* ಇದುವರೆಗೂ ಜನರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಕಾಟ ಕೊಟ್ಕಂಡು ಬರ್ತಿದ್ದ ಕಾಂಗ್ರೆಸ್
* ಕಾಲಚಕ್ರದಲ್ಲಿ ಒಬ್ಬರು ಕೆಳಗೆ ಬೀಳಬೇಕು, ಒಬ್ಬರು ಮೇಲೇರಬೇಕು
* ಇವತ್ತು ಕಾಲಚಕ್ರದಲ್ಲಿ ಬಿಜೆಪಿ ಮೇಲುಗೈ ಆಗಿದೆ. ಕಾಂಗ್ರೆಸ್ ನವರಿಗೆ ಕೆಳಗೆ ಇರೋ ಕೆಟ್ಟಪರಿಸ್ಥಿತಿ ಬಂದಿದೆ
ಚಿತ್ರದುರ್ಗ(ಜೂ.15): ಕಾನೂನು ಎಲ್ಲರಿಗೂ ಒಂದೇ ಆಗಿದ್ದು ಅದು ರಾಹುಲ್ ಗಾಂಧಿ ಹೊರತಾಗಿಲ್ಲ. ಇಡಿ ವಿಚಾರಣೆ ನೋವು ಏನು ಅಂತ ಕಾಂಗ್ರೆಸ್‌ನವರಿಗೂ ಗೊತ್ತಾಗಲಿ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ನವರು ಇದುವರೆಗೂ ಜನರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿ ಕಾಟ ಕೊಟ್ಕಂಡು ಬರ್ತಿದ್ದರು. ಕಾಲಚಕ್ರದಲ್ಲಿ ಒಬ್ಬರು ಕೆಳಗೆ ಬೀಳಬೇಕು, ಒಬ್ಬರು ಮೇಲೇರಬೇಕು. ಇವತ್ತು ಕಾಲಚಕ್ರದಲ್ಲಿ ಬಿಜೆಪಿ ಮೇಲುಗೈ ಆಗಿದೆ. ಕಾಂಗ್ರೆಸ್ ನವರಿಗೆ ಕೆಳಗೆ ಇರೋ ಕೆಟ್ಟಪರಿಸ್ಥಿತಿ ಬಂದಿದೆ. ಇದು ರಿವೇಂಜ್ ಅಲ್ಲ. ಹಳೇ ಹಗರಣ ಕಾಂಗ್ರೆಸ್ ಎದುರಿಸುತ್ತಿದ್ದು ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಬಿಜೆಪಿ ಯಾವತ್ತೂ ರಿವೇಂಜ್ ಪಾಲಿಟಿಕ್ಸ್ ಮಾಡಿಲ್ಲವೆಂದರು.
undefined
ಕಾಂಗ್ರೆಸ್ ಭ್ರಷ್ಟಾಚಾರ ಪ್ರಜಾಪ್ರಭುತ್ವದ ಅಂಗವೆಂದು ಭಾವಿಸಿದೆ: ಪ್ರತಾಪ್ ಸಿಂಹ
ಇಡಿ, ಐಟಿಯನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಬಿಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲು ಅನುಭವ ಇರುವ ರಾಜಕಾರಣಿಗಳು ಐಟಿ, ಇಡಿ ಬಗ್ಗೆ ಮಾತನಾಡ್ತಾರೆ ಅಂದ್ರೆ ಇತಿಹಾಸ ಮರೆತಿರಬೇಕು ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದರು.