ಗ್ಯಾರಂಟಿ ನೆಪದಲ್ಲಿ ರೈತರ ಕಡೆಗಣಿಸುತ್ತಿರುವ ಕಾಂಗ್ರೆಸ್‌ ಸರ್ಕಾರ: ಬಿ.ಸಿ.ಪಾಟೀಲ

By Kannadaprabha News  |  First Published Sep 9, 2023, 11:30 PM IST

2024ರಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ದೇವೆಗೌಡರ ಹಸ್ತವನ್ನು ಚಾಚುತ್ತಿದ್ದು, ಅದನ್ನು ಸ್ವಾಗತಿಸುತ್ತೇವೆ ಎಂದ ಮಾಜಿ ಸಚಿವ ಬಿ.ಸಿ.ಪಾಟೀಲ 


ಹಿರೇಕೆರೂರು(ಸೆ.09):  ರಾಜ್ಯ ಸರ್ಕಾರ ಗ್ಯಾರಂಟಿ ನೆಪದಲ್ಲಿ ರೈತರನ್ನು ಕಡೆಗಣಿಸುತ್ತಿದೆ. ಪರಿಣಾಮ ಸಂಕಷ್ಟದಲ್ಲಿರುವ ರೈತರು ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯನವರು ಸಿಎಂ ಇದ್ದಾಗಲೂ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವರ್ಷ ಮತ್ತೆ ರೈತರ ಆತ್ಮಹತ್ಯೆಗಳು ಪ್ರಾರಂಭವಾಗಿದ್ದು, ರೈತರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5 ಲಕ್ಷ ರು. ಪರಿಹಾರ ಕೊಡಲು ಆರಂಭಿಸಿದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಳವಾಗುತ್ತಿದೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿಕೆ ಇಡೀ ರೈತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಯಾವ ರೈತರು 5 ಲಕ್ಷ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬರ ಇದ್ದರೂ ಸಹ ನಾವೆಲ್ಲಾ ರೈತರು ಸೇರಿ ದೇಣಿಗೆ ಸಂಗ್ರಹಿಸಿ ಹಿರೇಕೆರೂರ ತಾಲೂಕಿನಿಂದಲೇ 1 ಕೋಟಿ ರು. ಕೊಡುತ್ತೇವೆ, ಆಗ ಶಿವಾನಂದ ಪಾಟೀಲರು ಆತ್ಮಹತ್ಯೆ ಮಾಡಿಕೊಳ್ತಾರಾ ಎಂದು ಪ್ರಶ್ನಿಸಿದ ಅವರು, ರೈತರಿಗೆ ಅವಮಾನ ಮಾಡಿದ ಸಚಿವರನ್ನು ಕೂಡಲೇ ಸಿಎಂ ವಜಾ ಮಾಡಬೇಕು. ಅವರನ್ನು ಹಾವೇರಿ ಜಿಲ್ಲೆ ಉಸ್ತುವಾರಿಯಿಂದ ಕಿತ್ತಾಕಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಸಿಎಂ ಸಿದ್ದರಾಮಯ್ಯ ಅವರೇ ಬರಗಾಲ ಘೋ‍ಷಣೆ ಮಾಡಿ: ಬೊಮ್ಮಾಯಿ

2024ರಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಹೊಂದಾಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮಾಜಿ ಪ್ರಧಾನಿ ದೇವೆಗೌಡರ ಹಸ್ತವನ್ನು ಚಾಚುತ್ತಿದ್ದು, ಅದನ್ನು ಸ್ವಾಗತಿಸುತ್ತೇವೆ ಎಂದರು.

ನಾಯಿ ಪಾಡು ಆಗುತ್ತೆ...

ಆಪರೇಷನ್ ಹಸ್ತ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗುತ್ತೆ. ಆಪರೇಷನ್ ಹಸ್ತಕ್ಕೆ ಒಳಗಾಗಿ ಹೋದವರ ಪರಿಸ್ಥಿತಿ ಲೋಕಸಭೆ ಚುನಾವಣೆ ಬಳಿಕ ನಾಯಿ ಪಾಡು ಆಗುತ್ತೆ. ಈಗಲೇ ಅಲ್ಲಿ 136 ಜನ ಶಾಸಕರಿದ್ದಾರೆ. ಈಗ ಕಾಂಗ್ರೆಸ್ಸಿಗೆ ಹೋದವರನ್ನು ಮತ್ತೆ ಲಾಸ್ಟ್ ಬೆಂಚ್‌ನಲ್ಲಿ ಕುಳ್ಳರಿಸುತ್ತಾರೆ. ಇದನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರೇ ಹೇಳಿದ್ದಾರೆ ಎಂದರು.

ಈಶ್ವರಪ್ಪನವರ ಪುತ್ರನಿಗೆ ಟಿಕೆಟ್ ಕೊಡ್ತಿವಿ ಎಂದು ಯಾರಾದರೂ ಹೇಳಿದ್ದಾರಾ..?, ಇದನ್ನು ಹೇಳಬೇಕಾದವರು ಹೇಳಬೇಕು. ಶನಿವಾರ ಜಿಲ್ಲಾ ಕಾರ್ಯಕಾರಣಿ ಸಭೆ ಇದೆ. ಅಲ್ಲಿ ಚರ್ಚೆ ಮಾಡುತ್ತೇವೆ. ಹಾವೇರಿ ಲೋಕಸಭೆ ಚುನಾವಣೆ ಕ್ಷೇತ್ರವನ್ನು ನಾವು ಗೆಲ್ಲಬೇಕಿದೆ. ಹೀಗಾಗಿ ಹಾವೇರಿ-ಗದಗ ಜಿಲ್ಲೆಯ ಆಕಾಂಕ್ಷಿಗಳಿಗೆ ಟಿಕೆಟ್ ಕೊಟ್ಟರೆ ಅವರನ್ನು ಗೆಲ್ಲಿಸುವ ಕೆಲಸವನ್ನು ಎರಡೂ ಜಿಲ್ಲೆಯವರು ಸೇರಿ ಮಾಡುತ್ತೇವೆ ಎಂದರು.

click me!