ಮೇಯರ್‌ ಉಪ ಮೇಯರ್‌ ಚುನಾವಣೆ: ಪಾಲಿಕೆ ವಶಪಡಿಸಿಕೊಳ್ಳಲು ಕೈ ಕಾರ್ಯತಂತ್ರ

By Kannadaprabha News  |  First Published Jun 18, 2023, 5:07 AM IST

ದ್ಯ ಬಿಜೆಪಿ ವಶದಲ್ಲಿರುವ ಹು-ಧಾ ಮಹಾನಗರ ಪಾಲಿಕೆ ಆಡಳಿತವನ್ನು ಬಿಟ್ಟು ಕೊಡದಿರುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ತಮ್ಮೆಲ್ಲ ಸದಸ್ಯರನ್ನು ರೆಸಾರ್ಚ್‌ಗೆ ಕರೆದೊಯ್ದು ರೆಸಾರ್ಚ್‌ ರಾಜಕೀಯ ನಡೆಸಿದರೆ, ಇತ್ತ ಕೈ ಮುಖಂಡರು ಯಾವ ಕಾರ್ಯತಂತ್ರ ರೂಪಿಸುವ ಮೂಲಕ ಪಾಲಿಕೆ ವಶಪಡಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.


ಧಾರವಾಡ (ಜೂ.18) ಸದ್ಯ ಬಿಜೆಪಿ ವಶದಲ್ಲಿರುವ ಹು-ಧಾ ಮಹಾನಗರ ಪಾಲಿಕೆ ಆಡಳಿತವನ್ನು ಬಿಟ್ಟು ಕೊಡದಿರುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ತಮ್ಮೆಲ್ಲ ಸದಸ್ಯರನ್ನು ರೆಸಾರ್ಚ್‌ಗೆ ಕರೆದೊಯ್ದು ರೆಸಾರ್ಚ್‌ ರಾಜಕೀಯ ನಡೆಸಿದರೆ, ಇತ್ತ ಕೈ ಮುಖಂಡರು ಯಾವ ಕಾರ್ಯತಂತ್ರ ರೂಪಿಸುವ ಮೂಲಕ ಪಾಲಿಕೆ ವಶಪಡಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು, ಹುಬ್ಬಳ್ಳಿ ಧಾರವಾಡ ಭಾಗದ ಜನಪ್ರತಿನಿಧಿಗಳು ಹಾಗೂ ನಾಯಕರ ಜೊತೆ ಸಭೆ ನಡೆಸಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಬಗ್ಗೆ ಚರ್ಚಿಸಿದರು.

Tap to resize

Latest Videos

ಹು-ಧಾ ಪಾಲಿಕೆ ಚುನಾವಣೆ: 'ಆಪರೇಷನ್ ಹಸ್ತ' ಭೀತಿಯಿಂದ ರೆಸಾರ್ಟ್ ಸೇರಿದ ಬಿಜೆಪಿ ಸದಸ್ಯರು

ಅಧಿಕಾರ ಪಡೆದುಕೊಳ್ಳುವ ಕಾರ್ಯತಂತ್ರದ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ. ಸಭೆಯಲ್ಲಿ ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌, ಶಾಸಕರಾದ ವಿನಯ್‌ ಕುಲಕರ್ಣಿ, ಎನ್‌.ಎಚ್‌. ಕೋನರಡ್ಡಿ, ಪ್ರಸಾದ ಅಬ್ಬಯ್ಯ ಹಾಗೂ ಮುಖಂಡರಾದ ಅನಿಲ ಪಾಟೀಲ…, ಇಸ್ಮಾಯಿಲ್‌ ತಮಟಗಾರ ಇದ್ದರು. ತಮ್ಮ ಸದಸ್ಯರು ಸೇರಿದಂತೆ ಪಕ್ಷೇತರ, ಎಐಎಂಐಎಂ ಹಾಗೂ ಬಿಜೆಪಿ ಸದಸ್ಯರನ್ನು ಹೇಗೆ ಒಟ್ಟುಗೂಡಿಸಿ ತಮ್ಮ ಬಲ ತೋರಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.

ಧಾರವಾಡ: ಮಳೆಗಾಲ ಎದುರಿಸಲು ಅಗತ್ಯ ಸಿದ್ಧತೆ ಕೈಗೊಂಡ ಮಹಾನಗರ ಪಾಲಿಕೆ

ಚುನಾವಣೆಗೆ ಮೂರೇ ದಿನಗಳಿದ್ದರೂ ಏನಾದರೂ ಮಾಡಿ ಗದ್ದುಗೆ ಏರಬೇಕೆಂಬ ತವಕದಲ್ಲಿ ಕೈ ಮುಖಂಡರು ಪ್ರಯತ್ನದಲ್ಲಿದ್ದು ಕೊನೆ ಕ್ಷಣದಲ್ಲಿ ಏನಾಗಲಿದೆ ನೋಡಬೇಕಿದೆ.

 

click me!