ಸುದೀಪ್‌ಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಂಜಪ್ಪ ಬೈಗುಳ

By Kannadaprabha NewsFirst Published Aug 26, 2022, 12:51 PM IST
Highlights
  • ಬಿಜೆಪಿ ಸುದೀಪ್‌ಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮಂಜಪ್ಪ ಬೈಗುಳ
  • ಫೇಸ್‌ಬುಕ್‌ನಲ್ಲಿ ಫೇಕ್‌ ಲೀಡರ್‌ ಅಂತಾ ಪ್ರತಿಕ್ರಿಯೆಗೆ ಗರಂ ಆಗಿರುವ ಆಡಿಯೋ ವೈರಲ್‌

ದಾವಣಗೆರೆ (ಆ.26) : ಫೇಸ್‌ಬುಕ್‌ ಪೇಜ್‌ನಲ್ಲಿ ಫೇಕ್‌ ಲೀಡ​ರ್‍ಸ್ ಎಂಬುದಾಗಿ ಕಾಮೆಂಟ್‌ ಮಾಡಿದ್ದ ಬಿಜೆಪಿ ಮುಖಂಡ ಸುದೀಪ್‌ಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ವೈರಲ್‌ ಆಗಿದೆ. ಹೊನ್ನಾಳಿಯ ಬಿಜೆಪಿ ಮುಖಂಡ ಸುದೀಪ್‌ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ವಾಕ್ಸಮರದಲ್ಲಿ ಮಂಜಪ್ಪ ತಮ್ಮ ಎದುರಾಳಿ ಪಕ್ಷದ ಸುದೀಪಗೆ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಎಚ್‌.ಬಿ.ಮಂಜಪ್ಪ ವೀಡಿಯೋ ಪೋಸ್ಟ್‌ ಮಾಡಿದ್ದ. ಆ ಪೋಸ್ಟ್‌ಗೆ ಫೇಕ್‌ ಲೀಡ​ರ್‍ಸ್ ಎಂಬುದಾಗಿ ಸುದೀಪ್‌ ಪ್ರತಿಕ್ರಿಯೆ ಹಾಕಿದ್ದರು. ಈ ವಿಚಾರಕ್ಕೆ ಮಂಜಪ್ಪ, ಸುದೀಪ್‌ ಮಧ್ಯೆ ಮಾತಿಗೆ ಮಾತು ಬೆಳೆದು, ಮಂಜಪ್ಪ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಇದಾಗಿದೆ.

ಯಾರಾಗ್ತಾರೆ ದಾವಣಗೆರೆ ಮೇಯರ್, ಉಪಮೇಯರ್? ಬಿಜೆಪಿಯಲ್ಲಿ ಶುರುವಾಗಿದೆ ಲೆಕ್ಕಾಚಾರ!

ಕೊಲೆ ಪ್ರಕರಣವೊಂದರಲ್ಲಿ ನಾನೇ ರಕ್ಷಣೆ ಮಾಡಿದೆ. ಗ್ರಾಪಂ ಚುನಾವಣೆಯಲ್ಲಿ ಗೆಲ್ಲುವ ಯೋಗ್ಯತೆಯೂ ಇಲ್ಲದ ನೀನು ನನ್ನ ಬಗ್ಗೆ ಮಾತನಾಡುತ್ತೀಯಾ? ನಿಮ್ಮ ಮಾವ ನೇಣು ಹಾಕಿಕೊಂಡು ಸತ್ತಾಗ ನಿಮ್ಮ ಕುಟುಂಬಸ್ಥರ ಹೆಸರು ಬರೆದಿಟ್ಟಿದ್ದ. ನೀವೆಲ್ಲಾ ಜೈಲಿಗೆ ಹೋಗದಂತೆ ಉಳಿಸಿದ್ದೇ ನಾನು ಎಂಬುದಾಗಿ ಮಂಜಪ್ಪ ಬಿಜೆಪಿಯ ಸುದೀಪ್‌ಗೆ ಆವಾಜ್‌ ಹಾಕಿದ್ದಾರೆ.

ಮೊಬೈಲ್‌ ಕರೆಯಲ್ಲಿ ಆಕ್ರೋಶ: ನಾನು, ಬೀರಪ್ಪ ಹೋಗಿ ಬರೆದಿರೋ ಲೆಟರ್‌ ತೆಗೆದುಕೊಂಡು ಹೊರಗೆ ಬಂದಿದ್ದೆವು. ಉದಯನಾಯ್ಕ ಇನ್ಸಪೆಕ್ಟರ್‌ ಕೊಲೆ ಕೇಸ್‌ನಲ್ಲಿ ಸಿಗಿಸುತ್ತಿದ್ದ. ನಾನೇ ಅಂಬಾಸಿಡರ್‌ ಕಾ ರ್‌ನಲ್ಲಿ ನಿನ್ನನ್ನು ಬಿಡಿಸಿಕೊಂಡು ಬಂದಿದ್ದು. ಅಂತಹ ನೀನು ಫೇಕ್‌ ಲೀಡರ್‌ ಅಂತಾ ಮೆಸೇಜ್‌ ಮಾಡುತ್ತೀಯಾ ಎಂಬುದಾಗಿ ಸುದೀಪ್‌ ವಿರುದ್ಧ ಎಚ್‌.ಬಿ.ಮಂಜಪ್ಪ ಮೊಬೈಲ್‌ ಕರೆಯಲ್ಲಿ ತೀವ್ರವಾಗಿ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ, ಮಂಜಪ್ಪ-ಸುದೀಪ್‌ ಪರಸ್ಪರರನ್ನು ಅವಾಚ್ಯವಾಗಿ ಬೈದಾಡಿಕೊಂಡಿದ್ದು, ಸದ್ಯ ಹೊನ್ನಾಳಿ ಕ್ಷೇತ್ರ, ಜಿಲ್ಲಾದ್ಯಂತ ಈ ಆಡಿಯೋ ಮೊಬೈಲ್‌ನಿಂದ ಮೊಬೈಲ್‌ಗಳಿಗೆ ಹರಿದಾಡುತ್ತಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಡಾ.ವೈ.ರಾಮಪ್ಪ ಉಚ್ಚಾಟನೆ:

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಸಮಿತಿಯು ಕೆಪಿಸಿಸಿ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ತಿಳಿಸಿದ್ದಾರೆ. ಕಾಂಗ್ರೆಸ್‌ನ ವಿವಿಧ ಸಮಾರಂಭಗಳಲ್ಲಿ ಡಾ. ವೈ.ರಾಮಪ್ಪ ಗಲಾಟೆ ಮಾಡುವ ಮೂಲಕ ಮುಖಂಡರು ಕಾರ್ಯಕರ್ತರಲ್ಲಿ ಭಯದ ವಾತಾವರಣ ನಿರ್ಮಿಸುವುದು, ಪಕ್ಷದ ಸಭೆಗಳಲ್ಲಿ ನಡೆದ ಸಣ್ಣ ಪುಟ್ಟವಿಚಾರಗಳಿಗೆ ಕಾರ್ಯಕರ್ತರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ವೈಯಕ್ತಿಕ ಜಾತಿ ನಿಂದನೆ ಪ್ರಕರಣ ದಾಖಲಿಸುವುದರಿಂದ ಪಕ್ಷಕ್ಕೆ ಮುಜುಗರವಾಗಿರುತ್ತದೆ.

ಕಾರಿಡಾರ್‌ ಯೋಜನೆ ಕೈಬಿಡಲು ಒತ್ತಡ ಹೇರುವೆ: ಶಾಸಕ ಶಾಮನೂರು ಶಿವಶಂಕರಪ್ಪ

ಡಾ. ವೈ.ರಾಮಪ್ಪನವರ ಇಂತಹ ನಡವಳಿಕೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮಹಿಳಾ ಮುಖಂಡರು ಭಯದಿಂದಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಇಂತಹ ಘಟನೆಗಳು ಪಕ್ಷ ಸಂಘಟನೆ ದೃಷ್ಟಿಯಿಂದ ಆರೋಗ್ಯಕರವಲ್ಲ ಎಂಬ ವಿಚಾರವನ್ನು ಸರ್ವಾನುಮತದಿಂದ ರಾಮಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸಲು ತೀರ್ಮಾನಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

click me!