'ಮೋದಿ ಹತ್ತಾರು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಚುನಾವಣಾ ಗಿಮಿಕ್‌'

Published : Mar 11, 2023, 03:00 AM IST
'ಮೋದಿ ಹತ್ತಾರು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಚುನಾವಣಾ ಗಿಮಿಕ್‌'

ಸಾರಾಂಶ

ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ, ಪಕ್ಷದ ಕಾರ್ಯಕ್ರಮಗಳನ್ನು ಸರ್ಕಾರಿ ಕಾರ್ಯಕ್ರಮಗಳಾಗಿ ಪರಿವರ್ತಿಸುವ ಮೂಲಕ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ: ಪಿ.ಎಚ್‌. ನೀರಲಕೇರಿ  

ಧಾರವಾಡ(ಮಾ.11): ರಾಜ್ಯಕ್ಕೆ ಹಲವು ರೀತಿ ಸಂಕಷ್ಟಗಳು ಬಂದಾಗ ಮುಖ ಮಾಡದ ಪ್ರಧಾನಿ ಮೋದಿ ಅವರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಹತ್ತಾರು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಚುನಾವಣಾ ಗಿಮಿಕ್‌ ಅಲ್ಲವೇ ಎಂದು ಕೆಪಿಸಿಸಿ ವಕ್ತಾರ ಪಿ.ಎಚ್‌. ನೀರಲಕೇರಿ ಪ್ರಶ್ನಿಸಿದರು.

ಮಾ. 12ರಂದು ಧಾರವಾಡ ಐಐಟಿ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ, ಪಕ್ಷದ ಕಾರ್ಯಕ್ರಮಗಳನ್ನು ಸರ್ಕಾರಿ ಕಾರ್ಯಕ್ರಮಗಳಾಗಿ ಪರಿವರ್ತಿಸುವ ಮೂಲಕ ಜನರ ದುಡ್ಡಿನಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕಾರ‍್ಯಕರ್ತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಜಿಲ್ಲೆಗೆ ಎರಡು ಭಾರಿ ಭೇಟಿ ನೀಡಿರುವ ಮೋದಿ ಅವರ ಉದ್ದೇಶ ಏನು ಎಂಬುದನ್ನು ಜನರು ಅರಿಯಬೇಕಿದೆ. ರಾಜ್ಯದ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಅವರೆಂದೂ ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

ಈ ಬಾರಿ ಕಲಘಟಗಿ ತೊಟ್ಟಿಲು ತೂಗುವವರು ಯಾರು?: ‘ಕೈ’ ಟಿಕೆಟ್‌ಗಾಗಿ ನಾಗರಾಜ, ಲಾಡ್‌ ನಡುವೆ ಪೈಪೋಟಿ

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕರ್ತರಿಗೆ ಊಟ, ವಸತಿಗೆ ಖರ್ಚು ಮಾಡಲು ಸಾಕಷ್ಟುಪ್ರಮಾಣದಲ್ಲಿ ಹಣ ವ್ಯಯಿಸಲಾಗುತ್ತಿದೆ. ಇಲ್ಲಿ ಬೈಪಾಸ್‌ ರಸ್ತೆಯಲ್ಲಿ ನಿತ್ಯ ಜನರು ಸಾಯುತ್ತಿದ್ದಾರೆ. ಕುಡಿಯುವ ನೀರನ ಸಮಸ್ಯೆ ತಲೆದೋರಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಯುವಕರು ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದಾರೆ. ಈ ಯಾವವು ಮೋದಿ ಅವರಿಗೆ ಸಮಸ್ಯೆಗಳೇ ಅಲ್ಲ ಎನಿಸುತ್ತಿದೆ. ಆಡಳಿತದಲ್ಲಿ ಸಾಕಷ್ಟುಭ್ರಷ್ಟಾಚಾರ ನಡೆಯುತ್ತಿದ್ದು ಮೋದಿಗೆ ಅದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ನಿಗಮ ಮಂಡಳಿಗಳಲ್ಲಿ ಸಾಕಷ್ಟುಭ್ರಷ್ಟಾಚಾರ ನಡೆದಿದ್ದು ಕೂಡಲೇ ಅವುಗಳ ಮೇಲೂ ಲೋಕಾಯುಕ್ತರು ದಾಳಿ ನಡೆಸೇಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ, ಕಾಂಗ್ರೆಸ್‌ ಮುಖಂಡ ಸಿದ್ದಣ್ಣ ಕಂಬಾರ, ಕಾಂಗ್ರೆಸ್‌ ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ ಕೊಂಗವಾಡ ಇದ್ದರು.

ಬ್ಯಾನರ್‌ ಶಾಸಕರು, ಪ್ಲೆಕ್ಸ್‌ ಸಂಸದರು..

ಶಾಸಕ ಅರವಿಂದ ಬೆಲ್ಲದ ಬ್ಯಾನರ್‌ ಶಾಸಕರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಫ್ಲೆಕ್ಸ್‌ ಸಂಸದರು. ಸಣ್ಣ ರಸ್ತೆಯಿಂದ ಹಿಡಿದು ದೊಡ್ಡ ಕಾರ‍್ಯಕ್ರಮಗಳೇ ಇರಲಿ. ಈ ಇಬ್ಬರೂ ಮಹಾನ್‌ ನಾಯಕರು ಇಡೀ ಊರಿನ ತುಂಬೆಲ್ಲಾ ಕೈ ಕೈಟ್ಟಿದ ಭಾವಚಿತ್ರಗಳುಳ್ಳ ಬ್ಯಾನರ್‌, ಫ್ಲೆಕ್ಸ್‌$ಹಾಕುವ ಕೆಟ್ಟಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯ ಜನತೆಗೆ ಏನೂ ಮಾಡದೇ ಇದ್ದರೂ ಬ್ಯಾನರ್‌ ಮಾತ್ರ ಸುಸಜ್ಜಿತವಾಗಿ ಹಾಕುವ ಮೂಲಕ ಜನರನ್ನು ಮರಳು ಮಾಡುವ ತಂತ್ರ ಉಭಯ ನಾಯಕರು ಹೊಂದಿರುವುದು ಜಿಲ್ಲೆಯ ಜನತೆಯ ದುರಂತ ಅಂತ ಕಾಂಗ್ರೆಸ್‌ ಮುಖಂಡ ಪಿ.ಎಚ್‌. ನೀರಲಕೇರಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ