ಸರ್ಕಾರದ ಸಂಪುಟ ಪುನರಚನೆ ಹಾಗೂ ಖಾತೆ ಹಂಚಿಕೆ ಗೊಂದಲದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ/ ಎಲ್ಲವೂ ಸರಿಯಾಗಿದೆ ಬಿಡಿ/ ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ/ ನಾನು ಕಾಂಗ್ರೆಸ್ ನ ರೈತ ವಿಭಾಗಕ್ಕೆ ಸೂಚನೆ ಕೊಟ್ಟಿದ್ದೇನೆ/ ರೈತರಿಗೆ ಬೇಕಾದ ಎಲ್ಲಾ ನೆರವನ್ನೂ ಕೊಡುತ್ತೇವೆ.
ಮೈಸೂರು(ಜ. 25) 'ಈ ಸರ್ಕಾರ ಬಲಿಷ್ಠವಾಗಿದೆ. ಸರ್ಕಾರಕ್ಕೆ ಬಹಳಷ್ಟು ಸಂಖ್ಯಾ ಬಲವಿದೆ. ಸರ್ಕಾರದಲ್ಲಿರುವವರು ಎಲ್ಲರೂ ತುಂಬಾ ಒಗ್ಗಟ್ಟಾಗಿದ್ದಾರೆ ಸರ್ಕಾರದಲ್ಲಿ ಏನೇನು ಗೊಂದಲವಿಲ್ಲ. ಇನ್ನು ಮುಖ್ಯಮಂತ್ರಿಗಳೋ ಬಹಳ ದೊಡ್ಡವರು' ಹೀಗೆಂದು ಹೇಳಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.
ರಾಜ್ಯ ಸರ್ಕಾರ ಮತ್ತು ಸಚಿವ ಸಂಪುಟ ವಿಸ್ತರಣೆ ಮತ್ತು ನಂತರದ ಖಾತೆ ಹಂಚಿಕೆ ಗೊಂದಲವನ್ನು ಶಿವಕುಮಾರ್ ಲೇವಡಿ ಮಾಡಿದ್ದಾರೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನಾನು ಕಾಂಗ್ರೆಸ್ ನ ರೈತ ವಿಭಾಗಕ್ಕೆ ಸೂಚನೆ ಕೊಟ್ಟಿದ್ದೇನೆ. ರೈತರಿಗೆ ಬೇಕಾದ ಎಲ್ಲಾ ನೆರವನ್ನೂ ಕೊಡುತ್ತೇವೆ. ಟ್ರ್ಯಾಕ್ಟರ್ ಪರೇಡ್ ನಿಂದ ಜನಸಾಮಾನ್ಯರಿಗೆ ತೊಂದರೆಯಾಗಬಹುದು. ಅದು ಒಂದೆರಡು ಗಂಟೆಗಳು ಮಾತ್ರ ಎಂದಿದ್ದಾರೆ.
undefined
'ಡಿಸೇಲ್ ಹಾಕುವಷ್ಟು ದುಡ್ಡು ನನ್ನ ರೈತರ ಬಳಿ ಇದೆಯಾ, ಇದೆಲ್ಲಾ ಆಫರ್ ಕೆಲಸ'
ರೈತ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವವನು, ಅದಕ್ಕಾಗಿ ಎಲ್ಲವನ್ನು ಸಹಿಸಿಕೊಳ್ಳಿ. ಸರ್ಕಾರ ರೈತರ ಪ್ರತಿಭಟನೆಯನ್ನು ಬೆಂಬಲಿಸಬೇಕು, ಹತ್ತಿಕ್ಕುವುದಲ್ಲ. ಬಿಜೆಪಿಯವರಿಗೆ ತೊಂದರೆಯಾದಾಗ ಪ್ರತಿಭಟಿಸಿಲ್ಲವಾ? ಒಂದು ವೇಳೆ ಟ್ರಾಕ್ಟರ್ ಜಪ್ತಿಮಾಡಿ ಕೇಸ್ ಹಾಕಿದ್ರೆ ಜೈಲಿಗೆ ಹೋಗಲು ಸಿದ್ಧ. ಅಲ್ಲಿಂದಲೇ ಜೈಲ್ ಬರೋ ಶುರುಮಾಡುತ್ತೇವೆ ಎಂದು ಮೈಸೂರಿನಲ್ಲಿ ಶಿವಕುಮಾರ್ ಹೇಳಿದರು.