Karnataka Politics: ನನ್ನನ್ನು ಮುಟ್ಟಿದ ಡಿಕೆಶಿಗೆ ಅಯ್ಯೋಪಾಪ ಎನ್ನುವ ಸ್ಥಿತಿ: ಅಶ್ವತ್ಥ

Published : May 14, 2022, 01:48 PM ISTUpdated : May 14, 2022, 01:58 PM IST
Karnataka Politics: ನನ್ನನ್ನು ಮುಟ್ಟಿದ ಡಿಕೆಶಿಗೆ ಅಯ್ಯೋಪಾಪ ಎನ್ನುವ ಸ್ಥಿತಿ: ಅಶ್ವತ್ಥ

ಸಾರಾಂಶ

*   ರಮ್ಯಾ ಟ್ವೀಟ್‌ನಿಂದ ಡಿಕೆಶಿಗೆ ಸಂಪೂರ್ಣ ಶೇಪ್‌ ಔಟ್‌ *  ಡಿಕೆಶಿ ವರ್ತನೆಯಿಂದ ಬೇಸತ್ತ ಸಾಕಷ್ಟು ಕಾಂಗ್ರೆಸ್‌ ನಾಯಕರು *  ಅಸಲಿಗೆ ಇದು ಕಾಂಗ್ರೆಸ್‌ನ ಆಂತರಿಕ ವಿಚಾರ

ಬೆಂಗಳೂರು(ಮೇ.14): ನನ್ನನ್ನು ಟಚ್‌ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ(DK Shivakumar) ಈಗ ಅಯ್ಯೋಪಾಪ ಎನ್ನುವ ಸ್ಥಿತಿ ಬಂದಿದೆ. ತನ್ನ ವಿರುದ್ಧ ಮಾತನಾಡೋರನ್ನೆಲ್ಲಾ ನಾಶಮಾಡುತ್ತೇನೆ ಎಂದು ಬಿಲ್ಡಪ್‌ ಕೊಡುತ್ತಿದ್ದ ಅವರೀಗ ತಮ್ಮದೇ ಪಕ್ಷದ ಒಬ್ಬ ಹೆಣ್ಣು ಮಗಳಿಂದ ಮುಜುಗರಕ್ಕೀಡಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(CN Ashwath Narayan) ಟಾಂಗ್‌ ನೀಡಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಅವರು ಆ ರೀತಿ ಮಾತನಾಡುವುದಿಲ್ಲ ಎಂದುಕೊಂಡಿದ್ದೇನೆ ಎಂದರು.

‘ಅಸಲಿಗೆ ಇದು ಕಾಂಗ್ರೆಸ್‌ನ(Congress) ಆಂತರಿಕ ವಿಚಾರ. ಆದರೂ ನನ್ನನ್ನು ಇದರಲ್ಲಿ ಸೇರಿಸಿ ಪ್ರಶ್ನಿಸುತ್ತಿರುವುದಕ್ಕೆ ಹೇಳುತ್ತಿದ್ದೇನೆ. ‘ರಮ್ಯಾ(Ramya) ಅವರ ಟ್ವೀಟ್‌ನಿಂದ ಡಿ.ಕೆ.ಶಿವಕುಮಾರ್‌ಗೆ ಸಂಪೂರ್ಣ ಶೇಪ್‌ ಔಟ್‌ ಆಗಿದೆ. ಡಿ.ಕೆ.ಶಿವಕುಮಾರ್‌ ರಾಂಗ್‌ ನಂಬರ್‌ಗೆ ಡಯಲ್‌ ಮಾಡಿದ್ದು ಅವರ ತಪ್ಪು. ನನ್ನನ್ನು ಮುಟ್ಟಿದ ಅವರಿಗೆ ಈಗ ಅಯ್ಯೋ ಪಾಪ ಎನ್ನುವ ಸ್ಥಿತಿ ಬಂದಿದೆ. ಏನೋ ಆಪಾದನೆ ಮಾಡಿ ದಾರಿ ತಪ್ಪಿಸಬೇಕೆಂದು ಹೊರಟವರಿಗೆ ಅವರ ಪಕ್ಷದವರೇ ಪಾಠ ಕಲಿಸಿದ್ದಾರೆ. ತಮ್ಮದೇ ಪಕ್ಷದ ಹೆಣ್ಣು ಮಗಳ ತೇಜೋವಧೆ ಮಾಡಿದರೆ ಏನಾಗುತ್ತದೆ ಎಂದು ಅವರಿಗೆ ಬಿಸಿ ಮುಟ್ಟಿದೆ. ವ್ಯಕ್ತಿಯ ಸ್ವಾತಂತ್ರ್ಯ ಪರಸ್ಪರ ಸ್ನೇಹ ಸಂಬಂಧ ಪ್ರಶ್ನಿಸುವ ಕೀಳುಮಟ್ಟಕ್ಕೆ ಇಳಿದ ಅವರ ಬಗ್ಗೆ ಯಾರಿಗೂ ಕನಿಕರ ಹುಟ್ಟಲು ಸಾಧ್ಯವಿಲ್ಲ. ರಮ್ಯಾ ಅವರ ಬಗ್ಗೆ ಅವರ ಹೇಳಿಕೆಯಿಂದ ಡಿ.ಕೆ.ಶಿವಕುಮಾರ್‌ ವ್ಯಕ್ತಿತ್ವ ಮನೋಭಾವದ ಎಂತಹದ್ದು ಎಂದು ಇಡೀ ಸಮಾಜಕ್ಕೆ ಅನಾವರಣವಾಗಿದೆ’ ಎಂದರು.

ರಮ್ಯಾ ರಾಜಕೀಯ ವಿಶ್ಲೇಷಣೆಯಿಂದ ದೂರ ಉಳಿಯಲಿ ಎಂದ MLC ಚನ್ನರಾಜ ಹಟ್ಟಿಹೊಳಿ

ಒಬ್ಬ ಹೆಣ್ಣು ಮಗಳ ತೇಜೋವಧೆ ಮಾಡಿದ ಡಿ.ಕೆ.ಶಿವಕುಮಾರ್‌ ವರ್ತನೆಯಿಂದ ಸಾಕಷ್ಟು ಕಾಂಗ್ರೆಸ್‌ ನಾಯಕರೂ ಬೇಸತ್ತಿದ್ದಾರೆ. ಇಂತಹವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರಲ್ಲ ಎಂದು ಮುಜುಗರ ಅನುಭವಿಸುತ್ತಿದ್ದಾರೆ. ಇದನ್ನು ಕೆಲವರು ಟ್ವೀಟ್‌(Tweet) ಮಾಡಿ ಅಸಮಾಧಾನವನ್ನೂ ಹೊರಹಾಕಿದ್ದಾರೆ’ ಎಂದು ಹೇಳಿದರು.

ನನ್ನ ಬಗ್ಗೆ ಮಾತನಾಡಿದ್ರೆ ಹುಷಾರ್‌: ಸಚಿವ ಅಶ್ವತ್ಥನಾರಾಯಣಗೆ ಎಚ್‌ಡಿಕೆ ಎಚ್ಚರಿಕೆ

ಬೆಂಗಳೂರು: ‘ಪ್ರಾಧ್ಯಾಪಕರ ನೇಮಕಾತಿಯಲ್ಲಿ 450 ಕೋಟಿ ರು. ಅಕ್ರಮವಾಗಿದೆ(Professor Recruitment Scam). ನೀವು ನನ್ನ ಬಗ್ಗೆ ಮಾತನಾಡಿದರೆ ಹುಷಾರ್‌. ನನ್ನ ಬಳಿ ಇರುವ ದಾಖಲೆಗಳು ನಿಮ್ಮ ಬಳಿಯೂ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಎಚ್ಚರಿಕೆ ನೀಡಿದ್ದರು.   ಅಲ್ಲದೆ, ನಿಮಗೆ ತಾಕತ್ತು ಇದ್ದರೆ ನನ್ನ ವಿರುದ್ಧದ ದಾಖಲೆ ಬಿಡುಗಡೆ ಮಾಡಿ ಎಂದೂ ಅವರು ನೇರ ಸವಾಲು ಹಾಕಿದ್ದರು. 

ಮೇ.12 ರಂದು ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನತಾ ಜಲಧಾರೆ(Janata Jaladhare) ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಅವುಗಳನ್ನು ಬಿಡುಗಡೆ ಮಾಡಲಿ. ನಾನು ಅವರ ರೀತಿ ಲೂಟಿ ಹೊಡೆದಿಲ್ಲ. ಲೂಟಿ ಮಾಡುತ್ತಿರುವವರು ಅವರು ಎಂದು ಏರಿದ ಧ್ವನಿಯಲ್ಲಿ ಹೇಳಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ