ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ/ ನನ್ನ ರೈತರು ಟ್ರಾಕ್ಟರ್ ಗಳಲ್ಲಿ ನಾಳೆ ಬೆಂಗಳೂರಿಗೆ ಬರುತ್ತಾರೆ ಎಂಬುದನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ/ ನಮ್ಮ ರೈತರಿಗೆ ಭೂಮಿ ಉಳುಮೆ ಮಾಡಲಿಕ್ಕೆ ಹಣ ಇಲ್ಲ/ ಕೇಂದ್ರ ಸರಕಾರ ಡೀಸೆಲ್ ಬೆಲೆಯನ್ನ 80ರೂ ಮಾಡಿದೆ/ ಪ್ರತಿಭಟನೆ ಹೆಸರಿನಲ್ಲಿ ರೈತರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ
ಚನ್ನಪಟ್ಟಣ(ಜ. 25) ನನ್ನ ರೈತರುಗಳು ಟ್ರಾಕ್ಟರ್ ಗಳಲ್ಲಿ ನಾಳೆ ಬೆಂಗಳೂರಿಗೆ ಬರುತ್ತಾರೆ ಎಂಬುದನ್ನ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮ್ಮ ರೈತರು ತಮ್ಮ ಭೂಮಿ ಉಳುಮೆ ಮಾಡಲು ಡೀಸೆಲ್ ಹಣ ಇಲ್ಲ. ಕೇಂದ್ರ ಸರಕಾರ ಡೀಸೆಲ್ ಬೆಲೆಯನ್ನ 80 ರೂ. ಮಾಡಿದೆ. ನಮ್ಮ ರೈತರು ರಾಜ್ಯದ ನಾನಾ ಜಿಲ್ಲೆಗಳಿಂದ ಬೆಂಗಳೂರಿಗೆ ಬರಲು ಟ್ರಾಕ್ಟರ್ ಗಳಿಗೆ ಡಿಸೇಲ್ ಹಾಕುವುಷ್ಟು ಆರ್ಥಿಕ ಸಬಲರನ್ನಾಗಿ ಅವರನ್ನು ಸರ್ಕಾರ ಇಟ್ಟಿದೇಯಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ದಶ ದಿಕ್ಕುಗಳಿಂದ ಬೆಂಗಳೂರಿಗೆ ರೈತರಿಗೆ ಲಗ್ಗೆ
ಕೆಲವರು ರಾಜಕೀಯ ಬಳಕೆಗೆ ಇಂತಹ ಪ್ರತಿಭಟನೆಗಳನ್ನ ನಡೆಸಿ ರೈತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಕೆಲವು ಪಟ್ಟಬದ್ದ ಹಿತಾಸಕ್ತಿಗಳು ರೈತರನ್ನ ಬಳಸಿಕೊಳ್ಳುತ್ತಿದ್ದಾರೆ. ರಾಮನಗರದಲ್ಲಿ ಒಬ್ಬ ಕಾಂಗ್ರೆಸ್ ಪಕ್ಷದ ದಾನ ಶೂರ ಕರ್ಣ ಇದ್ದಾನೆ. ಆತ ರಾಮನಗರದ ರೈತರು ಟ್ರಾಕ್ಟರ್ ತನ್ನಿ ಡೀಸೆಲ್ ಹಾಕಿಸುತ್ತೇನೆ ಅಂತಾ ಆಫರ್ ಕೊಟ್ಟಿದ್ದಾನೆ ಎಂಬ ಮಾಹಿತಿ ಇದೆ ಎಂದು ಡಿಕೆಶಿ ಆಪ್ತ ಇಕ್ಬಾಲ್ ಹುಸೇನ್ ಗೆ ಟಾಂಗ್ ನೀಡಿದರು.
ಇದೇ ರೀತಿ ರಾಜ್ಯದ ಎಲ್ಲಾ ಕಡೆ ನಡೆಯುತ್ತಿದೆ. ರೈತರನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.