ಸಚಿವ ಸಂಪುಟ ವಿಸ್ತರಣೆ ನಂತರ ಖಾತೆ ಹಂಚಿಕೆ ಪ್ರಹಸನ/ ಇಬ್ಬರು ಸಚಿವರಿಂದ ರಾಜೀನಾಮೆ ಸಾಧ್ಯತೆ/ 9 ದಿನದಲ್ಲಿ 3 ಬಾರಿ ಖಾತೆ ಬದಲಾವಣೆ/ ಮತ್ತೆ ಸುಧಾಕರ್ ಕೈ ಸೇರಿದ ವೈದ್ಯ ಶಿಕ್ಷಣ
ಬೆಂಗಳೂರು (ಜ. 25) ರಾಜ್ಯದ ಸಚಿವ ಸಂಪುಟ ಪ್ರಹಸನಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಲೇ ಇಲ್ಲ. ಪದೇ ಪದೇ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕಾರಣದ ವಲಯದಲ್ಲಿ ಕೇಳಿ ಬಂದಿದೆ.
undefined
ಖಾತೆ ಮರು ಹಂಚಿಕೆ ವೇಳೆ ಡಾ. ಕೆ ಸುಧಾಕರ್ ಅವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನ ಮಾಧುಸ್ವಾಮಿ ಅವರಿಗೆ ಸಿಎಂ ನೀಡಿದ್ದರು. ಇದರಿಂದ ಸುಧಾಕರ್ ಕುಪಿತಗೊಂಡಿದ್ದರು. ಇದೀಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಗೆ ಮತ್ತೆ ನೀಡಲಾಗಿದೆ.
'ಈ ಸರ್ಕಾರ ಬಲಿಷ್ಠವಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದಾರೆ'
ಖಾತೆ ಪುನರ್ ಹಂಚಿಕೆ ನಂತರ ವಲಸಿಗ ಸಚಿವರಿಂದ ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಮಣಿದ ಯಡಿಯೂರಪ್ಪ ಮತ್ತೆ ತೀರ್ಮಾನ ಬದಲಾಯಿಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಆನಂದ್ ಸಿಂಗ್ ಅವರಿಗೆ ಮೂಲ ಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ನೀಡಿದ್ದಾರೆ. ತಮ್ಮಿಂದ ವೈದ್ಯಕೀಯ ಖಾತೆ ಕಸಿದುಕೊಂಡ ಬೆಳವಣಿಗೆಯಿಂದ ತೀವ್ರ ಆಕ್ರೋಶಗೊಂಡಿದ್ದ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆಗೆ ವೈದ್ಯಕೀಯ ಇಲಾಖೆ ಮರಳಿ ನೀಡಲಾಗಿದೆ.
ಸಣ್ಣ ನೀರಾವರಿ ಖಾತೆ ಕೈತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡು ಸಚಿವ ಸಂಪುಟ ಸಭೆಯಿಂದಲೇ ದೂರ ಉಳಿದಿದ್ದ ಜೆ.ಸಿ. ಮಾಧು ಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆಯನ್ನು ನೀಡಿ ತೃಪ್ತಿಪಡಿಸಲಾಗಿದೆ. ಆದರೆ ಈ ತೀರ್ಮಾನಗಳು ಮುಂದೆ ಯಾವ ರಾಜಕಾರಣದ ಬೆಳವಣಿಗೆಗೆ ನಾಂದಿಯಾಗಲಿದೆ ಎನ್ನುವುದು ಗೊತ್ತಿಲ್ಲ.
ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿರುವ ಆನಂದ್ ಸಿಂಗ್ ಎಲ್ಲವೂ ಸರಿ ಇದೆ ಎಂಬ ಮಾತುಗಳನ್ನು ಆಡಿದ್ದಾರೆ. ಒಂಭತ್ತು ದಿನದಲ್ಲಿ ಮೂರು ಸಾರಿ ಖಾತೆ ಬದಲಕಾವಣೆಯಾಗಿದೆ.