ನನ್ನ ಮೇಲೆ ಹಲ್ಲೆ ನಡೆಸಿದ್ದು ರೌಡಿಗಳು: ಸಚಿವ ಬಿ.ಸಿ.ಪಾಟೀಲ್‌

Published : Jan 19, 2023, 09:05 AM IST
ನನ್ನ ಮೇಲೆ ಹಲ್ಲೆ ನಡೆಸಿದ್ದು ರೌಡಿಗಳು: ಸಚಿವ ಬಿ.ಸಿ.ಪಾಟೀಲ್‌

ಸಾರಾಂಶ

ಯಶವಂತಪುರದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದು ರೌಡಿಗಳು. ಪೊಲೀಸ್‌ ಇಲಾಖೆಯಲ್ಲಿದ್ದಾಗ ಹೊಡೆಯುವುದು, ಹೊಡೆಸಿಕೊಳ್ಳುವುದು ಸಾಮಾನ್ಯ ಎಂದು ಬಿ.ಕೆ.ಹರಿಪ್ರಸಾದ್‌ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿರುಗೇಟು ನೀಡಿದರು.

ಮೈಸೂರು (ಜ.19): ಯಶವಂತಪುರದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ್ದು ರೌಡಿಗಳು. ಪೊಲೀಸ್‌ ಇಲಾಖೆಯಲ್ಲಿದ್ದಾಗ ಹೊಡೆಯುವುದು, ಹೊಡೆಸಿಕೊಳ್ಳುವುದು ಸಾಮಾನ್ಯ ಎಂದು ಬಿ.ಕೆ.ಹರಿಪ್ರಸಾದ್‌ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ತಿರುಗೇಟು ನೀಡಿದರು. ತಮ್ಮ ವೇಶ್ಯೆ ಹೇಳಿಕೆಗೆ ಟೀಕಿಸಿದ ಬಿ.ಪಿ.ಪಾಟೀಲ್‌ಗೆ ಯಶವಂತಪುರದಲ್ಲಿ ಹೊಡೆದಿದ್ದು ಯಾರು ಎಂದು ಹರಿಪ್ರಸಾದ್‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್‌, ಹರಿಪ್ರಸಾದ್‌ ಹೇಳಿಕೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. 

ಕೆಟ್ಟ ಆಪಾದನೆ ಮಾಡಿದರೆ ಮೆಚ್ಚುತ್ತಾರೆ, ಮತ ಹಾಕುತ್ತಾರೆ ಅಂದುಕೊಂಡರೆ ಅದು ಮೂರ್ಖತನ. ವೇದಿಕೆ ಸಿಕ್ಕಿದೆ, ಯಾರೋ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾರೆ ಅಂತ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಪಾಟೀಲ್‌ ಚಾಟಿ ಬೀಸಿದರು. ಸ್ಕಿಲ್‌ ಇಂಡಿಯಾ ಬಗ್ಗೆ ಹರಿಪ್ರಸಾದ್‌ ಟೀಕಿಸಿದ್ದಾರೆ. ಅವರಿಗೆ ಟೀಕೆ ಮಾತನಾಡುವುದೇ ಕೆಲಸವಾಗಿದೆ. ಪ್ರಧಾನಿ ಬಗ್ಗೆ ಮಾತನಾಡುವಷ್ಟುಹರಿಪ್ರಸಾದ್‌ ದೊಡ್ಡವರು ಅಂತಾ ನನಗೆ ಅನ್ನಿಸಲ್ಲ ಎಂದರು.

ಕರ್ನಾಟಕದ ಜನತೆಯ ನಡುವೆ ಇರಲು ಉತ್ಸುಕನಾಗಿದ್ದೇನೆ: ಕನ್ನಡದಲ್ಲಿ ಟ್ವೀಟ್ ಮಾಡಿದ ಮೋದಿ!

ರೈತ ವರ್ಗ ಅಭಿವೃದ್ಧಿಗೆ ಪ್ರಯತ್ನ: ಕೃಷಿಕರು ಸಶಕ್ತರನ್ನಾಗಿ, ಸ್ವಾವಲಂಬಿಗಳನ್ನಾಗಿ ಮಾಡಬೇಕಾಗಿದ್ದು ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು. ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ಕೃಷಿ ಹಾಗೂ ಕೃಷಿ ಸಂಬಂಧಿ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಕೃಷಿ ಮೇಳವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ನಾಶವಾದರೆ ದೇಶಕ್ಕೆ ಬಡತನ ಎದುರಾಗುತ್ತದೆ ಎಂಬ ಮಾತಿನಂತೆ ಜಗತ್ತಿನಲ್ಲಿ ರೈತರು ಸಂತಸದಿಂದದ್ದರೆ ಜಗತ್ತು ಸಂತೋಷವಾಗಿರುತ್ತದೆ ಅದರಂತೆ ರೈತರನ್ನು ಸರಿಯಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಸಮಾಜದಲ್ಲಿ ಅನೇಕರು ಸಮಸ್ಯೆಗಳಿದ್ದರೆ ಪ್ರತಿಭಟನೆ, ಹೋರಾಟ ಮಾಡುತ್ತಾರೆ. ಆದರೆ, ರೈತ 3 ತಿಂಗಳು ಬೆಳೆ ಬೆಳೆಯುವುದು ನಿಲ್ಲಿಸಿಬಿಟ್ಟರೆ ಇಡೀ ಜಗತ್ತಿಗೆ ಅನ್ನ ಸಿಗುವುದಿಲ್ಲ. ಅನೇಕ ಸಂತರು, ಶರಣರು ರೈತರ ಕುರಿತು ಅನೇಕ ವಚನ, ಕೀರ್ತನೆಗಳನ್ನು ಬರೆದಿದ್ದಾರೆ ಎಂದರು.

ಪ್ರಸ್ತುತ ವರ್ಷವನ್ನು ರೈತರ ಆದಾಯ ದುಪ್ಪಟ್ಟು ಮಾಡುವ ವರ್ಷವೆಂದು ಘೋಷಣೆ ಮಾಡಲಾಗಿದೆ. ಅದರಂತೆ ಸರ್ಕಾರದಿಂದ ವರ್ಷಕ್ಕೆ ರು.6 ಸಾವಿರಗಳನ್ನು ಮೂರು ಕಂತುಗಳಲ್ಲಿ ಒಟ್ಟು ರು.10 ಸಾವಿರ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಕೃಷಿ ಇಲಾಖೆಯಿಂದ ಕೇವಲ ರೈತರನ್ನು ಬೆಳೆ ಬೆಳೆಯುವಲ್ಲಿ ಮಾತ್ರ ನೋಡಿಕೊಳ್ಳಲಾಗುತ್ತಿದೆ. ಆದರೆ, ರೈತರು ತಾವು ಬೆಳೆದ ಬೆಳೆಯನ್ನು ತಾವೆ ಸಂಸ್ಕರಣೆ ಮಾಡಿ, ಪ್ಯಾಕಿಂಗ್‌ ಹಾಗೂ ಬ್ರಾಂಡಿಂಗ್‌ ಮಾಡಿ ಮಾರಾಟ ಮಾಡುವಂತಾಗಬೇಕು. ಇದರಿಂದ ರೈತರು 10 ಪಟ್ಟು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಈ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರೈತರ ಉತ್ಪಾದಕಾ ಆ್ಯಪ್‌ ಜಾರಿಗೆ ತರಲಾಗಿದೆ. 1,166 ರೈತ ಉತ್ಪಾದಕಾ ಸಂಸ್ಥೆಗಳು ಇದರಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಮುಸ್ಲಿಮರ ವಿಶ್ವಾಸಕ್ಕೆ ಪಡೆ​ಯಲು ಮೋದಿ ಸಲ​ಹೆ: ಯಡಿಯೂರಪ್ಪ

ಕೇಂದ್ರ ಸಕಾರದಿಂದ ರು.10 ಸಾವಿರ ಕೋಟಿಯನ್ನು ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಮೀಸಲಿರಲಾಗಿದ್ದು, ಕೃಷಿ ಮೂಲಸೌಕರ್ಯ ನಿಧಿಯಲ್ಲಿ ರು.1 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ನಿಧಿಯಿಂದ ರೈತರು 2 ಕೋಟಿಯಷ್ಟುಹಣವನ್ನು 7 ವರ್ಷಗಳಿಗಾಗಿ ಸಾಲದ ರೂಪದಲ್ಲಿ ಪಡೆಯಬಹುದಾಗಿದೆ. ಈ ಹಣದಿಂದ ಕೋಲ್ಡ್‌ ಸ್ಟೋರೇಜ್‌, ಆಹಾರ ಸಂಸ್ಕರಣಾ ಘಟಕ ಸೇರಿದಂತೆ ಇನ್ನಿತರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಅಭಿವೃದ್ಧಿ ಹೊಂದಬಹುದಾಗಿದೆ. ಪ್ರತಿಯೊಬ್ಬರ ರೈತರು ಕೃಷಿ ಮೇಳದಲ್ಲಿರುವ ಎಲ್ಲಾ ಸೇವೆಗಳ ಕುರಿತು ಹಾಗೂ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ಕೃಷಿಯಲ್ಲಿ ಮುಂದುವರೆಯಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ