ರಾಜ್ಯದಲ್ಲಿ ಬಹಳ ದುರ್ಬಲ ಮುಖ್ಯಮಂತ್ರಿ ಇದ್ದಾರೆ. ಗೃಹ ಮಂತ್ರಿ ಕೂಡ ದುರ್ಬಲವಾಗಿದ್ದು, ಕಾನೂನು ಸುವ್ಯವಸ್ಥೆ ಪಾಲಿಸಲು ಗೊತ್ತಿಲ್ಲ. ಬಿಜೆಪಿ ಮುಂದಿನ ಚುನಾವಣೆ ಸೋಲುವುದು ಪಕ್ಕಾ ಎಂದು ಮಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಮಂಗಳೂರು (ಜ.25): ರಾಜ್ಯದಲ್ಲಿ ಬಹಳ ದುರ್ಬಲ ಮುಖ್ಯಮಂತ್ರಿ ಇದ್ದಾರೆ. ಗೃಹ ಮಂತ್ರಿ ಕೂಡ ದುರ್ಬಲವಾಗಿದ್ದು, ಕಾನೂನು ಸುವ್ಯವಸ್ಥೆ ಪಾಲಿಸಲು ಗೊತ್ತಿಲ್ಲ. ಬಿಜೆಪಿ ಮುಂದಿನ ಚುನಾವಣೆ ಸೋಲುವುದು ಪಕ್ಕಾ ಎಂದು ಮಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಮತದಾರರನ್ನ ಆರು ಸಾವಿರ ರೂ. ಖರೀದಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಮತದಾರರನ್ನು ಅವಮಾನಿಸುವ ಮತ್ತು ಮತದಾರನ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡ್ತಿದೆ.
ರಾಷ್ಟ್ರೀಯ ಮತದಾರರ ದಿನದಂದೇ ಅವಮಾನ ಮಾಡಿದ್ದಾರೆ. ಈ ಆರು ಸಾವಿರ ಪ್ರತೀ ಮತದಾರರಿಗೆ ಕೊಡಲು ಹಣ ಎಲ್ಲಿಂದ ಬರಬೇಕು? ಇದೆಲ್ಲಾ 40% ಕಮಿಷನ್‌ನಿಂದ ಬರೋ ಆದಾಯದಲ್ಲಿ ಬರ್ತಿದೆ. ತಕ್ಷಣ ಜೆ.ಪಿ.ನಡ್ಡಾ, ನಳಿನ್ ಕುಮಾರ್, ರಮೇಶ್ ಜಾರಕಿಹೊಳಿ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿ ಮತದಾರರಿಗೆ ಹಣ ಕೊಡಲು ಹಣ ಎಲ್ಲಿಂದ ಬರುತ್ತೆ ಅಂತ ಐಟಿ, ಇಡಿ ತನಿಖೆ ನಡೆಸಲಿ. ಭಾರತ್ ಜೋಡೋ ಯಾತ್ರಾ ಬಿಜೆಪಿ ಅಥವಾ ಯಾರ ವಿರುದ್ದವೂ ಅಲ್ಲ. ಇದೊಂದು ಜನಾಂದೋಲನ, ಭಾರತದ ಜನರ ಜೊತೆಗಿನ ನಡಿಗೆ ಎಂದರು.
ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್!
ಪ್ರಜಾಧ್ವನಿ ಮಾದರಿಯಲ್ಲೇ ಕರಾವಳಿ ಧ್ವನಿ ಯಾತ್ರೆಗೆ ಕಾಂಗ್ರೆಸ್ ನಿರ್ಧಾರ: ಪ್ರಜಾಧ್ವನಿ ಮಾದರಿಯಲ್ಲೇ ಕರಾವಳಿ ಧ್ವನಿ ಯಾತ್ರೆಗೆ ಕಾಂಗ್ರೆಸ್ ಸಭೆಯಲ್ಲಿ ನಿರ್ಧಾರ ಮಾಡಿದ್ದು, ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಛೇರಿ ಬಳಿಯ ಖಾಸಗಿ ಸಭಾಂಗಣದಲ್ಲಿ ಸಭೆ ನಡೆದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆದಿದ್ದು, ಕರಾವಳಿಯಲ್ಲಿ ಫೆ.5 ರಿಂದ ಫೆ.9ರವರೆಗೆ ಮೊದಲ ಸುತ್ತಿನ ಕರಾವಳಿಧ್ವನಿ ಯಾತ್ರೆ ಆರಂಭವಾಗಲಿದೆ. ಎರಡನೇ ಸುತ್ತು ಫೆ. 16 ರಿಂದ ಮಾರ್ಚ್ 10 ರವರೆಗೆ ಎಲ್ಲಾ ಕಡೆ ಸಂಚಾರ ಮಾಡಲಿದೆ.
ಬಿಜೆಪಿ ಕೋಮು ವಿಚಾರಗಳಲ್ಲಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ: ಪ್ರಜಾಧ್ವನಿ ಯಾತ್ರೆ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಈಗಾಗಲೇ ನಡೀತಾ ಇದೆ. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿ ಕರಾವಳಿ ಧ್ವನಿ ಯಾತ್ರೆ ನಡೆಯಲಿದೆ. ಫೆ.5 ರಿಂದ 9 ರವರೆಗೆ ಮೊದಲ ಹಂತದ ಕರಾವಳಿ ಧ್ವನಿ ಯಾತ್ರೆ ನಡೆಯಲಿದೆ. ಎರಡನೇ ಸುತ್ತು ಫೆ. 16 ರಿಂದ ಮಾರ್ಚ್ 10 ರವರೆಗೆ ಎಲ್ಲಾ ಕಡೆ ಸಂಚಾರ ಮಾಡಲಿದೆ. ಕರಾವಳಿ ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ. ಕರಾವಳಿ ಭಾಗದ ಜನರ ಸಮಸ್ಯೆ ಮತ್ತು ಭಾವನೆ ಅರಿಯಲು ಪ್ರತೀ ಕ್ಷೇತ್ರದಲ್ಲಿ ಕರಾವಳಿ ಧ್ವನಿ ಯಾತ್ರೆ ಎಂದು ರಣದೀಪ್ ಸುರ್ಜೇವಾಲ ತಿಳಿಸಿದರು.
ಬಿಜೆಪಿ ಕೋಮು ವಿಚಾರಗಳಲ್ಲಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಇದನ್ನೇ ಅವರು ಮಾಡಿದರು. ಆದರೆ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಬಳಿಕ ಸತ್ಯ ಗೊತ್ತಾಗಿದೆ. ಆದರೆ ಈಗ ಮೋದಿ, ಅಮಿತ್ ಶಾ, ನಳಿನ್ ಯಾರೂ ಮಾತನಾಡುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಇಂಥಹ ವಿಷಯಗಳ ಮೂಲಕವೇ ಅವರು ಯಶಸ್ವಿಯಾದರು. ಬಸವರಾಜ ಬೊಮ್ಮಾಯಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ. ಇಡೀ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇಲ್ಲಿನ ಅಭಿವೃದ್ಧಿಯಲ್ಲಿ ವಿಫಲವಾಗಿದೆ.
ಹೀಗಾಗಿ ಕರಾವಳಿ ಅಭಿವೃದ್ಧಿ ಅಥಾರಿಟಿಯನ್ನ ನಾವು ಜಾರಿಗೆ ತರ್ತೇವೆ.2500 ಕೋಟಿ ರೂ.ಅನುದಾನ ನೀಡುವ ಮೂಲಕ ಅಭಿವೃದ್ಧಿ ಮಾಡುತ್ತೇವೆ. ಮೊಗವೀರರಿಗೆ 10 ಲಕ್ಷ ರೂ. ಗಳ ಇನ್ಸೂರೆನ್ಸ್ , ಮಹಿಳಾ ಮೀನುಗಾರರಿಗೆ 1 ಲಕ್ಷ ವರೆಗೆ ಬಡ್ಡಿ ರಹಿತ ಸಾಲ, ಬೋಟ್ ಖರೀದಿಗೆ 25 ಲಕ್ಷದವರೆಗೆ ಶೇ.25 ಸಬ್ಸಿಡಿ, ಬಿಲ್ಲವ, ನಾಮಧಾರಿ, ಈಡಿಗ ಸಮುದಾಯದ ಅಭಿವೃದ್ಧಿಗೆ ನಾರಾಯಣಗುರು ಡೆವಲಪ್ಮೆಂಟ್ ಬೋರ್ಡ್ ಸ್ಥಾಪನೆ. ಇದಕ್ಕೆ 5 ವರ್ಷದಲ್ಲಿ 1,250 ಕೋಟಿ ರೂ. ಮೊದಲ ಹಂತದ ಅನುದಾನ ನೀಡಲಾಗುವುದು ಎಂದರು.
ಬಿಜೆಪಿ ಎಂಬ ಬುಲ್ಡೋಜರ್ ಕಾಂಗ್ರೆಸನ್ನು ನೆಲಸಮ ಮಾಡಲಿದೆ: ಸಚಿವ ಶ್ರೀರಾಮುಲು
ವಿದ್ಯುತ್ ಬಿಲ್ ನಲ್ಲಿ 200 ಯುನಿಟ್ ಉಚಿತ ಘೋಷಣೆ ಬಿಪಿಎಲ್ ಮತ್ತು ಎಪಿಎಲ್ ಎರಡಕ್ಕೂ ಅನ್ವಯ. ಕರಾವಳಿ ಧ್ವನಿ ಯಾತ್ರೆಯನ್ನು ಬಿ.ಕೆ.ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ಖಾದರ್ ಸೇರಿ ಕರಾವಳಿಯ ಹಲವು ನಾಯಕರು ಲೀಡ್ ಮಾಡ್ತಾರೆ. ಪ್ರತೀ ದಿನ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಈ ಯಾತ್ರೆ ಸಾಗಲಿದೆ. ಕಳೆದ ಬಾರಿ ಕರಾವಳಿಯಲ್ಲಿ ಎಲ್ಲಾ ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ಈ ಬಾರಿ ಜನ ಬಿಜೆಪಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಕರಾವಳಿ, ಮಲೆನಾಡಿನಾದ್ಯಾಂತ ಬಿಜೆಪಿ ಕೋಮು ಆಧಾರಿತ ಮತ ವಿಭಜನೆಗೆ ಪ್ರಯತ್ನ ಮಾಡಿತ್ತು. ಕರಾವಳಿಯಲ್ಲಿ ಉದ್ಯೋಗಸೃಷ್ಠಿ ಮಾಡಲು ಸರ್ಕಾರ ವಿಫಲವಾಗಿದೆ. ಕರಾವಳಿಯ ಯುವಕರು ಕೆಲಸಕ್ಕಾಗಿ ಬೆಂಗಳೂರು, ಹೈದರಾಬಾದ್, ದೆಹಲಿ ಭಾಗಗಳಿಗೆ ತೆರಳುವಂತಾಗಿದೆ. ಶಿರಾಡಿಘಾಟ್ ರಸ್ತೆ ಅವ್ಯವಸ್ಥೆ ಸರ್ಕಾರದ ನಿರ್ಲಕ್ಷ್ಯ ವನ್ನು ಪ್ರತಿಬಿಂಬಿಸಿದೆ ಎಂದು ಸುರ್ಜೇವಾಲ ಹೇಳಿದರು.