ಪ್ರಧಾನಿ ಮೋದಿ ಯುಗದ ಕಾಲದಲ್ಲಿ ನಾವು ಬದುಕೋದು ನಮಗೆ ಸಂತೋಷ: ಶಾಸಕ ಅಭಯ ಪಾಟೀಲ

By Kannadaprabha News  |  First Published Jan 15, 2024, 11:30 PM IST

ಎಲ್ಲಾ ಗೌಡ್ರು ಒಂದೇ ವೇದಿಕೆಯ ಮೇಲೆ ಬಂದಿದ್ದಾರೆ ಎಂದ್ಮೇಲೆ ಈ ಭಾರಿ ಕಾಂಗ್ರೆಸ್‌ ಪಕ್ಕಾ ಕೆಳಗೆ ಇಳಿಸುತ್ತಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. 


ಬೆಳಗಾವಿ (ಜ.15): ಎಲ್ಲಾ ಗೌಡ್ರು ಒಂದೇ ವೇದಿಕೆಯ ಮೇಲೆ ಬಂದಿದ್ದಾರೆ ಎಂದ್ಮೇಲೆ ಈ ಭಾರಿ ಕಾಂಗ್ರೆಸ್‌ ಪಕ್ಕಾ ಕೆಳಗೆ ಇಳಿಸುತ್ತಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದ ಹಿಂದವಾಡಿಯಲ್ಲಿ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಆಯೋಜಿಸಿದ್ದ ಬೆಳಗಾವಿ ಗ್ರಾಮೀಣ, ದಕ್ಷಿಣ,ಉತ್ತರ ಮತಕ್ಷೇತ್ರದಿಂದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಕಾರ್ಯಕರ್ತರಿಗೆ ಹೆಲ್ಮೆಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಲ್ಮೆಟ್ ಯಾಕ ಕೊಡುತ್ತಿದ್ದಾರೆ ಗೊತ್ತಾ. ಯುದ್ದ ಸಮೀಪ ಬಂದಿದೆ ಅದಕ್ಕೆ ಕೊಡುತ್ತಿದ್ದಾರೆ. ನಮ್ಮನ್ನು ಕೆಡುವಲು ಯಾರು ಬರಲ್ಲ, ನಮಗ ನಾವೇ ಕೆಡವಿಕೊಳ್ಳುತ್ತಿದ್ದೇವೆ. ಎಲ್ಲಾ ಗೌಡ್ರ ವೇದಿಕೆ ಮೇಲೆ ಬಂದಾರ ಅಂದ ಮೇಲೆ ಈ ಬಾರಿ ಪಕ್ಕಾ ಕಾಂಗ್ರೆಸ್ನವರನ್ನು ಕಾರ್ಯಕರ್ತರೇ ಕೆಡವುತ್ತಾರೆ.

ರಾಮಮಂದಿರ ಆಗುತ್ತಿರುವುದು ಖುಷಿ ಪಡೋದು ಒಂದು ಭಾಗ. ಆದರೆ ಯಾರ ಸೀಮ್ ಕಾರ್ಡಗೆ ವೈರಸ್ ಹತ್ತಿದೆ ಅವರ ವಿರೋಧ ಮಾಡಾತ್ತಾರೆ ಎಂದು ನಾ ಹೋಗೋದಿಲ್ಲ ,ನಾ ಹೋಗೋದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಟಾಂಗ್ ಕೊಟ್ಟರು. 1990 ರಿಂದ 2000 ತನಕ ಎಲ್ಲಾ ಬಿಜೆಪಿ ನಾಯಕರು, ವೆಂಕಯ್ಯ ನಾಯ್ಡು ಗೋಮಟೇಶನಲ್ಲಿ ನಡೆದ ಬಿಜೆಪಿ ಸಭೆಗೆ ಬಂದಿದ್ದರು. ಸಂಜಯ ಪಾಟೀಲ ಹೆಲ್ಮೆಟ್ ಕೊಡುತ್ತಿದ್ದಾರೆ ಅದನ್ನುತಲೆಗೆ ಹಾಕೊಂಡ ಓಡಾಡಿ, ಪೋಲಿಸರು ಹಿಡದರೆ ನಿಮ್ಮನ್ನು ಬಿಟ್ಟು ಕಳುಹಿಸುತ್ತಾರೆ ಎಂದು ಹಾಸ್ಯ ಚಟಾಕಿ ಸಿಡಿಸಿದರು. 

Tap to resize

Latest Videos

ಕೊಡಗಿನ ಕಣಿವೆ ರಾಮಲಿಂಗೇಶ್ವರ ದೇವಾಲಯದಲ್ಲಿ ಮರಳಿನ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದ ಶ್ರೀರಾಮ

ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಸೋನಿಯಾ ಗಾಂಧಿ ಮಗ ರಾಹುಲ್ ಗಾಂಧಿ ಮದುವೆ ಆಗಿಲ್ಲಾ ಮಕ್ಕಳು ಹುಟ್ಟಬಹುದು. ಆದರೆ ನನ್ನ ನರೇಂದ್ರ ಮೋದಿಗೆ ಚಿಂತಿ ಇರುವುದು ದೇಶದ ಬಗ್ಗೆ ಮಾತ್ರ. ನಮ್ಮ ನರೇಂದ್ರ ಮೋದಿಗೆ ಮದುವೆ ಆಗಿಲ್ಲ ಅದಕ್ಕೆ ದೇಶದ ಬಗ್ಗೆ ಮಾತ್ರ ಚಿಂತೆ. ಆದರೆ ನಾವು ಬಿಜೆಪಿ ಕಾರ್ಯಕರ್ತರಾಗಿ ಏನಾದರೂ ಗುರಿ ಏನಾಗಿರಬೇಕು ಗೊತ್ತಾ. ನಮ್ಮ ಕಾರ್ಯಕರ್ತರ ಗುರಿ ಒಂದೆ ಆಗಿರಬೇಕು ಕಮಲ,ಬಿಜೆಪಿ,ನರೇಂದ್ರ ಮೋದಿ ಬೆಳೆಸುವ ಕೆಲಸ ಅಷ್ಟೇ ಇರಬೇಕು ಎಂದರು.

ಟಿಪ್ಪು ಜಯಂತಿ ಮಾಡುವವರು ಕಾಂಗ್ರೇಸನಲ್ಲಿ ಇದ್ದಾರೆ. ಇದರಿಂದಾಗಿ ರಾಮಮಂದಿರ ಕಟ್ಟಲು 500 ವರ್ಷ ಕಾಯಬೇಕಾಯಿತು. ಅದು ನಮ್ಮ ನರೇಂದ್ರ ಮೋದಿ ಬಂದ ಮೇಲೆ ಇಂತಹ ಕೆಲಸ ಆಗಿದೆ. ನಮ್ಮವರು ನಮ್ಮನ್ನು ಸೋಲಿಸುತ್ತಾರೆ ಅವರು ಒಬ್ಬ ತಂದೆ ತಾಯಿಗೆ ಹುಟ್ಟಿರುವುದಿಲ್ಲ. ಸೋಲಿಸುವ ಕೆಲಸ ಮಾಡುವುದು ಬೇಡ, ನಾವೆಲ್ಲರೂ ಕೂಡಿ ಒಟ್ಟಾಗಿ ಕೆಲಸ ಮಾಡೋಣ ಎಂದ ಅವರು, ನಮ್ಮ ಕಾರ್ಯಕರ್ತರು ಹೆಲ್ಮೆಟ್ ಇಲ್ಲದೆ ಸಾವನ್ನಪ್ಪಿದ್ದರು. ಅದಕ್ಕೆ ಹೆಲ್ಮೆಟ್ ಕೊಡುತ್ತಿದ್ದೇನೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ವಕ್ತಾರ ಎಂ ಬಿ ಜಿರಲಿ ಮಾತನಾಡಿ, ಬಿಜೆಪಿ ಮತ್ತು ಗೊಮಟೇಶ್ ಶಾಲೆಗೆ ಅವಿನಾಭಾವ ಸಂಭಂದ ಇದೆ. 

ನರೇಂದ್ರ ಮೋದಿ ಯುಗದ ಕಾಲದಲ್ಲಿ ನಾವು ಬದುಕೋದು ನಮಗೆ ಸಂತೋಷ ಅನಿಸುತ್ತಿದೆ. ನಮ್ಮ ದೇಶದ ನೆಲದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ಸುದ್ದಿ. ರಾಮಮಂದಿರ ನಿರ್ಮಾಣ ಮಾಡುವುದು ಗಾಂಧೀಜಿ ಅವರ ಕನಸಾಗಿತ್ತು. ಮಹಾತ್ಮ ಗಾಂಧೀಜಿ ಕನಸು ನುಚ್ಚು ನೂರು ಮಾಡಿದವರು ಕಾಂಗ್ರೆಸನವರು ಎಂದರು. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಹೋಗುತ್ತಿದ್ದೀರಾ ಎನ್ನುವ ವಿಚಾರಕ್ಕೆ ಅಹಂಕಾರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ ಅದಕ್ಕೆ ಎಲ್ಲಾ ಕಾರ್ಯಕರ್ತರು ಒಂದಾಗಬೇಕಿದೆ. 

ಚುನಾವಣೆ ಸಮಯದಲ್ಲಿ ಮಾತ್ರ ರಾಮಮಂದಿರ ಚರ್ಚೆ: ಸಚಿವ ಸಂತೋಷ ಲಾಡ್

ಮತ್ತೆ ನರೇಂದ್ರ ಮೋದಿ ಗೆದ್ದು ಧ್ವಜ ಹಾರಿಸುತ್ತಾರೆ. ಆದರೆ ದೇಶದಲ್ಲಿ ನಾವು ನಿರ್ಧಾರ ಮಾಡೋದಕ್ಕಿಂತ ಜನ ತಿರ್ಮಾನ ಮಾಡಿದ್ದಾರೆ. ದೇಶದಲ್ಲಿ ಭಜರಂಗದಳದ ಹೋರಾಟ ಕನಸು ನನಸಾಗಿದೆ. ಸಂಜಯ ಪಾಟೀಲ ಅವರು ಸದಾ ಹೋರಾಟಗಾರ, ಚಿಂತನಗಾರ,ಅವರು ಯುವಕರಿಗೆ ಹೆಲ್ಮೆಟ್ ನೀಡುತ್ತಿರುವುದು ಒಳ್ಳೆಯ ವಿಚಾರ ಎಂದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಸಂಸದೆ ಮಂಗಳಾ ಅಂಗಡಿ, ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.

click me!