ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಭರವಸೆಗಳನ್ನು ಈಡೇರಿಸುತ್ತಿರುವುದನ್ನು ಕಂಡು ಬಿಜೆಪಿಯವರು ನಿದ್ರೆಗೆಡಿಸಿಕೊಂಡು ಒದ್ದಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಲೇವಡಿ ಮಾಡಿದರು.
ಹೊಳೆನರಸೀಪುರ (ಸೆ.02): ಬಿಜೆಪಿಯವರು, ಸಿದ್ದರಾಮಯ್ಯನವರು ಭರವಸೆಗಳನ್ನು ಈಡೇರಿಸಲು 60 ಸಾವಿರ ಕೋಟಿ ಬೇಕು ಎಲ್ಲಿಂದ ತರ್ತಾರೆ ಎಂದುಕೊಂಡಿದ್ದರು. ಸಿದ್ದರಾಮಯ್ಯನವರು ಚುನಾವಣೆಗೆ ಮುನ್ನ 5 ಭರವಸೆಗಳನ್ನು ನೀಡಿದ್ದರು. ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಭರವಸೆಗಳನ್ನು ಈಡೇರಿಸುತ್ತಿರುವುದನ್ನು ಕಂಡು ಬಿಜೆಪಿಯವರು ನಿದ್ರೆಗೆಡಿಸಿಕೊಂಡು ಒದ್ದಾಡುತ್ತಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಲೇವಡಿ ಮಾಡಿದರು.
ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಗೋಳಿ ರಾಯಣ್ಣ ಪುತ್ಥಳಿ ಅನಾವರಣ ಗೊಳಿಸಿ, ಆಗ್ರಹಾರಗೇಟ್‌ನಲ್ಲಿ ಆಯೋಜನೆ ಮಾಡಿದ ವೇದಿಕೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಅಕ್ಕಿ ನೀಡದಂತೆ ಮಾಡಿದರು. ಬಿಜೆಪಿ ಶಾಸಕರು ತೆಗೆದುಕೊಳ್ಳುತ್ತಿದ್ದ 40 ಪರ್ಸೆಂಟ್ ಕಮಿಷನ್ ತಡೆದು, ನೀಡಿದ್ದ 5 ಭರವಸೆಗಳಲ್ಲಿ ನಾಲ್ಕು ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ನೀಡದ ಕಾರಣ ಖಾತೆದಾರರ ಖಾತೆಗೆ ನೇರ ಹಣ ಕಳುಹಿಸುವ ಮೂಲಕ ಜನಮನ ಗೆದ್ದಿದ್ದಾರೆ ಎಂದರು.
undefined
ಶಿಕ್ಷಣ ಸಚಿವರೇ ಇತ್ತ ನೋಡಿ: 153 ಮಕ್ಕಳಿರುವ ಶಾಲೆಗೆ ಒಬ್ಬನೇ ಶಿಕ್ಷಕ..!
ಮುಂದಿನ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ ನಾಯಕ ಶ್ರೇಯಶ್ ಪಟೇಲ್ ಅವರನ್ನು ಗೆಲ್ಲಿಸಿ. ನಿಮ್ಮ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಆಗುತ್ತದೆ ಎಂದರು. ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣ ಮತ್ತು ರಾಜಕೀಯ ಶಕ್ತಿಯಿಂದ ಮಾತ್ರ ಬೆಳೆಯಲು ಸಾಧ್ಯ. ಎಲ್ಲ ಹಿಂದುಳಿದ, ದಲಿತ, ದುರ್ಬಲ, ಅಲ್ಪಸಂಖ್ಯಾತರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ರಾಜಕೀಯ ಶಕ್ತಿ ಪಡೆಯಲು ಸಂಘಟಿತರಾಗಿರಿ. ರಾಜಕೀಯ ಶಕ್ತಿಯಿಂದ ಎಲ್ಲ ವರ್ಗದ ಜನರಿಗೆ ಸಹಾಯ ಮಾಡಬಹುದು ಎಂದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಾತನಾಡಿ, ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿ ಆಗಿ ಚುನಾವಣೆ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸಿ ರಾಷ್ಟ್ರದಲ್ಲಿರುವ 12 ಕೋಟಿ ಕುರುಬರ ನಾಯಕ ಎನಿಸಿಕೊಂಡಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ, ಕಾಗಿನೆಲೆ ಪ್ರಾಕಾರ ಸ್ಥಾಪಿಸಿ ಎಲ್ಲ ಹಿಂದುಳಿದ ವರ್ಗಗಳ ಜನರಿಗೆ ಸಹಾಯ ಮಾಡಿದ್ದಾರೆ. ರಾಜ್ಯದ ಎಲ್ಲ ಹಿಂದುಳಿದ ಜನರು ಸಿದ್ದರಾಮಯ್ಯ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ ಎಂದರು.
ತಾಲೂಕು ಕಾಂಗ್ರೆಸ್ ಮುಖಂಡ ಶ್ರೇಯಶ್ ಪಟೇಲ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಕೆ.ಆರ್. ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಅಣತಿ ಶಾಖಾ ಮಠದ ಶಾಂತಕುಮಾರ ಓಡೆಯರ್ ಸ್ವಾಮೀಜಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ, ದಿವಾಕರಗೌಡ, ಅರಕಲಗೂಡು ಪ್ರಸನ್ನ ಇದ್ದರು.
ಪೈಪೋಟಿಯ ನಡುವೆ ಸಿದ್ಧರಾಮಯ್ಯ ಸಿಎಂ ಆದರು: 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ಆಡಳಿತದಲ್ಲಿ ಅತ್ಯಂತ ನಿಪುಣರು ಹಾಗೂ ದಕ್ಷರು. ಸದಾ ಕಾಲ ಹಿಂದುಳಿದವರ, ದಲಿತರ, ದುರ್ಬಲರ, ಅಲ್ಪಸಂಖ್ಯಾತರ ಏಳಿಗೆ ಬಗ್ಗೆಯೇ ಚಿಂತಿಸುವ ಸಿದ್ದರಾಮಯ್ಯನವರನ್ನು ಹಿಂದುಳಿದ ವರ್ಗಗಳ ನಾಯಕ ಎಂದು ಜನ ಒಪ್ಪಿಕೊಂಡಿರುವುದು ಕೇಂದ್ರ ನಾಯಕರಿಗೆ ಅರ್ಥ ಆಗಿರುವುದರಿಂದ, ಅತ್ಯಂತ ಪ್ರಭಾವಿ ಆಕಾಂಕ್ಷಿಗಳು ಮುಖ್ಯಮಂತ್ರಿ ಗಾದಿಗೆ ಪ್ರಬಲ ಪೈಪೋಟಿ ನೀಡಿದ್ದರೂ ಸಿದ್ದರಾಮಯ್ಯ ಅವರನ್ನೇ ಕೇಂದ್ರದ ನಾಯಕರು ಮತ್ತೆ ಮುಖ್ಯಮಂತ್ರಿ ಮಾಡಿದರು ಎಂದರು.
ಉಪೇಂದ್ರ ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು: ಧಿಕ್ಕಾರ ಕೂಗುವ ಮೂಲಕ ಆಕ್ರೋಶ
ಸಮಾಜವಾದಿ ನೀತಿ ಅಡಿ ಗೆಲುವು: ಬಿಜೆಪಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಬಡತನ, ನಿರುದ್ಯೋಗ ನಿರ್ಮೂಲನೆ ಆಗಲಿಲ್ಲ. ಬಿಜೆಪಿ ಅಂಬಾನಿ, ಅದಾನಿಗೆ ಮಾತ್ರ ಅನುಕೂಲ ಮಾಡಿದ್ದಾರೆ. ಬಿಜೆಪಿ ಧರ್ಮ, ಧರ್ಮಗಳ ನಡುವೆ ದ್ವೇಷ ಬಿತ್ತಿ ಅಧಿಕಾರ ಹಿಡಿಯುವ ಯತ್ನದಲ್ಲಿದ್ದಾರೆ. ಸಿದ್ದರಾಮಯ್ಯ ಸಮಾಜವಾದಿ ನೀತಿ ಅಡಿಯಲ್ಲಿ ಚುನಾವಣೆ ಗೆದ್ದಿದ್ದಾರೆ ಎಂದರು.