ಮೆಘಾಲಯ ಸಿಎಂ ಸಾಂಗ್ಮಾ ರಾಜೀನಾಮೆ, ಬಿಜೆಪಿ ಬೆಂಬಲ ಕೋರಿದ ಬೆನ್ನಲ್ಲೇ ಸರ್ಕಾರ ರಚಿಸಲು ಹಕ್ಕು ಮಂಡನೆ!

Published : Mar 03, 2023, 03:38 PM ISTUpdated : Mar 03, 2023, 03:42 PM IST
ಮೆಘಾಲಯ ಸಿಎಂ ಸಾಂಗ್ಮಾ ರಾಜೀನಾಮೆ, ಬಿಜೆಪಿ ಬೆಂಬಲ ಕೋರಿದ ಬೆನ್ನಲ್ಲೇ ಸರ್ಕಾರ ರಚಿಸಲು ಹಕ್ಕು ಮಂಡನೆ!

ಸಾರಾಂಶ

ಮೆಘಾಲಯ ಚುನಾವಣೆಯಲ್ಲಿ ಎನ್‌ಪಿಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಫಲಿತಾಂದ ಬೆನ್ನಲ್ಲೇ ಅಮಿತ್ ಶಾಗೆ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದರು. ಶಾ ಜೊತೆಗಿನ ಮಾತುಕತೆ ಬಳಿಕ ಇದೀಗ ರಾಜ್ಯಪಾಲರನ್ನು ಭೇಟಿಯಾಗಿರುವ ಎನ್‌ಪಿಪಿ ಮುಖ್ಯಸ್ಥ, ಸಿಎಂ ಕೊನ್ರಾಡ್ ಸಾಂಗ್ಮಾ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮೆಘಾಲಯ(ಮಾ.03): ಈಶಾನ್ಯ ರಾಜ್ಯಗಳ ಪೈಕಿ ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಸ್ಪಷ್ಟ ಬಹುತ ಪಡೆದುಕೊಂಡಿದೆ. ಇದೀಗ ಸರ್ಕಾರ, ಸಚಿವರ ಪ್ರಮಾಣ ವಚನ ದಿನಾಂಕಗಳ ಕುರಿತು ಚರ್ಚೆಯಾಗುತ್ತಿದೆ. ಆದರೆ ಮೆಘಾಲಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. 27 ಸ್ಥಾನ ಗೆದ್ದುಕೊಂಡಿರುವ ಎನ್‌ಪಿಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿ ಮಾತುಕತೆ ನೆಡೆಸಿದ ಹಾಲಿ ಸಿಎಂ ಕೊನ್ರಾಡ್ ಸಾಂಗ್ಮಾ, ಬೆಜೆಪಿ ಬೆಂಬಲ ಕೋರಿದ್ದರು. ಇಷ್ಟೇ ಅಲ್ಲ ಸರ್ಕಾರ ರಚನೆ ಕುರಿತು ಚರ್ಚಿಸಿದ್ದರು. ಶಾ ಜೊತೆಗಿನ ಚರ್ಚೆ ಬಳಿಕ ಇಂದು ರಾಜ್ಯಪಾಲರ ಭೇಟಿಯಾದ ಸಾಂಗ್ಮಾ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟೇ ಅಲ್ಲ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಕೊನಾರ್ಡ್ ಸಾಂಗ್ಮ ನೇತೃತ್ವದ ಎನ್‌ಪಿಪಿ 27 ಸ್ಥಾನ ಗೆದ್ದುಕೊಂಡಿದೆ. ಇಲ್ಲಿ ಸರ್ಕಾರ ರಚಿಸವು ಬಹುಮತ ನಂಬರ್ 31. ಇದೀಗ ಬಿಜೆಪಿಯ 2 ಸ್ಥಾನ ಮಾತ್ರ ಗೆದ್ದುಕೊಂಡಿದೆ. ಬಿಜೆಪಿ ಈಗಾಗಲೇ ಎನ್‌ಪಿಪಿಗೆ ಬೆಂಬಲ ಸೂಚಿಸಿದೆ. ಆದರೂ ಸಂಖ್ಯಾಬಲ 29 ಆಗಲಿದೆ. ಹೀಗಾಗಿ ಸರ್ಕಾರ ರಚನೆ ಹೇಗೆ? ಅನ್ನೋ ಪ್ರಶ್ನೆ ಕೇಳಿಬರುತ್ತಿದೆ. ಮಾಧ್ಯಮದ ಜೊತೆ ಪ್ರತಿಕ್ರಿಯೆ ನೀಡಿರುವ ಸಾಂಗ್ಮಾ, ಬಿಜೆಪಿ ಸೇರಿದಂತೆ ಇತರ ಪಕ್ಷೇತರರು ಬೆಂಬಲ ನೀಡಿದ್ದಾರೆ. ಈಗಾಗಲೇ ನಮಗೆ ಸ್ಪಷ್ಟ ಬಹುಮತ ದಾಟಿದೆ. ಇನ್ನೂ ಹಲವರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಯಾವುದೇ ಆತಂಕವಿಲ್ಲದೆ ಸರ್ಕಾರ ರಚನೆಯಾಗಲಿದೆ ಎಂದು ಸಾಂಗ್ಮಾ ಹೇಳಿದ್ದಾರೆ.

ತ್ರಿಪುರದಲ್ಲಿ ಮತ್ತೆ ಸಾಹಾ, ನಾಗಲ್ಯಾಂಡ್‌ಗೆ 5ನೇ ಬಾರಿ ರಿಯೋ, ಮೇಘಾಲಯದಲ್ಲಿ ಸಂಗ್ಮಾಗೆ ಮತ್ತೆ ಗಾದಿ

ಅತೀದೊಡ್ಡ ಪಕ್ಷವಾಗಿ ಹೊಮ್ಮಿದ ಬೆನ್ನಲ್ಲೇ ಇಂದು ರಾಜ್ಯಪಾಲ ಪಾಗು ಚೌಹ್ವಾಣ್, ಎನ್‌ಪಿಪಿ ಪಕ್ಷದ ಮುಖ್ಯಸ್ಥರನ್ನು ರಾಜಭವನಕ್ಕೆ ಆಹ್ವಾನಿಸಿದೆ. ಎನ್‌ಪಿಪಿ ನಾಯಕರು, ಬಿಜೆಪಿ ನಾಯಕರು ಸೇರಿದಂತೆ ಇತರ ಕೆಲ ಪಕ್ಷೇತರರ ಜೊತೆ ಸೇರಿ ರಾಜಭವನಕ್ಕೆ ತೆರಲಿದ ಸಾಂಗ್ಮಾ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

 

 

ಮೇಘಾಲಯ ವಿಧಾನಸಭೆಯ 59 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾನ್ರಾಡ್‌ ಸಂಗ್ಮಾ ನೇತೃತ್ವದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) 27 ಪಕ್ಷಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಂದರೆ ಬಹುಮತಕ್ಕೆ ಅಗತ್ಯವಾದ 30 ಸ್ಥಾನಗಳಿಗೆ 3 ಸ್ಥಾನಗಳ ಕೊರತೆ ಎದುರಿಸಿದೆ. ಹೀಗಾಗಿ ಅದು ಸರ್ಕಾರದ ಹಿಂದಿನ ಮಿತ್ರಪಕ್ಷವಾಗಿದ್ದ ಬಿಜೆಪಿಯ ಬೆಂಬಲ ಕೋರಿದ್ದು, ಬಿಜೆಪಿ ಕೂಡಾ ಬೆಂಬಲ ಪ್ರಕಟಿಸಿದೆ. ಹೀಗಾಗಿ 2 ಸ್ಥಾನ ಗೆದ್ದ ಬಿಜೆಪಿ ಸರ್ಕಾರದ ಭಾಗವಾಗುವುದು ಖಚಿತವಾಗಿದೆ.

ಉಳಿದಂತೆ ಎನ್‌ಪಿಪಿಯ ಮಿತ್ರಪಕ್ಷ ಯುಡಿಪಿ 11 ಸ್ಥಾನ ಗೆದ್ದು 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್‌ ಮತ್ತು ಮಮತಾ ನೇತೃತ್ವದ ಟಿಎಂಸಿ ತಲಾ 5 ಸ್ಥಾನ ಗೆದ್ದಿವೆ. ನೂತನವಾಗಿ ರಚನೆಯಾಗಿದ್ದ ವಿಪಿಪಿ 4 ಸ್ಥಾನ, ಎಚ್‌ಎಸ್‌ಪಿಡಿಪಿ ಮತ್ತು ಪಿಡಿಎಫ್‌ ತಲಾ 2 ಸ್ಥಾನ ಗೆದ್ದಿವೆ. ಇಬ್ಬರು ಪಕ್ಷೇತರರು ಕೂಡಾ ಗೆಲುವು ಸಾಧಿಸಿದ್ದಾರೆ. 

ಕರ್ನಾಟಕ ಬಿಜೆಪಿ ಚುನಾವಣೆಗೆ ದೇಶದ ದೇವಮೂಲೆ ಫಲಿತಾಂಶ ಬೂಸ್ಟರ್ ಡೋಸ್

ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಇದೀಗ 2ನೇ ಬಾರಿಗೆ ಮುಖ್ಯಮಂತ್ರಿ ಗಾದಿಯೇರುತ್ತಿದ್ದಾರೆ. ಅವರ ತಂದೆ ಪಿ.ಎ.ಸಂಗ್ಮಾ ಸ್ಥಾಪಿಸಿದ ನ್ಯಾಷನಲ್‌ ಪೀಪಲ್ಸ್‌ ಪಕ್ಷ (ಎನ್‌ಪಿಪಿ)ವನ್ನು ಮುನ್ನಡೆಸುತ್ತಿರುವ ಸಂಗ್ಮಾ ಇದೀಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರಕ್ಕೇರಲು ಸಜ್ಜಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ