ಸಿದ್ದು ಸಿಎಂ ಆಗಲಿ: ಸ್ಪಷ್ಟನೆ ಕೊಡಲು ಹೋಗಿ ಶ್ರೀರಾಮುಲು ಮತ್ತೆ ಯಡವಟ್ಟು, ಪೇಚಿಕೆ ಸಿಲುಕಿದ ಸಚಿವ..!

By Girish Goudar  |  First Published Aug 17, 2022, 1:28 PM IST

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಿಗೆ ಕಿರಿಕಿರಿ ಹೆಚ್ಚಾಗಿದೆ. ಸಿದ್ದರಾಮಯ್ಯನವರು ಬಿಜೆಪಿಗೆ ಬರಬಹುದು ಅಂತ ಅರ್ಥದಲ್ಲಿ ಮಾತನಾಡಿದ್ದೇನೆ: ರಾಮುಲು


ಬಳ್ಳಾರಿ(ಆ.17): ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಹೇಳಿಕೆಗೆ ಸ್ಪಷ್ಟನೆ ಕೊಡಲು ಹೋಗಿ ಸಚಿವ ಬಿ. ಶ್ರೀರಾಮುಲು ಮತ್ತೆ ಯಡವಟ್ಟು ಮಾಡಿಕೊಂಡಿದ್ದಾರೆ. ಹೌದು, ನಾನು ಹೇಳಿದ್ದು ಅವರ ಪಕ್ಷದಲ್ಲಿ ಸಿದ್ದರಾಮಯ್ಯ ಸಿಎಂ ಆಗಲಿ ಅಂತ, ಆದರೆ ಅವರನ್ನು ಅಲ್ಲಿ ಸಿಎಂ ಆಗೋದಕ್ಕೆ ಬಿಡಲ್ಲ, ಅದಕ್ಕಾಗಿ ನಮ್ಮ ಪಕ್ಷಕ್ಕೆ ಬರಲಿ ಎಂದು ಹೇಳಿದ್ದೇನೆ ಅಷ್ಟೇ ಎಂದು ಹೇಳುವ ಮೂಲಕ ಇದೀಗ ಶ್ರೀರಾಮುಲು ಪೇಚಿಗೆ ಸಿಲುಕಿದ್ದಾರೆ. 

ನಿಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡ್ತೀರಾ ಎಂಬ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನರೇಂದ್ರ ಮೋದಿಯಂತ ನಾಯಕ ದೇಶದಲ್ಲಿ ಇರೋ ತನಕ ಸಿದ್ದರಾಮಯ್ಯ ಸಿಎಂ ಆಗಲ್ಲ ಅಂತ ಎರಡೆರಡು ಉತ್ತರ ನೀಡಿ ಮತ್ತೆ ಗೊಂದಲದಲ್ಲಿ ಸಿಲುಕಿದ್ದಾರೆ. 

Tap to resize

Latest Videos

undefined

ಸಿದ್ದು ಸಿಎಂ ಆಗಲಿ ಎಂದ ರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆ ಇದೆಯಾ?

ಇದಕ್ಕೂ ಮುನ್ನ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸಿಎಂ ಆಗಲಿ ಎಂಬ ಹೇಳಿಕೆಗೆ ಸಂಬಂಧಪಟ್ಟಂತೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಎಲ್ಲಾ ಸ್ಪಷ್ಟೀಕರಣ ನೀಡಿದ್ದೇನೆ ಅಂತ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ.

2018ರಲ್ಲಿ 120 ಸ್ಥಾನಗಳಲ್ಲಿ ಅಡ್ಡಾಡ್ಡಿದ್ದೇನೆ. ಮೋದಿಯವರ ನಾಯಕತ್ವದಲ್ಲಿ ವಿರೋಧ ಮಾಡುವವರು ಬಿಜೆಪಿಗೆ ಸೇರಿದ್ದಾರೆ. ಕಡಿಮೆ ಸಮಯ ಸಿಕ್ಕಿದ್ದರಿಂದ ಸಿದ್ದರಾಮಯ್ಯ ಪ್ರಯೋಜನ ಪಡೆದುಕೊಂಡು ಗೆದ್ದರು ಅಂತ ಹೇಳಿದ್ದೇನೆ ಅಂತ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ. 

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?

ಎಲ್ಲಾ ಹಿಂದುಳಿದ ಜಾತಿ, ಪಂಗಡಗಳು ಒಂದಾಗುತ್ತಿವರ. ಕಾಂಗ್ರೆಸ್ ಪಕ್ಷದ ವಿರೋಧಿಗಳು ಬಿಜೆಪಿಗೆ ಬರ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಿಗೆ ಕಿರಿಕಿರಿ ಹೆಚ್ಚಾಗಿದೆ. ಸಿದ್ದರಾಮಯ್ಯನವರು ಬಿಜೆಪಿಗೆ ಬರಬಹುದು ಅಂತ ಅರ್ಥದಲ್ಲಿ ಮಾತನಾಡಿದ್ದೇನೆ. ಸಿದ್ದರಾಮಯ್ಯ, ಡಿಕೆಶಿ ಇರಿಸು ಮುರುಸು ಏನಾಗ್ತಿದೆ. ಆದ್ದರಿಂದ ಸಿದ್ದರಾಮಯ್ಯ ಬಿಜೆಪಿಗೆ ಬರಬಹುದು ಎಂಬ ಅರ್ಥದಲ್ಲಿ ಹೇಳಿದ್ದೇನೆ ಅಂತ ತಿಳಿಸಿದ್ದಾರೆ. 

ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಬೇಕು ಅಂತ ನಾನು ಹೇಳಿದ್ದು, ಎಂತಹ ಸಮಯದವರೆಗೂ ಮೋದಿ ಇರ್ತಾರೋ ಅಲ್ಲಿಯವರೆಗೂ ಕಾಂಗ್ರೆಸ್ ಕರ್ನಾಟಕಕ್ಕೆ ಅಧಿಕಾರಕ್ಕೆ ಬರಲ್ಲ, ಸಿದ್ದರಾಮಯ್ಯ ಬಿಜೆಪಿಗೆ ಬರಬಹುದು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾಗಿ ಶ್ರೀರಾಮುಲು ಸ್ಪಷ್ಟನೆ ‌ನೀಡಿದ್ದಾರೆ. 
 

click me!