ಮೊನ್ನೆ ಶಿರಾದಲ್ಲಿ ಬಿಜೆಪಿಯನ್ನು ಗೆಲ್ಲಿಸುವುದರಲ್ಲಿ ಪ್ರಮುಖ ರೂವಾರಿ ಬಿ.ವೈ ವಿಜಯೇಂದ್ರ ಇದೀಗ ಉತ್ತರ ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದು, ಮೊದಲ ಭೇಟಿ ವೇಳೆಯೇ ರಾಯಚೂರು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ರಾಯಚೂರು, (ನ.21): ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಬೇಕಿದ್ದು, ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಆಗಲೇ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜ್ಯ ಕಾರ್ಯಕಾರಣಿ ಸಭೆ ನಡೆಸುವ ಮೂಲಕ ಮಸ್ಕಿ ಬೈ ಎಲೆಕ್ಷನ್‌ಗೆ ರಣಕಹಳೆ ಊದಿದೆ.
ಹೌದು... ಮಸ್ಕಿ ಉಪಚುನಾವಣೆ ಗುರಿ ಇಟ್ಟುಕೊಂಡು ಶುಕ್ರವಾರ ಸಿಂಧನೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕರಣಿ ಸಭೆ ನಡೆಸಿದ್ದು, ಸಭೆ ಬಳಿಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ರಾಯಚೂರಿಗೆ ತಮ್ಮ ಮೊದಲ ಭೇಟಿ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ.
undefined
ಮಸ್ಕಿ ಬೈ ಎಲೆಕ್ಷನ್‌ಗೆ ಸಂಘಟನಾ ಚತುರ ಎಂಟ್ರಿ, ಮಹತ್ವದ ಘೋಷಣೆ
ಮಸ್ಕಿ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ಅಧಿಕವಾಗಿರುವುದನ್ನ ಮನಗಂಡು ವಿಜಯೇಂದ್ರ ಅವರು ವಿರುಪಾಕ್ಷಪ್ಪನವರನ್ನ ಸಂಪರ್ಕಿಸಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ವಿಜಯೇಂದ್ರ ಅವರು ಕೆವಿಎಸ್ ಭೇಟಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಕ್ರಿಯೆಟ್ ಮಾಡಿ ಹೋಗಿದ್ದಾರೆ. ಇದು ಒಂದು ರಾಜಕೀಯ ತಂತ್ರವೂ ಕೂಡ ಹೌದು.
ಸಂಭನೀಯ ಅಭ್ಯರ್ಥಿ ಪ್ರತಿಕ್ರಿಯೆ
ಇನ್ನು ಈ ಬಗ್ಗೆ ಕೊಪ್ಪಳದ ಮುನಿರಾಬಾದ್‌ನಲ್ಲಿ ಇಂದು (ಶನಿವಾರ) ಪ್ರತಿಕಿಯಿಸಿರುವ ಮಸ್ಕಿಯ ಸಂಭವನೀಯ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್, ವಿಜಯೇಂದ್ರ ಅವರು ಸೌಜನ್ಯದ ಭೇಟಿ ಎಂದು ಕೆ.ವಿ ಅವರೇ ಹೇಳಿದ್ದಾರೆ. ಕೆ.ವಿರುಪಾಕ್ಷಪ್ಪ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗಲ್ಲಾ ಎಂದಿದ್ದಾರೆ. ಆದರೆ ಒಳ ಹಂತದಲ್ಲಿ ಎನಾಗಿದೆಯೋ ನನಗೆ ಗೋತಿಲ್ಲಾ ಎಂದು ಹೇಳುವ ಮೂಲಕ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
ರಾಜ್ಯ ನಾಯಕರು ಚುನಾವಣೆ ಉಸ್ತುವಾರಿಯನ್ನು ಘೋಷಣೆ ಮಾಡಿದ್ದು, ಸೋಮಣ್ಣ ಮತ್ತು ರವಿಕುಮಾರ್ ಉಸ್ತುವಾರಿ ಇದ್ದಾರೆ. ಜೊತೆಯಲ್ಲಿ ವಿಜಯೇಂದ್ರ ಕೂಡ ಬರ್ತಾರೆ ಎಂದು ಹೇಳಿದರು. ಪ್ರತಾಪ್ ಗೌಡ ಪಾಟೀಲ್ ಅವರು ವಿಜಯೇಂದ್ರ ಅವರಿಗೆ ಮಸ್ಕಿ ಉಸ್ತುವಾರಿ ಕೊಡಿ ಎಂದು ಖುದ್ದು ಸಿಎಂಗೆ ಮನವಿ ಮಾಡಿದ್ದರು. ಆದ್ರೆ, ಪ್ರತಾಪ್ ಗೌಡರ ಆಸೆ ಈಡೇರಿಲ್ಲ. ಇದರಿಂದ ಪಾಟೀಲರು ಚುನಾವಣೆ ಏನಾಗಲಿದೆಯೋ ಎನ್ನುವ ಕೊಂಚ ಆತಂಕದಲ್ಲಿರುವುದಂತೂ ಸತ್ಯ.
ಬಸನಗೌಡ ತುರ್ವಿಹಾಳ್ ಕೈ ಅಭ್ಯರ್ಥಿ
ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಉಪಚುನಾವಣೆ ಎದುರಾಗಿದೆ. ಇದರಿಂದ ತಮ್ಮ ಮುಂದಿನ ರಾಜಕೀಯ ನೆಲೆ ಕಂಡುಕೊಳ್ಳಲು ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಸೋಲುಕಂಡಿದ್ದ ಬಿಜೆಪಿ ನಾಯಕ ಬಸವನಗೌಡ ತುರ್ವಿಹಾಳ್ ಅವರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ.
ಇದೇ ನ.23ರಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕೈ ಹಿಡಿಯಲಿದ್ದಾರೆ. ಅಲ್ಲದೇ ಅಂದಿನ ಸಮಾವೇಶದಲ್ಲಿಯೇ ಅಭ್ಯರ್ಥಿಯಾಗಿ ಬಸನಗೌಡ ತುರ್ವಿಹಾಳ್ ಅವರ ಹೆಸರು ಘೋಷಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಮೂಲಕ ಕಾಂಗ್ರೆಸ್ ಮಸ್ಕಿ ವಿಧಾನಸಭಾ ಉಪಚುನಾವಣೆಗೆ ಕಹಳೆ ಮೊಳಗಿಸಲಿದೆ,