ಈ ಹಿಂದೆ ದೀಪ ಹಚ್ಚಿ ಎಂದು ಕರೆ ಕೊಟ್ಟಾಗ ಇದೇ ರೇವಣ್ಣ ಮೇಣದಬತ್ತಿ ತರಲು ಹೊರಗಡೆ ಅಂಗಡಿಗೆ ಹೋದ್ರೆ ಪೊಲೀಸರಿಂದ ಒದೆ ಬೀಳುತ್ತೆ ಎಂದು ವ್ಯಂಗ್ಯವಾಡಿದ್ದರೂ. ಆದ್ರೆ, ಇದೀಗ ರಾಷ್ಟ್ರದ ದೊರೆ ಪ್ರಧಾನಿ ಹೇಳಿದಂತೆ ದೀಪ ಹಚ್ಚಿದ್ದೇವೆ ಎಂದು ಹೊಗಳಿದಂತೆ ಮಾಡಿ ಮೋದಿಯನ್ನು ತೆಗಳಿದ್ದಾರೆ.
ಹಾಸನ, (ಏ.16): ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಮೋದಿ ಅವರನ್ನು ರಾಷ್ಟ್ರ ದೊರೆ ಎನ್ನುತ್ತಲೇ ತೆಗಳಿದ್ದಾರೆ.
ಹೌದು..ದೇಶದ ಪ್ರಧಾನಿ ಮತ್ತು ಸಿಎಂ ಹೇಳಿದ ಹಾಗೆ ಜನರು ಪಾಲಿಸಿದ್ದಾರೆ. ಅವರು ರಾಷ್ಟ್ರದ ದೊರೆ. ರಾಷ್ಟ್ರದ ದೊರೆ ಹೇಳಿದ ಹಾಗೆ ಕೇಳಿದ್ದೇವೆ. ದೀಪ ಹಚ್ಚಿ ಅಂದ್ರು ಹಚ್ಚಿದೆವು. ಯೋಗ ಮಾಡಿ, ಕ್ಲಾಪ್ ಮಾಡಿ ಅಂದ್ರು ಮಾಡಿದ್ದೀವಿ. ಅದ್ರೆ ಈಗ ನಮ್ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಅನ್ನ ಕೊಡಲಿ ಎನ್ನುವುದು ನಮ್ಮ ಸ್ಲೋಗನ್ ಎಂದ ರೇವಣ್ಣ ವ್ಯಂಗ್ಯವಾಡಿದರು.
ರಾಜ್ಯದ ಜನರು ಸಿಎಂ ಫಂಡ್ ಗೆ ನೀಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಹಣ ಇಲ್ಲ ಎಂದರೆ ಸಿಎಂಗೆ ಹಣ ಎಲ್ಲಿಂದ ಬರುತ್ತೆ ಅಂತ ನಾವು ತೋರಿಸುತ್ತೇವೆ. ಪಕ್ಷಾತೀತವಾಗಿ ಜನರ ಸಮಸ್ಯೆ ಬಗ್ಗೆ ನಾವು ಕೈಜೋಡಿಸುತ್ತೇವೆ ಎಂದರು.
ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ನಿಧಿ ಸ್ಥಗಿತಗೊಳಿಸಿದ್ದಾರೆ. ದಯಮಾಡಿ ಸಿಎಂ ಶಾಸಕರ ನಿಧಿ ಸ್ಥಗಿತಗೊಳಿಸಬಾರದು ಎಂದು ರೇವಣ್ಣ ಸರ್ಕಾರದ ನಡೆ ಬಗ್ಗೆ ಗರಂ ಆದರು.
ಇನ್ನು ಇದೇ ವೇಳೆ ಮಾಸ್ಕ್ ಹಾಕದವರನ್ನು ಬಂಧಿಸಿ ಎನ್ನುವ ಸಚಿವ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ. ಬೇಕಾದರೆ ನನ್ನನ್ನು ಬಂಧಿಸಲಿ. ಜೈಲಿನಲ್ಲಿ ಊಟನಾದರೂ ಸಿಗುತ್ತೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.