ಬೆಳಗಾವಿ ಲೋಕಸಭಾ ಉಪಚುನಾವಣೆಗ ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಆಗಲೇ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.
ಬೆಳಗಾವಿ, (ನ.21): ಸರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆಗೆ ಉಪಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಿದ್ಧತೆಗಳನ್ನ ನಡೆಸಿದೆ.
ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ.
ಕರ್ನಾಟಕದಲ್ಲಿ ಮತ್ತೊಂದು ಬೈ ಎಲೆಕ್ಷನ್: ಕೈ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚಿಸಿದ ಡಿಕೆಶಿ
ಅದರಂತೆ ಎಂಬಿ ಪಾಟೀಲ್ ಮೊದಲ ಸುತ್ತಿನಲ್ಲಿ ಜಿಲ್ಲೆಯ ನಾಯಕರುಗಳ ಜತೆ ಸಭೆ ನಡೆಸಿದ್ದು, ಈ ವೇಳೆ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಕಣಕ್ಕಿಳಿಯುವಂತೆ ಜಿಲ್ಲೆಯ ನಾಯಕರು ಒತ್ತಾಯಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಚುನಾಣೆಗೆ ಸ್ಪರ್ಧಿಸುವಂತೆ ಜಿಲ್ಲಾ ಮುಖಂಡರ ಮನವಿ ಮಾಡಿದರು.
ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಣಕ್ಕಿಳಿಯುಲು ರೆಡಿ ಎಂದ ಕೈ ಕಲಿ..!
ಬೆಳಗಾವಿ, ಗೋಕಾಕ, ಸವದತ್ತಿಯಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಹಿಡಿತ ಇದೆ. ಈ ಕಾರಣಕ್ಕೆ ತಾವೇ ಕಣಕ್ಕಿಳಿಯುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಫಿರೋಜ್ ಸೇಠ್ ಆಗ್ರಹಿಸಿದ್ದಾರೆ. ಅಲ್ಲದೇ ಸತೀಶ್ ಒಬ್ಬರ ಹೆಸರನ್ನೇ ಬೆಳಗಾವಿಯಿಂದ ಕೆಪಿಸಿಸಿಗೆ ಕಳಿಸುವಂತೆ ಜಿಲ್ಲಾ ನಾಯಕರು ಎಂಬಿ ಪಾಟೀಲ್ ಬಳಿ ವಿನಂತಿಸಿದ್ದಾರೆ.