ಯಡಿಯೂಪರಪ್ಪ ಮಾತಿಗೂ ಡೋಂಟ್ ಕೇರ್: ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕ

By Suvarna NewsFirst Published Nov 7, 2020, 9:47 PM IST
Highlights

ಈಗಾಗಲೇ ರಾಜ್ಯದಲ್ಲಿ ಎರಡು ವಿಧಾನಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶ ಹೊರಬೀಳಬೇಕಿದೆ. ಇದರ ಮಧ್ಯೆ ಮತ್ತೊಂದು ವಿಧಾನಸಭಾ ಉಪಚುನಾವಣೆ ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ಬಿಜೆಪಿ ನಾಯಕನನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು/ರಾಯಚೂರು, (ನ.07): ಅಂದು ಮಸ್ಕಿ ಕಾಂಗ್ರೆಸ್‌ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರನ್ನ ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಸೆಳೆದಿದ್ದರು. ಇದೀಗ ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡುವ ಮೂಲಕ ಬಿಜೆಪಿ ನಾಯಕನ್ನು ಕಾಂಗ್ರೆಸ್‌ಗೆ ಸೆಳೆಯುವಲಲ್ಇ ಯಶ್ವಿಯಾಇದೆ.

ಹೌದು..ಈ ಹಿಂದೆ ಕಾಂಗ್ರೆಸ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಪ್ರತಾಪ್‌ ಗೌಡ ಪಾಟೀಲ್ ಬಿಜೆಪಿ ಸೇರ್ಪಡೆಯಾಗಿದ್ದರು. ಇದರಿಂದ ಅವರ ಎದುರಾಳಿ ಬಸನಗೌಡ ತುರ್ವಿಹಾಳ ಇದೀಗ ಕಾಂಗ್ರೆಸ್‌ಗೆ ಜಂಪ್ ಆಗಿದ್ದಾರೆ.

ಅದಕ್ಕೂ ಮುನ್ನ ಬಸನಗೌಡ ತುರ್ವಿಹಾಳ ತುಂಗಾ ಭದ್ರಾ ಕಾಲುವೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ನೀಡಿದರು. ಬಳಿಕ ಇಂದು (ಶನಿವಾರ) ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು.

ಬಿಜೆಪಿ‌ಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್: ಸಿದ್ದರಾಮಯ್ಯ ಮಹತ್ವದ ಸಭೆ..!

ಕಳೆದ ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಬಸನಗೌಡ ಸೋಲು ಅನುಭವಿಸಿದ್ದರು. ಮುಂಬರುವ ಮಸ್ಕಿ ವಿಧಾನಸಭಾ ಕ಼ೇತ್ರದ ಉಪ ಸಮರದಲ್ಲಿ ಬಿಜೆಪಿಯಿಂದ ಟಿಕೆಟ್‌ ತಪ್ಪುತ್ತದೆ ಎಂಬ ಸುಳಿವು ದೊರೆತಿರುವ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿದ್ದಾರೆ.

ಮುಂಬರುವ ಮಸ್ಕಿ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಬಿಜೆಪಿ ಆತಂಕ ಶುರುವಾಗಿದೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಬಸನಗೌಡ ಅವರನ್ನ ಸಮಾಧಾನ ಪಡಿಸಲು ಮುಂದಾಗಿದ್ದರು. ಅಲ್ಲದೇ ಬಿಎಸ್‌ವೈ ಕೂಡ ಬಂದು ಭೇಟಿ ಮಾಡುವಂತೆ ಬಸನಗೌಡರಿಗೆ ತಿಳಿಸಿದ್ದರು. ಆದ್ರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಿಲ್ಲೆಯ ನಾಯಕರೊಂದಿಗೆ ಕಾಂಗ್ರೆಸ್ ಸೇರಿದರು.

click me!