ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಹಗರಣವೇ ಆಗಿಲ್ಲ. ಹಾಗಿದ್ದ ಮೇಲೆ ಹಗರಣ ಹೇಗೆ ಆಚೆಗೆ ಬರಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದರು.
ಚಾಮರಾಜನಗರ (ಜು.06): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಹಗರಣವೇ ಆಗಿಲ್ಲ. ಹಾಗಿದ್ದ ಮೇಲೆ ಹಗರಣ ಹೇಗೆ ಆಚೆಗೆ ಬರಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದರು. ಮುಡಾ ಹಗರಣ ಕಾಂಗ್ರೆಸ್ಸಿಗರಿಂದ ಹೊರಗೆ ಬಂದಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿ ನಗರದಲ್ಲಿ ಶುಕ್ರವಾರ ಮಾತನಾಡಿ, ಮುಡಾದಲ್ಲಿ ಯಾವುದೇ ಹಗರಣವಾಗಿಲ್ಲ.
ಮುಡಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಸಂಬಂಧವಿಲ್ಲ, ಸೈಟ್ ಹಂಚಿಕೆ ವಿಚಾರ ಈಗ ತನಿಖಾ ಹಂತದಲ್ಲಿದೆ ಎಂದರು. ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಹಗರಣ ಆಗಿದೆ ಎಂದು ಈವರೆಗೆ ಸಾಬೀತೇ ಆಗಿಲ್ಲ, ಹಾಗಿದ್ದಾಗ ತನಿಖೆಯನ್ನು ಸಿಬಿಐಗೆ ಏಕೆ ಕೊಡಬೇಕು? ನಮ್ಮ ರಾಜ್ಯದಲ್ಲಿ ಪೊಲೀಸರು ಇಲ್ವಾ? ಬಿಜೆಪಿಯವರು ಸಿಬಿಐಗೆ ಕೊಟ್ಟು ಏನು ಮಹಾ ಮಾಡಿದ್ದಾರೆ, ಅವರು ಎಷ್ಟು ಕೇಸ್ ಸಿಬಿಐಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾದ್ರೂ ಜೆಡಿಎಸ್ ಬೆಂಬಲ!
ಆರೋಪ ಕುರಿತು ಇಬ್ಬರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೈತರಿಗೆ ಕೊಟ್ಟಿದ್ದಾರೋ, ಇಲ್ವೋ ಎಂಬುದು ಪ್ರಶ್ನೆ. ಇನ್ನು ನಾಲ್ಕು ವಾರಗಳ ಸಮಯವಿದೆ. ಬಿಜೆಪಿ-ಜೆಡಿಎಸ್ ಹೇಳಿದಂತೆ ಕೇಳಲು ಆಗಲ್ಲ ಎಂದರು. ರಾಮನಗರವನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕಮಾರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಿದ್ದಾರೆ, ಅವರು ನಿರ್ಧಾರ ತೆಗೆದುಕೊಂಡ ಬಳಿಕ ಚರ್ಚೆ ನಡೆಸುತ್ತೇವೆ ಎಂದರು. ಜತೆಗೆ ಕಾಂಗ್ರೆಸ್‌ನಲ್ಲಿ ಯಾವುದೇ ಬಣ ರಾಜಕೀಯ ಇಲ್ಲ, ಇರುವುದು ಒಂದೇ ಬಣ ಅದು ಕಾಂಗ್ರೆಸ್ ಬಣ ಎಂದರು.