ಚಿತ್ರದುರ್ಗ, (ಏ.16): ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಕೀಯ ಮಾಡುವುದು ದುರ್ದೈವದ ಸಂಗತಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದು ವರ್ಷ 2 ತಿಂಗಳ ಆಡಳಿತಾವಧಿಯಲ್ಲಿ ಅವರು ಲೂಟಿ ಹೊಡೆದಿದ್ದಾರೆ.
ಬಹಿರಂಗವಾಯ್ತು ನಟಿಯ ಬ್ರೇಕ್‌ಅಪ್ ಸೀಕ್ರೆಟ್, ಸರ್ಕಾರಕ್ಕೆ ಮಲ್ಯ 2ನೇ ರಿಕ್ವೆಸ್ಟ್; ಏ.16ರ ಟಾಪ್ 10 ಸುದ್ದಿ!
1 ವರ್ಷ 2 ತಿಂಗಳ ಆಡಳಿತಾವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಧಿಕಾರದಲ್ಲಿದ್ದಾಗ ಎಲ್ಲಾ ದೋಚಿಕೊಂಡು ಹೋಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅವರು ಏನೂ ಬಿಟ್ಟು ಹೋಗಿಲ್ಲ ಎಂದು ರೈತರ ಬಗ್ಗೆ ಕೃಷಿ ಇಲಾಖೆ ನಿರ್ಲಕ್ಷ್ಯ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬಿ.ಸಿ. ಪಾಟೀಲ್ ತಿರುಗೇಟು ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರೈತರಿಗಾಗಿ ಅನೇಕ ಯೋಜನೆ ನೀಡಲಾಗಿದೆ. ರೈತರಿಗಾಗಿ ಉಚಿತ ಹಾಲು ವಿತರಣೆ, ಮುಕ್ತ ಮಾರುಕಟ್ಟೆ ರೂಪಿಸಲಾಗಿದೆ. ಕೃಷಿ ಚಟುಚಟಿಕ ನಿರ್ಬಂಧವಿಲ್ಲದೆ ನಿರಾತಂಕವಾಗಿ ನಡೆಯುತ್ತಿದೆ ಎಂದು ಹೇಳಿದರು.