Gadag: ಕಾಂಗ್ರೆಸ್‌ನಿಂದ ಪ್ರತಿಭಟನೆಯ ನಾಟಕ: ತಾಕತ್ತಿದ್ದರೆ ಚರ್ಚೆಯಲ್ಲಿ ಪಾಲ್ಗೊಳ್ಳಲಿ: ರಾಮುಲು

By Kannadaprabha News  |  First Published Dec 17, 2021, 12:02 PM IST

*   ರಾಜಕಾರಣದಲ್ಲಿ ಲಾಭ ಪಡೆಯಲು ಮುಂದಾದ ಕಾಂಗ್ರೆಸ್‌
*   ಅಧಿವೇಶನದಲ್ಲಿ ಎಲ್ಲ ರೀತಿಯ ಚರ್ಚೆಗೆ ಬಿಜೆಪಿ ಸರ್ಕಾರ ಸಿದ್ಧವಿದೆ
*   ಪರ್ಸೆಂಟೇಜ್‌ ಪಿತಾಮಹರು ಕಾಂಗ್ರೆಸ್‌ ನಾಯಕರು


ಗದಗ(ಡಿ.17):  ಕಾಂಗ್ರೆಸ್‌ನವರು(Congress) ಪ್ರತಿಭಟನಾ ರ‍್ಯಾಲಿ ಮಾಡುವ ಮೂಲಕ ನಾಟಕ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಹೇಳಿದರು.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕಕ್ಕೆ(North Karnataka) ಆದ್ಯತೆ ಸಿಗಬೇಕು ಎನ್ನುವ ಕಾರಣಕ್ಕಾಗಿ ಜ್ವಲಂತ ಸಮಸ್ಯೆ ಚರ್ಚೆಯಾಗಲು ಅಧಿವೇಶನ(Session) ನಡೆಯುತ್ತಿದೆ. ಅದರಲ್ಲಿ ಸಕ್ರಿಯವಾಗಿ ಭಾಗಿಯಾಗದೇ ಕೇವಲ ರಾಜಕಾರಣದಲ್ಲಿ(Politics) ಲಾಭ ಪಡೆಯಲು ಕಾಂಗ್ರೆಸ್‌ ಮುಂದಾಗಿದೆ ಎಂದರು.

ಅಧಿವೇಶನದಲ್ಲಿ ಎಲ್ಲ ರೀತಿಯ ಚರ್ಚೆಗೆ ನಮ್ಮ ಸರ್ಕಾರ ಸಿದ್ಧವಿದೆ. ವಿರೋಧ ಪಕ್ಷದವರ ಎಲ್ಲ ಪ್ರಶ್ನೆಗೆ ಉತ್ತರ ಕೊಡಲು ನಮ್ಮ ಮಂತ್ರಿಗಳು ಸಿದ್ಧರಿದ್ದಾರೆ. ಆದರೆ ಕಾಂಗ್ರೆಸ್‌ನವರು ಮಾತ್ರ ತಮ್ಮ ರಾಜಕೀಯ ಲಾಭಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ.

Tap to resize

Latest Videos

undefined

 Karnataka Politics: 'ಜನವಿರೋಧಿ ಬಿಜೆಪಿ ಸರ್ಕಾರದ ಕೌಂಟ್‌ಡೌನ್‌ ಶುರು'

ಅಧಿಕಾರ ಕಳೆದುಕೊಂಡ ಹತಾಶೆಯಿಂದ ಕಾಂಗ್ರೆಸ್‌ ಈ ರೀತಿ ಕೆಲಸ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಚರ್ಚೆಯಲ್ಲಿ ಪಾಲ್ಗೊಳ್ಳಲಿ. ಸ್ವಾರ್ಥವನ್ನು ಇಟ್ಟುಕೊಂಡು ರಾರ‍ಯಲಿ(Rally) ಮಾಡಿ, ಜನರ ದಿಕ್ಕು ತಪ್ಪಿಸಿ ಕಲಾಪವನ್ನು ವ್ಯರ್ಥ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್‌ ಮುಂದಾಗಿದೆ ಎಂದು ಕಟುವಾಗಿ ಟೀಕಿಸಿದರು.

ಸರ್ಕಾರದ ವಿರುದ್ಧ 40 ಪರ್ಸೆಂಟೇಜ್‌ ಆರೋಪ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪರ್ಸೆಂಟೇಜ್‌ ಪಿತಾಮಹರು ಕಾಂಗ್ರೆಸ್‌ ನಾಯಕರು. ಸಿದ್ದರಾಮಯ್ಯನವರ(Siddaramaiah) ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಅಂತಾ ನಾವು ಆರೋಪ ಮಾಡಿದ್ವಿ. ಈಗ ಅವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತಾಗಿದೆ. ರಾಜಕಾರಣಕ್ಕಾಗಿ ಕಾಂಗ್ರೆಸ್‌ ಈ ರೀತಿಯ ಆರೋಪ ಮಾಡುತ್ತಿದೆ ಎಂದರು.
ಮತಾಂತರ ನಿಷೇಧ ಕಾಯ್ದೆ(Conversion Prohibition Act) ವಿಚಾರ ಕುರಿತ ಪ್ರಶ್ನೆಗೆ, ಇದರ ಬಗ್ಗೆ ನನಗೆ ಹೆಚ್ಚಿನ ವಿಷಯ ಗೊತ್ತಿಲ್ಲ. ಅದನ್ನು ನೋಡಿ ಉತ್ತರಿಸುತ್ತೇನೆ. ಶಾಲೆಯಲ್ಲಿ ಮೊಟ್ಟೆ(Eggs) ಕೊಡುವ ಕುರಿತಂತೆ ಯಾರಿಗೆ ಮೊಟ್ಟೆಬೇಕೋ ಅವರು ಮೊಟ್ಟೆ ತಿನ್ನುತ್ತಾರೆ ಎಂದಷ್ಟೇ ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರದ ನೀತಿಯಿಂದ ಜನತೆಗೆ ಬೇಸರ

ನನ್ನ ಗೆಲುವು ಕಾಂಗ್ರೆಸ್‌ ಪಕ್ಷದ ಒಗ್ಗಟ್ಟು, ಪಕ್ಷದ ಸಿದ್ಧಾಂತ ಹಿರಿಯ ನಾಯಕರ ಶ್ರಮ, ಕಾರ್ಯಕರ್ತರ ಅವಿಶ್ರಾಂತ ಪರಿಶ್ರಮಕ್ಕೆ ಗೆಲುವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಸಲೀಂ ಅಹ್ಮದ್‌(Saleem Ahmed) ಹೇಳಿದರು.
ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ(BJP) ಸರ್ಕಾರಗಳ ಜನವಿರೋಧಿ ನೀತಿಗಳಿಂದಾಗಿ ಸಾರ್ವಜನಿಕರು ತತ್ತರಿಸಿದ್ದಾರೆ. ಜನರಿಗೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆಗಳು ಆಕಾಶಕ್ಕೆ ಏರಿವೆ. ಇದರಿಂದಾಗಿ ಜನರು ರೋಸಿ ಹೋಗಿದ್ದಾರೆ. ಅದಕ್ಕಾಗಿ ಜನರು ಕಾಂಗ್ರೆಸ್‌ ಪರ ಒಲವು ತೋರುತ್ತಿದ್ದಾರೆ.

Karnataka Politics : ಲಖನ್ ಬಿಜೆಪಿ ಬೆಂಬಲಿಸಲು ಲಖನ್ ಷರತ್ತು - ರಮೇಶ್‌ಗೆ ಸಚಿವ ಸ್ಥಾನ?

ಪಂಚಾಯತ್‌ ರಾಜ್‌ ಕಾನೂನುಗಳಲ್ಲಿ ಬಿಜೆಪಿಯರಿಗೆ ನಂಬಿಕೆ ಇಲ್ಲ. ಅದಕ್ಕಾಗಿ ಜಿಪಂ, ತಾಪಂ ಚುನಾವಣೆ ಮಾಡುತ್ತಿಲ್ಲ. ಗ್ರಾಪಂ ಸದಸ್ಯರಿಗೆ ಗೌರವಧನ ನೀಡುತ್ತಿಲ್ಲ. ಗ್ರಾಪಂಗೆ ಅನುದಾನ ನೀಡುತ್ತಿಲ್ಲ. ಈ ಕುರಿತು ಪ್ರತಿಭಟನೆ ಮಾಡಲಾಗುವುದು. 2023ರ ವಿಧಾನಸಭಾ ಚುನಾವಣೆಯಲ್ಲಿ(2023 Assembly Election) ಕಾಂಗ್ರೆಸ್‌ ಪಕ್ಷವನ್ನು ಅಧಿಕಾರ ತರುವುದೇ ನಮ್ಮೆಲ್ಲರ ಗುರಿಯಾಗಿದೆ. ವಿಧಾನ ಪರಿಷತ್‌ನಲ್ಲಿ(Vidhan Parishat) ಸದಸ್ಯರನ್ನು ಅಮಾನತು ಮಾಡಿದ್ದು ಖಂಡನೀಯ. ಸಚಿವ ಭೈರತಿ ಸಚಿವ 400 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರದಲ್ಲಿ(Corruption) ಭಾಗಿಯಾಗಿದ್ದು, ತಕ್ಷಣವೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌. ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಮಕೃಷ್ಣ ದೊಡ್ಡಮನಿ, ಯುವ ಮುಖಂಡ ಸದಾನಂದ ಡಂಗನವರ, ಹುಮಾಯೂನ್‌ ಮಾಗಡಿ, ರಾಮು ಕಲಾಲ, ಪ್ರವೀಣ ಯಾವಗಲ್ಲ, ವಿ.ಬಿ. ಸೋಮನಕಟ್ಟಿಮಠ, ಬಿ.ಬಿ. ಅಸೂಟಿ ಮುಂತಾದವರು ಇದ್ದರು.
 

click me!