ತಮ್ಮ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ಸಿಗರು ಆಲಿಬಾಬಾ ಚಾಲೀಸ್ ಪರ್ ಚಾರ್ ಚೋರ್‌ಗಳಿದ್ದಂತೆ ಎಂದು ಸಚಿವ ಬಿ.ಶ್ರೀರಾಮಲು, ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆ (ಸೆ.25): ತಮ್ಮ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿರುವ ಕಾಂಗ್ರೆಸ್ಸಿಗರು ಆಲಿಬಾಬಾ ಚಾಲೀಸ್ ಪರ್ ಚಾರ್ ಚೋರ್‌ಗಳಿದ್ದಂತೆ ಎಂದು ಸಚಿವ ಬಿ.ಶ್ರೀರಾಮಲು, ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಅಧಿವೇಶನದಲ್ಲಿ ನಡೆಯಬೇಕಿದ್ದ ಚರ್ಚೆಗಳನ್ನು ಮೊಟಕುಗೊಳಿಸಿ, ಕಾಂಗ್ರೆಸ್ ಸ್ವಾರ್ಥ ರಾಜಕಾರಣಕ್ಕಾಗಿ ಸದನವನ್ನೇ ಸಂಪೂರ್ಣ ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.
ಸದನ ನಡೆದರೆ ರಾಜ್ಯದಲ್ಲಿ ಇದ್ದ ಗಂಭೀರ ವಿಷಯಗಳು ಚರ್ಚೆ ಆಗುತ್ತವೆ. ಆದರೆ ಕಾಂಗ್ರೆಸ್ ನವರು ರಾಜಕೀಯ ಅಜೆಂಡಾ ಇಟ್ಕೊಂಡು, ಸ್ವಾರ್ಥ ರಾಜಕಾರಣಕ್ಕಾಗಿ ಸದನವನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ.ಕಾಂಗ್ರೆಸ್ ನಾಯಕರೆಲ್ಲರೂ ತಮ್ಮ ಸರ್ಕಾರದ ಅವಧಿಯಲ್ಲಿ,ಆಲಿಬಾಬಾ ಚಾಲೀಸ್ ಪರ್ ಚಾರ್ ಚೋರ್‌ಗಳಿದ್ದಂತೆ. ಆಲಿಬಾಬಾ 40 ಕಳ್ಳರಂತ ಅಂತಿವೋ ,ಅದರಂತೆ ತಮ್ಮ ಅವಧಿಯಲ್ಲಿ ಕಾಂಗ್ರೆಸ್ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಆದರೆ ಇವತ್ತು ಕಾಂಗ್ರೆಸ್‌ನವರು ಭ್ರಷ್ಟಾಚಾರದಲ್ಲಿ ಬಹಳಷ್ಟು ಮಡಿವಂತಿಕೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
undefined
ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಪ್ರವಾಹದಿಂದ ಉಂಟಾದ ಹಾನಿ ವೀಕ್ಷಿಸಿದ ಸಚಿವ ಸಿ.ಸಿ.ಪಾಟೀಲ್
ಸೀರೆ ಹಂಚಿಕೆ ಮಾಡಿದ್ದು ಶಿಕ್ಷಕರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ: ಇದೇ ಸಮಯದಲ್ಲಿ, ಬಳ್ಳಾರಿ ಗ್ರಾಮೀಣ ಮತಕ್ಷೇತ್ರದ ಮೇಲೆ ಶ್ರೀರಾಮುಲು ಕಣ್ಣಿಟ್ಟು, ಕ್ಷೇತ್ರದ ಶಿಕ್ಷಕಿಯರಿಗೆ ಇಳಕಲ್ ಸೀರೆ ಹಂಚಿದ ವಿಚಾರವಾಗಿ ಮಾತನಾಡಿ, ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ, ಭಾವನಾತ್ಮಕವಾಗಿ ನನಗೆ ಸಂಬಂಧ ಇದೆ. ನಾನು ಹುಡುಗ ಇದ್ದಾಗಿಂದಲೂ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಏಳು ಬಾರಿ ಚುನಾವಣೆಯಲ್ಲಿ ಆರು ಬಾರಿ ಗೆದ್ದಿದ್ದೇನೆ. ಒಂದು ಸಲ ಸಂಸದ ಆಗಿದ್ದೆ, ನನಗೆ ಯಾವತ್ತೂ ಅವಕಾಶ ಸಿಕ್ಕಿರಲಿಲ್ಲ. ಅವರದು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ವಿನಃ ರಾಜಕಾರಣಕ್ಕೆ ಅಲ್ಲ ಎಂದು ಸ್ಪಷ್ಟ ಪಡಿಸಿದ ಶ್ರೀರಾಮಲು, ಬಹುಶಃ ನಾನು ಮತ್ತೆ ಬಾದಾಮಿಗೆ ಬಂದ್ರು ಬರಬಹುದೇನೋ.
ಇಲ್ಲೆ (ಬಳ್ಳಾರಿ ಗ್ರಾಮೀಣ) ನಿಲ್ಲಬೇಕು ಎಂದು ಮಾಡಿಲ್ಲ. ನನಗೆ ಓದಿಸಿದ ಟೀಚರ್‌ಗಳು, ಸಹಾಯ ಮಾಡಿದ ಗುರುಗಳು. ಎಲ್ಲರಿಗೂ ಸಹ ಒಂದು ಕಾಣಿಕೆ ಅಂತ ಕೊಡಬೇಕು ಅಂತ ಕೊಟ್ಟಿದ್ದು. ಚುನಾವಣೆಗಾಗಿ ಲಾಭ ಮಾಡಿಕೊಳ್ಳಲು ಕೊಟ್ಟಿದ್ದಲ್ಲ ಎಂದು ತಿಳಿಸಿ, ಬಾದಾಮಿಯಲ್ಲಿ ಸ್ಪರ್ಧೆ ಬಗ್ಗೆ ಪಾರ್ಟಿ ತೀರ್ಮಾನ ತೆಗೆದುಕೊಳ್ಳಬೇಕು. 2018ರಲ್ಲಿ ಬಾದಾಮಿ, ಮೊಳಕಾಲ್ಮೂರಲ್ಲಿ ಪಕ್ಷ ಅವಕಾಶ ನೀಡಿತ್ತು.ಬಾದಾಮಿಗೆ ಬರ್ತೇನೆ ಅಂತ ಬಂದಿದ್ದಲ್ಲ. ಪಾರ್ಟಿ ಅವಕಾಶ ಮಾಡಿಕೊಟ್ರೆ ಖಂಡಿತ ಬಾದಾಮಿಯಿಂದ ಸ್ಪರ್ಧೆ ಮಾಡೋಣ ಎಂದು ಹೇಳಿದರು.
ಜನಾರ್ಧನ ರೆಡ್ಡಿ ಸ್ಫರ್ಧೆ ಬಗ್ಗೆ ಏನು ಹೇಳುವ ಸ್ಥಿತಿಯಲ್ಲಿಲ್ಲ: ಮುಂದಿನ ವಿಧಾನಸಭೆ ಚುನಾವಣೆಗೆ ಜನಾರ್ದನ ರೆಡ್ಡಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ, ಸದ್ಯಕ್ಕೆ ಆ ಬಗ್ಗೆ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ,ಪಾರ್ಟಿ ತೀರ್ಮಾನ ತಗೊಂಡ್ರೆ ಏನಾದ್ರೂ ಆಗಬಹುದು.ಇದರಲ್ಲಿ ನನ್ನ ಒತ್ತಡ ಏನಿಲ್ಲ.ಪಾರ್ಟಿ ಅಧಿಕಾರಕ್ಕೆ ಬರಬೇಕು. ನಂಬರ್ ಗೇಮ್‌ನಲ್ಲಿ ನಾವೆಲ್ಲ ಒನ್ ಟು ಒನ್ ಪ್ಲಸ್ ಆಗಬೇಕು.ಈ ಬಗ್ಗೆ ಎಲ್ಲರೂ ಪ್ರಯತ್ನ ಮಾಡ್ತಾ ಇದ್ದೇವೆ ಎಂದು ತಿಳಿಸಿದ ಶ್ರೀರಾಮಲು ಅವರು, ನನ್ನ ಕೆಣಕಿದ ಜನಾರ್ಧನ ರೆಡ್ಡಿ ಏನಾದ್ರೂ ಎಂಬ ಮಾಜಿ ಸಿಎಂ ಸಿದ್ದು ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ದುರಹಂಕಾರ ತೋರಿಸಿಕೊಡುತ್ತೆ. ಬೆಳಿಗ್ಗೆ ಎದ್ರೆ ಸಾಕು ಯಾರನ್ನ ಕೆಣಕಬೇಕು ಅಂತ ಅವ್ರು ಪ್ರಯತ್ನ ಮಾಡ್ತಾರೆ. ನಾವು ಕೆಣಕೋಕೆ ಹೋಗಲ್ಲ. ಯಾಕಂದ್ರೆ ಎಲ್ಲ ವಿಚಾರಗಳನ್ನ ಅವ್ರು ಮೈಮೇಲೆ ಎಳೆದುಕೊಳ್ಳುತ್ತಾರೆ.
ನಮ್ಮ ಬಳ್ಳಾರಿ ಅಂತ ಪದೆ ಪದೆ ಉಲ್ಲೇಖ ಮಾಡುತ್ತಾರೆ. ಮಡಿಕೇರಿಗೆ ಹೋಗುವ ಪ್ರಯತ್ನ ಮಾಡಿದ್ದರು, ಅವ್ರಿಗೆ ಅಲ್ಲಿಗೆ ಹೋಗ್ಲಿಕೆ ಆಗ್ಲಿಲ್ಲ, ತಾಕತ್ ಆಗ್ಲಿಲ್ಲ ಎಂದು ಪರೋಕ್ಷವಾಗಿ ಸಿದ್ದು ಕಾರ್ ಮೇಲೆ ತತ್ತಿ ಎಸೆದಿದ್ದರ ಬಗ್ಗೆ ವ್ಯಂಗ್ಯವಾಡಿದರು. ಆವತ್ತೇನೊ ವಾತಾವರಣ ಹಂಗಿತ್ತು. ಬಳ್ಳಾರಿಗೆ ಬಂದು ಸಕ್ಸಸ್ ಆದರೂ ಇಲ್ಲ ಅನ್ನೋಕೆ ಹೋಗಲ್ಲ. ಅವ್ರದೆಲ್ಲೊ ತಪ್ಪು ಸರಿ ಅನ್ನೋದನ್ನ ಕೋರ್ಡ್ ನೋಡ್ಕೊಳ್ತದೆ. ಯಾರು ತಪ್ಪಿತಸ್ಥರು, ಯಾರು ಆರೋಪಿಗಳು ಅನ್ನೋದನ್ನ ಕೋರ್ಟ್‌ಗೆ ಬಿಟ್ಟ ವಿಚಾರ. ನನ್ನ ಕೆಣಕಬೇಡ, ನನ್ನ ತಡುವುಬೇಡ ಅಂದರೆ, ಮಡಿಕೇರಿಗೆ ಹೋಗಬೇಕಿತ್ತು ಆದ್ರೆ ಅಲ್ಲಿಗೆ ಹೋಗೋಕೆ ಅವ್ರಿಗೆ ತಾಖತ್ ಆಗ್ಲಿಲ್ಲ.ಇವತ್ತು ನಾವಂತು ಅವ್ರನ್ನ ಕೆಣುಕುತ್ತಿಲ್ಲ. ಆತನ ಮೈಮೇಲೆ ಆತನೇ ಎಳೆದುಕೊಂಡ ಕೆಲಸ ಮಾಡ್ತಿದ್ದಾನೆ. ಆತನಿಗೆ ತಾಳ್ಮೆ ಇದ್ರೆ ರಾಜಕಾರಣದಲ್ಲಿ ಮುಂದೆ ಭವಿಷ್ಯ ಇರಬಹುದು, ತಾಳ್ಮೆ ಕಳೆದುಕೊಂಡ್ರೆ ಏನ ಮಾಡೋಕೆ ಆಗುತ್ತೆ ಎಂದು ಹೇಳುವ ಮೂಲಕ ಶ್ರೀರಾಮಲು ಅವರು,ಸಿದ್ದುಗೆ ಗುದ್ದು ಕೊಟ್ಟು, ಗೆಳೆಯ ಜನಾರ್ಧನ ರೆಡ್ಡಿ ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋಂತ್ರಿ: ಇದೇ ಸಮಯದಲ್ಲಿ ಮಾತನಾಡಿ,ಭ್ರಷ್ಟಾಚಾರ ಬಗ್ಗೆ ವಿರೋಧ ಪಕ್ಷದವರ ನರನಾಡಿಗಳಲ್ಲಿ ಅಡಿಗಿದೆ ಎಂದು ಕಿಡಿಕಾರಿದ ಶ್ರೀರಾಮಲು, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋಂತ್ರಿ ಎಂದರು. ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಇಂದು ಭ್ರಷ್ಟಾಚಾರದ ಬಗ್ಗೆ ನಾಚಿಕೆ ಇಲ್ಲದಂತೆ ಮಾತನಾಡುತ್ತಾರೆ. ಎರಡು ನರಿಗಳು, ಕುರಿಗಳ ವೇಷ ಧರಿಸಿದ ಮಾತ್ರಕ್ಕೆ ಕುರಿಗಳಾಗಲು ನಾವು ಬಿಡಲ್ಲ ಎಂದು ಟಾಂಗ್ ನೀಡಿದ ಶ್ರೀರಾಮಲು, ನರಿಗಳು, ಕುರಿಗಳ ವೇಷ ಹಾಕಿ ಕುರಿಗಳಾಗಲು ಸಾಧ್ಯವಿಲ್ಲ. ಈ ರೀತಿ ಡೋಂಗಿವಾದದ ರಾಜಕಾರಣಿಗಳು, ಹಿಂದುಳಿದ ನಾಯಕರು,ಸದನದಲ್ಲಿ ನಮ್ಮ ಮುಖ್ಯಮಂತ್ರಿಗೆ ಅಪಮಾನ ಮಾಡುವಂತ ಕೆಲಸ ಮಾಡಿದ್ದಾರೆ. ಪೆ ಸಿಎಂ ಅಂತಾ ನೀವು ಯಾರ ಬಗ್ಗೆ ಮಾತಾಡ್ತಿದ್ದೀರಿ ಎಂದು ಕಿಡಿ ಕಾರಿದ ಶ್ರೀರಾಮುಲು, ನಿಮ್ಮ ರಾಹುಲ್ ಗಾಂಧಿಯವ್ರು ಭ್ರಷ್ಟಾಚಾರದಲ್ಲಿ ಬೇಲ್ ಮೇಲೆ ಇದ್ದಾರೆ.
ನಿಮ್ಮ ಪಕ್ಷದ ಅಧ್ಯಕ್ಷ ಶಿವಕುಮಾರ್ ಬೇಲ್ ಮೇಲೆ ಇದ್ದಾರೆ. ಇಂದು ನಮ್ಮ ಮುಖ್ಯಮಂತ್ರಿಗೆ ಪೇ ಸಿಎಂ ಎಂದು ಹೇಳಿಕೆ ನೀಡಿ, ಗೊಂದಲ ಸೃಷ್ಟಿಸುತ್ತಿದ್ದೀರಿ. ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವ್ರು ನಿಮ್ಮ ಸೋನಿಯಾ ಮೇಡಮ್‌ಗೆ ಎಷ್ಟು ಹಣ ಕೊಟ್ಟಿದ್ರು ಎಂದು ತಮ್ಮ ಡೈರಿಯಲ್ಲೇ ಬರಕೊಂಡಿದ್ರು. ನಮ್ಮ ಮುಖ್ಯಮಂತ್ರಿ ಪೇ ಸಿಎಂ ಅಲ್ಲ, ನಿಮ್ಮ ಸೋನಿಯಾ ಮೇಡಮ್, ಪೇ ಸೋನಿಯಾ ಗಾಂಧಿ ಆಗ್ತಾರೆ ಎಂದ ಸಚಿವ ರಾಮಲು, ನೀವು ಏನೇ ಮಾಡಿದ್ರು, ನಿಮಗೆ ಅಧಿಕಾರಕ್ಕೆ ಬರೋಕೆ ಸಾಧ್ಯವಾಗಲ್ಲ. ನಾವು ಅಧಿಕಾರಕ್ಕೆ ಬರಬೇಕು ಎಂದು ಮ್ಯಾಜಿಕ್ ಬಾಕ್ಸ್ ಎಂದು ಯಾರೋ ಒಬ್ಬರನ್ನ ಎಂಗೇಜ್ ಮಾಡ್ಕೊಂಡು ತಂತ್ರಗಳನ್ನ ಉಪಯೋಗಿಸ್ತಿದ್ದೀರಿ. ಈ ತಂತ್ರಗಳು ಬಿಜೆಪಿ ಎದುರು ನಡೆಯಲ್ಲ. ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ಪುನಃ ಬಿಜೆಪಿ ಸರ್ಕಾರ ಬರುವಂತ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬಾಗಲಕೋಟೆ: ಬಯಲಾಟ ಅಕಾಡೆಮಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯಾ ಸರ್ಕಾರ..?
ಕಾಂಗ್ರೆಸ್ಸಿಗರು ತಾಕತ್ ಇದ್ರೆ ಜನ್ರ ಮುಂದೆ ಬನ್ನಿ: ಪೇ ಸಿಎಂ ಅಭಿಯಾನ ಹಾಗೂ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡಿ,ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿ, ಸದನದ ಒಳಗೆ ಹಾಗೂ ಹೊರಗೆ, ಕಾಂಗ್ರೆಸ್‌ನವ್ರು ಮಾಡಿದ ಹಗರಣಗಳನ್ನ ಜನರ ಮುಂದಿಡುವ ಕೆಲಸ ಮಾಡ್ತಾ ಬಂದಿದ್ದೀವಿ. 2018ರ ಚುನಾವಣೆಯಲ್ಲಿ ಇದೇ ಹೇಳಿ ರಾಜಕಾರಣ ಮಾಡಿದ್ದೇವೆ. ನಾನು ದಾಖಲೆ ಇಟ್ಕೊಂಡು ಆರೋಪ ಮಾಡಿರೋದು. ಇದ್ರಲ್ಲಿ ಯಾವುದು ಸುಳ್ಳಿಲ್ಲ, ಇವತ್ತು ನಮ್ಮ ಸಿಎಂ ಮೇಲೆ, ಪೇ.ಸಿಎಂ ಎಂಬ ಪೋಸ್ಟರ್ ಹಚ್ಚುವ ಕೆಲಸ ಮಾಡ್ತಿದ್ದಾರೆ.
ನೀವು ತಾಕತ್ ಇದ್ರೆ ಜನ್ರ ಮುಂದೆ ಬನ್ನಿ ಎಂದು ಸವಾಲ್ ಹಾಕಿ, ಏನಿಲ್ಲ, ಯಾರೋ ಒಬ್ಬರು ಹೇಳಿಕೊಟ್ರು ಅಂತಕ್ಷಣ, ಮುಖ್ಯಮಂತ್ರಿಗಳಿಗೆ ಈ ರೀತಿ ಅವಮಾನ ಮಾಡಿದ್ದು ಇತಿಹಾಸದಲ್ಲಿ ಯಾರು ಕಂಡಿಲ್ಲ. ಮುಖ್ಯಮಂತ್ರಿಗೆ ಈ ರೀತಿ ಅಪಮಾನ ಮಾಡುವ ಕೆಲಸ ಮಾಡ್ತೀರಾ,ನಿಮಗೆ ತಾಕತ್ ಇದ್ರೆ ಜನ್ರ ಮುಂದೆ ಬನ್ನಿ. ಜನ್ರು ಯಾರಿಗೆ ಉತ್ತರ ಕೊಡ್ತಾರೋ, ಯಾರನ್ನ ಸ್ವೀಕರಿಸ್ತಾರೋ ರಾಜಕಾರಣ ಮಾಡೋಣ,ನೀವೆಲ್ಲ ಸೇರಿ ಹೊಸ ಸಂಪ್ರದಾಯ ಹಾಕುವ ಕೆಲಸ ಮಾಡ್ತೀರಾ ಎಂದು ಪ್ರಶ್ನೆ ಮಾಡಿ, ಇತಿಹಾಸದಲ್ಲಿ ಪೇ ಸಿಎಂ ಎಂದು ಪೋಸ್ಟರ್ ಅಂಟಿಸೋ ಕೆಲಸ ಮಾಡಿಲ್ಲ. ಲೋಕಾಯುಕ್ತ ತನಿಖೆಗೂ ನಾವು ಆಗ್ರಹ ಮಾಡ್ತೇವೆ ಎಂದು ಶ್ರೀರಾಮ ತಿಳಿಸಿದರು.