soon.

— Dr. Umesh G Jadhav MPLS (@UmeshJadhav_BJP)

ಇತ್ತೀಚೆಗಷ್ಟೇ ಸಂಸದ ಉಮೇಶ್ ಜಾಧವ್ ಹಾಗೂ ಪುತ್ರ ಶಾಸಕ ಅವಿನಾಶ್ ಜಾಧವ್ ಸೇರಿದಂತೆ ಇತರೆ ಕುಟುಂಬದ ಸದಸ್ಯರುಗಳಿಗೆ ಕೊರೋನಾ ಸೋಂಕು ತಗುಲಿತ್ತು.

click me!