ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ: ಸಿದ್ದು ವಿರುದ್ಧ ಸಚಿವ ಬೈರತಿ ಗರಂ

By Govindaraj SFirst Published Jan 25, 2023, 9:30 PM IST
Highlights

ನಾನು ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ. ಸ್ವಾಭಿಮಾನಕ್ಕೋಸ್ಕರ ನಾವು ಪಕ್ಷ ಬಿಟ್ಟಿದ್ದೇವು. ಸಿದ್ದರಾಮಯ್ಯನವರು ಬರಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಿದ್ದು ವಿರುದ್ಧ ದಾವಣಗೆರೆಯಲ್ಲಿ ಗರಂ ಆಗಿದ್ದಾರೆ. 

ದಾವಣಗೆರೆ (ಜ.25): ನಾನು ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ. ಸ್ವಾಭಿಮಾನಕ್ಕೋಸ್ಕರ ನಾವು ಪಕ್ಷ ಬಿಟ್ಟಿದ್ದೇವು. ಸಿದ್ದರಾಮಯ್ಯನವರು ಬರಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಿದ್ದು ವಿರುದ್ಧ ದಾವಣಗೆರೆಯಲ್ಲಿ ಗರಂ ಆಗಿದ್ದಾರೆ. ನಾನು ದುಡ್ಡು ತೆಗೆದುಕೊಂಡಿರುವುದನ್ನು ಪ್ರೂವ್ ಮಾಡಲಿ. ಪ್ರೂವ್ ಮಾಡಿದ್ರೆ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೇನೆ. ನಾನು ಬೇಕಾದ್ರೆ ಧರ್ಮಸ್ಥಳಕ್ಕೆ ಬರುತ್ತೇನೆ. ದೇವರು ಮುಟ್ಟಿ ಪ್ರಮಾಣ ಮಾಡುತ್ತೇನೆ ಅವರು ಮುಟ್ಟಿ ಪ್ರಮಾಣ ಮಾಡಲಿ, ಅವರು ಎಲ್ಲಿಗೆ ಕರೆತಿರೋ ಅಲ್ಲಿಗೆ ಹೋಗೋಕೆ ರೆಡಿ ಇದ್ದೇನೆ ಎಂದರು.

ನಾನು ದುಡ್ಡು ತಗೊಂಡಿದ್ದರೆಂದು ಹೇಳುತ್ತಿದ್ದಾರೆ ಅವರು ಪ್ರೂ ಮಾಡಲಿ. ಇಲ್ಲ ಅಂದ್ರೆ ಅವರೆಲ್ಲಾ ಹೇಳುವುದು ಸುಳ್ಳು ಎಂದು ಪರೋಕ್ಷವಾಗಿ ಸಿದ್ದರಾಮಯ್ಯನಿಗೆ ಟಾಂಗ್ ನೀಡಿದರು. ನಲವತ್ತು ಪರ್ಸೆಂಟ್ ಅಂತಾ ಹೇಳಿದವರೆಲ್ಲಾ ಬೇಲ್ ಮೇಲೆ ಇದ್ದಾರೆ. ಅವರ ಬಳಿ ದಾಖಲೆ ಇದ್ದರೆ ಕೋರ್ಟ್ ಸಲ್ಲಿಸಲಿ ಎಂದು ಸವಾಲ್ ಹಾಕಿದರು. ನಮ್ಮ 70 ಜನ ಶಾಸಕರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣಾ ಬೇಡ ಎಂದು ಸಹಿ ಹಾಕಿರುವುದು ಗೊತ್ತಿಲ್ಲ. ಸಾಮೂಹಿಕವಾಗಿ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ.  ರಾಜ್ಯದ ಹಿರಿಯ ನಾಯಕರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಬೈರತಿ ಬಸವರಾಜ್ ತಿಳಿಸಿದರು.

ಬೊಮ್ಮಾಯಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ, ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಲ್ಲ: ರಣದೀಪ್ ಸುರ್ಜೇವಾಲ

ದಾಹಮುಕ್ತ ಕರ್ನಾಟಕ ಸರ್ಕಾರದ ಗುರಿ: ನಮ್ಮ ಸರ್ಕಾರ 9 ಸಾವಿರ ಕೋಟಿ ರುಪಾಯಿಗಳನ್ನು ಅಭಿವೃದ್ಧಿಗಾಗಿ ಇಟ್ಟಿದೆ. ಸರ್ಕಾರದ ಸಂಕಲ್ಪ ದಾಹಮುಕ್ತ ಕರ್ನಾಟಕ ಮಾಡಬೇಕೆಂಬುದು. ಮುಂದಿನ ಎರಡು ಮೂರು ತಿಂಗಳಲ್ಲಿ ಅದನ್ನು ಕಾರ್ಯಗತ ಗೊಳಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ತಿಳಿಸಿದರು. ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ನಗರಾಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯದಲ್ಲಿ ಪೂರಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ ಎಂದರು.

ದತ್ತಪೀಠದ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ಶಾಸಕ ಟಿ.ಡಿ.ರಾಜೇಗೌಡ

ಕುಕ್ಕೆಗೆ ಸಮಗ್ರ ಒಳಚರಂಡಿ: ನಮ್ಮ ಸರ್ಕಾರ ಧರ್ಮಸ್ಥಳಕ್ಕೆ 25 ಕೋಟಿ ರು. ಅನುದಾನವನ್ನು ಕುಡಿಯುವ ನೀರಿನ ಯೋಜನೆಗೆ ನೀಡಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೂ ಒಳಚರಂಡಿ ವ್ಯವಸ್ಥೆ ಬೇಕು ಎಂದು ಸಚಿವ ಎಸ್‌. ಅಂಗಾರ ಅವರು ಕೇಳಿಕೊಂಡಿದ್ದಾರೆ. ಮುಂದಿನ ಒಂದುವರೆ ತಿಂಗಳೊಳಗೆ ಕುಕ್ಕೆಗೆ ಬೇಕಾಗಿರುವ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡುವ ಭರವಸೆ ನೀಡಿದ ಭೈರತಿ ಬಸವರಾಜ್‌, ಅನುದಾನ ಬಿಡುಗಡೆಗೊಂಡಿದೆ ಈ ಬಗ್ಗೆ ವರದಿ ತರಿಸಿ ಯೋಜನೆ ರೂಪಿಸಲಾಗುವುದು ಎಂದರು. ಮಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು.

click me!