ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರು ಒಂದು ಮಾತಾಡಿದ್ರೆ, ಬಿಜೆಪಿ ನಾಯಕರು ಇನ್ನೊಂದು ಮಾತನಾಡುತ್ತಿದ್ದಾರೆ.
ಬೆಂಗಳೂರು, (ಆ.12): ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವ ಮೂಲಕ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಲಭೆಗೆ ಕಾರಣನಾದ ನವೀನ್ ಎಂಬಾತನಿಗೂ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೂ ಯಾವುದೇ ರಾಜಕೀಯ ಸಂಬಂಧ ಇರಲಿಲ್ಲ. ನವೀನ್ ಬಿಜೆಪಿ ಅಭಿಮಾನಿ, ಕಾರ್ಯಕರ್ತ ಎಂದು ಡಿ.ಕೆ. ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಆರೋಪಕ್ಕೆ ಸಿಡಿಮಿಡಿಗೊಂಡಿರುವ ಸಚಿವ ಸಿಟಿ ರವಿ ಅವರು ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಡಿಕೆ ಶಿವಕುಮಾರ್ ಮನೆ ದೇವರೇ ಸುಳ್ಳು. ಡಿಕೆಶಿಯದ್ದು ಭಂಡ ರಾಜಕೀಯ ಬದುಕು ಎಂದು ಕಿಡಿಕಾರಿದರು.
undefined
ಬೆಂಗಳೂರು ಗಲಭೆ: ಉತ್ತರ ಪ್ರದೇಶ ಮಾದರಿಯ ಕಾನೂನು ಜಾರಿ ತರುವಂತೆ ಸಿಎಂಗೊಂದು ಪತ್ರ
ಅವರ ಶಾಸಕರ ಮನೆ ಮೇಲೆ ದಾಳಿ ಮಾಡಿದವರ ಮೇಲೆ, ಆಸ್ತಿ ಪಾಸ್ತಿ ನಷ್ಟ ಮಾಡಿದವರ ವಿರುದ್ಧ ಡಿಕೆ ಶಿವಕುಮಾರ್ ಹೇಳಿಕೆ ಕೊಡ್ತಿಲ್ಲ. ರಾಜಕೀಯ ಬೂಟಾಟಿಕೆಯ ಹೇಳಿಕೆಗಳನ್ನು ಡಿಕೆಶಿ ನಿಲ್ಲಿಸಲಿ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ವಿಷಯಾಂತರ ಮಾಡ್ತಿದ್ದು, ಗಲಭೆ ಕೋರರ ಪರ ವಕಾಲತ್ತು ವಹಿಸುತ್ತಿದೆ. ನವೀನ್ ಪೋಸ್ಟ್‌ನ ಹಿನ್ನೆಲೆ, ಗಲಭೆ ಬಗ್ಗೆ ಸಮಗ್ರ ತನಿಖೆ ಆಗಲಿ. ಕಾಂಗ್ರೆಸ್‌ನವರು ತಮ್ಮ ಹೇಳಿಕೆಗಳ ಮೂಲಕವೇ ಆರೋಪಿಗಳ ಪರ ಬೇಲ್ ಅಪ್ಲಿಕೇಷನ್ ಹಾಕ್ತಿದಾರೆ ಎಂದರು.