ಸಾವರ್ಕರ್‌ ಬದಲು ಚನ್ನಮ್ಮ, ರಾಯಣ್ಣರ ಯಾತ್ರೆ ಮಾಡಲಿ: ಎಂ.ಬಿ.ಪಾಟೀಲ್‌

By Govindaraj S  |  First Published Aug 26, 2022, 1:08 PM IST

ಬಿಜೆಪಿ ನಾಯಕರು ಮಹಾರಾಷ್ಟ್ರದ ಸಾವರ್ಕರ್‌ ರಥಯಾತ್ರೆ ಬಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡದ ಹೋರಾಟಗಾರರ ರಥಯಾತ್ರೆ ನಡೆಸಬೇಕು. ಆಗ ನಾವೂ ಆ ರಥಯಾತ್ರೆಯಲ್ಲಿ ಭಾಗವಹಿಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.


ವಿಜಯಪುರ (ಆ.26): ಬಿಜೆಪಿ ನಾಯಕರು ಮಹಾರಾಷ್ಟ್ರದ ಸಾವರ್ಕರ್‌ ರಥಯಾತ್ರೆ ಬಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡದ ಹೋರಾಟಗಾರರ ರಥಯಾತ್ರೆ ನಡೆಸಬೇಕು. ಆಗ ನಾವೂ ಆ ರಥಯಾತ್ರೆಯಲ್ಲಿ ಭಾಗವಹಿಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾವರ್ಕರ್‌ ರಥಯಾತ್ರೆ ಬದಲು ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಸುರಪುರ ನಾಯಕರ ಭಾವಚಿತ್ರದ ರಥಯಾತ್ರೆ ಮಾಡಬೇಕು. ಹೀಗೆ ಮಾಡಿದರೆ ತಾವೂ ಈ ರಥಯಾತ್ರೆಯಲ್ಲಿ ಭಾಗವಹಿಸುತ್ತೇವೆ. 

ಒಂದೊಮ್ಮೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕರ್ನಾಟಕದ ಹೋರಾಟಗಾರರ ಭಾವಚಿತ್ರ ರಥಯಾತ್ರೆ ಮಾಡದಿದ್ದರೆ ನಾವು ಮಾಡುತ್ತೇವೆ ಎಂದರು. ಹೋರಾಟಗಾರರಿಗೆ ಗೌರವ ಸಲ್ಲಿಸಲು ಕಾರ್ಯಕ್ರಮ ರೂಪಿಸುವ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕಾಂಗ್ರೆಸ್‌ ರಾಜ್ಯ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಸಾವರ್ಕರ್‌ ಬ್ರಿಟಿಷರಿಗೆ ಐದು ಕ್ಷಮಾಪಣೆ ಪತ್ರ ಬರೆದಿದ್ದಾರೆ. ಬಿಜೆಪಿಯವರು ನೆರೆ ಮಹಾರಾಷ್ಟ್ರದ ವಿವಾದಾತ್ಮಕ ವ್ಯಕ್ತಿಯ ಫೋಟೋಗಳನ್ನು ರಥ ಯಾತ್ರೆ ಮಾಡುವುದು ಸರಿಯಲ್ಲ. ಈ ರಥಯಾತ್ರೆಗೆ ಚಾಲನೆ ನೀಡಿದ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಇದು ಶೋಭೆ ತರುವುದಿಲ್ಲ ಎಂದರು.

Tap to resize

Latest Videos

ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಹೋರಾಟ: ಎಂ.ಬಿ.ಪಾಟೀಲ್‌

ವೀರಸಾವರ್ಕರಿಗೆ ಅಪಮಾನ ಸಹಿಸದು: ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ವೀರಸಾವರ್ಕರ ಅವರನ್ನು ಹಾಗೂ ಹಿಂದೂ ಧರ್ಮವನ್ನು ಅವಹೇಳನ ಮಾಡಿ, ಹಿಂದೂ ಸಮಾಜಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಭಾರತಿಯ ಜನತಾ ಪಕ್ಷದ ಜಿಲ್ಲಾ ವಕ್ತಾರರ ಡಾ.ಸುರೇಶ ಬಿರಾದಾರ ಆರೋಪಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಸಾವರ್ಕರವರು ಒಬ್ಬ ದೇಶ ಭಕ್ತ ಹಾಗೂ ಸ್ವಾತಂತ್ರ್ಯ ಹೊರಾಟಗಾರರು, ಇವರ ಭಾವಚಿತ್ರಗಳನ್ನು ತೆಗೆದು ಹಾಕುವುದು, ಕೆಲವು ಸ್ಥಳಗಳಲ್ಲಿ ಅವರ ಭಾವಚಿತ್ರವನ್ನು ಸುಟ್ಟುಹಾಕಿ ಅವರಿಗೆ ಕಾಂಗ್ರೆಸ್ಸಿಗರು ಪದೇಪದೇ ಅಪಮಾನ ಮಾಡುತ್ತಿದ್ದಾರೆ. 

ಇದನ್ನು ಖಂಡಿಸಿ ಭಾರತಿಯ ಜನತಾ ಪಕ್ಷದ ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟನೆ ಮಾಡಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಯಿತು. ಒಬ್ಬ ಸ್ವಾತಂತ್ರ್ಯ ಹೋರಟಗಾರನ ಫೋಟೊ ಅಂಟಿಸುವುದು ಅಪರಾಧ ಮಾಡಿದಂತೆ ಕಾಂಗ್ರೆಸ್‌ನವರು ಬಿಂಬಿಸುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ದೂರಿದ್ದಾರೆ. ಕಾಂಗ್ರೆಸ್ಸಿನವರು ವೀರಸಾವರ್ಕರ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಾಂಗ್ರೆಸಿಗರ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ. ವೀರಸಾವರ್ಕರ ಕುರಿತು ಕಾಂಗ್ರೆಸ್‌ ನಾಯಕರು ಸರಿಯಾಗಿ ಅಧ್ಯಯನ ಮಾಡಿ ಅವರ ಬಗ್ಗೆ ತಿಳಿದುಕೊಂಡು ಮಾತನಾಡಬೇಕು. ರಾಷ್ಟ್ರ ನಾಯಕರ ಭಾವಚಿತ್ರ ಅಂಟಿಸುವುದು ಅಪರಾದವೆಂದು ಯಾವ ಕಾನೂನು ಹೇಳುವುದಿಲ್ಲ ಎಂದರು.

ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡದಂತೆ ರಾಹುಲ್‌ ಗಾಂಧಿ ಸೂಚನೆ: ಎಂ.ಬಿ.ಪಾಟೀಲ್‌

ವೀರಸಾವರ್ಕರ ಅವರು ತಮ್ಮ ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ಹಿಂದೂ ಧರ್ಮದ ಏಳಿಗೆಗಾಗಿ ಮುಡುಪಾಗಿಟ್ಟಒಬ್ಬ ಹುತಾತ್ಮ. ಇಂಥಹ ಮಹಾನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ನಿಲ್ಲಿಸಬೇಕು. ತಾವುಗಳು ಕೂಡಾ ಈ ಭಾರತದೇಶದ ಪ್ರಜೆಗಳು ಎಂದು ಮರೆಯಬಾರದು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ, ಜೈಲು ನರಕಯಾತನೆಯನ್ನು ಅನ್ನುಭವಿಸಿದ ವೀರಸಾವರ್ಕರ ಅವರನ್ನು ದ್ವೇಶಿಸುವುದು ಮತ್ತು ಅವಹೇಳನ ಮಾಡುವುದು ಸುಸಂಸ್ಕೃತಿಯಲ್ಲ. ಕಾಂಗ್ರೆಸ್ಸಿಗರು ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲವಾದರೇ ನಮ್ಮ ಹೋರಾಟ ಇನ್ನಷ್ಟುತಿವೃಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

click me!