ಸನಾತನ ಧರ್ಮ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಅದು ಕಾಂಗ್ರೆಸ್ ಹೇಳಿಕೆ ಅಲ್ಲ, ಇಂಡಿಯಾ ಒಕ್ಕೂಟದಲ್ಲಿ ಹಲವಾರು ಪಕ್ಷಗಳಿವೆ. ಎಲ್ಲರ ಹೇಳಿಕೆಗೆ ನಾವು ಉತ್ತರಿಸಲು ಆಗುವುದಿಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಮಾತ್ರ ನಾವು ಪ್ರತಿಕ್ರಿಯೆ ಕೊಡಬಹುದು: ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಸುರೇಶ
ಕಲಬುರಗಿ(ಸೆ.09): ಬಿಜೆಪಿ, ಜೆಡಿಎಸ್ ಮೊದಲಿನಿಂದಲೂ ಒಂದೇ ಇದ್ದಾರೆ, ಹೀಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ನಮಗೆ ಯಾವುದೇ ತೊಂದರೆ ಇಲ್ಲ, ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬಿರೋದಿಲ್ಲವೆಂದು ನಗರಾಭಿವೃದ್ಧಿ ಖಾತೆ ಸಚಿವ ಬೈರತಿ ಸುರೇಶ ಹೇಳಿದರು. ಕಲಬುರಗಿ ಪ್ರವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ನಾವು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.
ಈಗ ನಿಜವಾಗಿಯೂ ಯಾವುದು ಜಾತ್ಯತೀತ, ಯಾವುದು ಜಾತಿವಾದಿ ಪಕ್ಷ ಅನ್ನೋದು ಜನರಿಗೆ ಗೊತ್ತಾಗುತ್ತದೆ. ಹೈಕಮಾಂಡ್ ಹೇಳಿದಂತೆ ಲೋಕಸಭೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 20ಕ್ಕೂ ಹೆಚ್ಚು ಸ್ಥಾನ ಸ್ಥಾನ ಗೆಲ್ಲುತ್ತೇವೆ ಎಂದರು.
ತಮಿಳುನಾಡು ಸಿಎಂ ಸ್ಟಾಲಿನ್ ಸನಾತನ ಧರ್ಮ ಹೇಳಿಕೆ ವಿಚಾರದಲ್ಲಿ ಸ್ಪಂದಿಸಿದ ಅವರು, ಸನಾತನ ಧರ್ಮ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಅದು ಕಾಂಗ್ರೆಸ್ ಹೇಳಿಕೆ ಅಲ್ಲ, ಇಂಡಿಯಾ ಒಕ್ಕೂಟದಲ್ಲಿ ಹಲವಾರು ಪಕ್ಷಗಳಿವೆ. ಎಲ್ಲರ ಹೇಳಿಕೆಗೆ ನಾವು ಉತ್ತರಿಸಲು ಆಗುವುದಿಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಮಾತ್ರ ನಾವು ಪ್ರತಿಕ್ರಿಯೆ ಕೊಡಬಹುದು ಎಂದರು.
undefined
ಉದಯನಿಧಿ ಹೇಳಿಕೆ: ಕಾಂಗ್ರೆಸ್ ತನ್ನ ನಿಲುವು ಬಹಿರಂಗ ಪಡಿಸಲಿ, ಖರ್ಗೆ ವಿರುದ್ಧ ಬಿಜೆಪಿ ವಾಗ್ದಾಳಿ
ಉತ್ತರಪ್ರದೇಶದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬಗ್ಗೆಯೂ ಗಮನ ಸೆಳೆದಾಗ ಪ್ರಿಯಾಂಕ ಖರ್ಗೆ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಅವರಿಗೆ ವಾಕ್ ಸ್ವಾತಂತ್ರ ಇದೆ. ಕರ್ನಾಟಕದಲ್ಲಿಯೇ ಎಫ್‌ಐಆರ್ ಮಾಡ್ಬೇಕಿತ್ತು. ಬಿಜೆಪಿ ಸರ್ಕಾರ ಇರೋ ರಾಜ್ಯದಲ್ಲಿ ಎಫ್ಐಆರ್ ಮಾಡಲಾಗಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದರು.