ಬೆಳಗಾವಿ ಉಪಕದನ: 'ಕಾಂಗ್ರೆಸ್‌ಗೆ ಸೋಲು ಖಚಿತ, ಸುರ್ಜೇವಾಲಗೆ ನಿರಾಸೆಯಾಗೋದು ಗ್ಯಾರೆಂಟಿ'

By Suvarna News  |  First Published Apr 14, 2021, 7:31 AM IST

ಕಾಂಗ್ರೆಸ್‌ಗೆ ಚುನಾವಣಾ ವಿಷಯ ಬೇರೆ ಇಲ್ಲವೇ ಇಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ| ಸರ್ಕಾರ ಏಕೆ ಪತನ ಆಗುತ್ತೆ ಕಾರಣ ಏನು? ಎಂದು ಪ್ರಶ್ನಿಸಿದ ಸಚಿವ ಲಿಂಬಾವಳಿ| 


ಬೆಳಗಾವಿ(ಏ.14): ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿಯೇ ಸಾಧಿಸುತ್ತದೆ. ಮಂಗಲ ಸುರೇಶ್ ಅಂಗಡಿ ಪರ ಸಿಎಂ ಯಡಿಯೂರಪ್ಪ ಸೇರಿ ಅನೇಕ ನಾಯಕರು ಪ್ರಚಾರವನ್ನ ಮಾಡುತ್ತಿದ್ದಾರೆ. ನಾಳೆ, ನಾಡಿದ್ದು ನಾನೂ ಸಹ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಉಪಚುನಾವಣೆ ಫಲಿತಾಂಶದ ಬಳಿಕಲ ರಾಜ್ಯ ಸರ್ಕಾರ ಪತನವಾಗಲಿದೆ ಎಂಬ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿಕೆಗೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಚುನಾವಣಾ ವಿಷಯ ಬೇರೆ ಇಲ್ಲವೇ ಇಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಸರ್ಕಾರ ಏಕೆ ಪತನ ಆಗುತ್ತೆ ಕಾರಣ ಏನು? ಎಂದು ಹೇಳಿದ್ದಾರೆ.

Tap to resize

Latest Videos

ಕರ್ನಾಟಕದಲ್ಲಿ ರಂಗೇರಿದ ಉಪಚುನಾವಣೆ ಕಾವು: ಘಟಾನುಘಟಿಗಳಿಂದ ಅಬ್ಬರದ ಕ್ಯಾಂಪೇನ್‌

ರಣದೀಪ್‌ಸಿಂಗ್ ಸುರ್ಜೇವಾಲ ಉಪಚುನಾವಣೆ ಬಳಿಕ ಸರ್ಕಾರ ಪತನ ಮಾಡಲು ವ್ಯೂಹ ಏನಾದರೂ ರಚಿಸಿದ್ದಾರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾವುದೇ ವ್ಯೂಹ ರಚಿಸಿದರೂ ನಮ್ಕ ಸರ್ಕಾರ ಸುರಕ್ಷಿತವಾಗಿರುತ್ತದೆ. ಸುರ್ಜೇವಾಲ ಅವರಿಗೆ ನಿಶ್ಚಿತವಾಗಿ ನಿರಾಸೆಯಂತೂ ಆಗುತ್ತದೆ ಎಂದು ತಿಳಿಸಿದ್ದಾರೆ.

'ವಿಜಯೇಂದ್ರ ಟ್ಯಾಕ್ಸ್' ಆರೋಪ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಆರೋಪಗಳು ಇದ್ದೆ ಇರುತ್ತವೆ, ಕಾಂಗ್ರೆಸ್ ನವರು ಆರೋಪಗಳನ್ನ ಮಾಡಲೇಬೇಕಲ್ಲ. ಈ ರೀತಿ ಆರೋಪಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
 

click me!