ಬಿಜೆಪಿ ಮತ್ತು ಜೆಡಿಎಸ್ ಅನೇಕ ಶಾಸಕರು ಸಂಪರ್ಕದಲ್ಲಿದ್ದು, ಅವರು ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕೆ ತಯಾರಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಕೊಪ್ಪಳ (ನ.10): ಬಿಜೆಪಿ ಮತ್ತು ಜೆಡಿಎಸ್ ಅನೇಕ ಶಾಸಕರು ಸಂಪರ್ಕದಲ್ಲಿದ್ದು, ಅವರು ಕಾಂಗ್ರೆಸ್ ಸೇರ್ಪಡೆಯಾಗುವುದಕ್ಕೆ ತಯಾರಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಎಂದು ಈಗಲೇ ಹೇಳಲು ಆಗುವುದಿಲ್ಲ. ಸಂಪರ್ಕದಲ್ಲಿದ್ದು, ಚುನಾವಣೆಯ ವೇಳೆಗೆ ಸೇರ್ಪಡೆಯಾಗಲಿದ್ದಾರೆ ಎಂದರು. ಯಾವ ಚುನಾವಣೆ ಎನ್ನುವುದನ್ನು ಸ್ಪಷ್ಟಪಡಿಸಲಿಲ್ಲ. ಮದ್ಯ ಮಾರಾಟಕ್ಕೆ ಯಾವುದೇ ಟಾರ್ಗೆಟ್ ನೀಡಿಲ್ಲ. ಅಂಥ ಯಾವುದೇ ಆದೇಶ ಮಾಡಿಲ್ಲ.
ಆದರೆ, ಯಾರು ಕುಡಿಯಲಿಕ್ಕೆ ಸ್ವಯಂಪ್ರೇರಿತವಾಗಿ ಬರುತ್ತಾರೆಯೇ ಹೊರತು ಟಾರ್ಗೆಟ್ ನೀಡಿ, ಕರೆಸುವುದಿಲ್ಲ ಎಂದರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಸಿ.ಎಂ. ಸಿದ್ದರಾಮಯ್ಯ ಅವರನ್ನು ಮಂಗ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಶ್ವರಪ್ಪ ಅವರ ನಡವಳಿಕೆಯನ್ನು ಜನರು ಒಪ್ಪುವುದಿಲ್ಲ, ಅವರ ನಾಲಿಗೆ ಹರಿಬಿಟ್ಟು ಮಾತನಾಡುತ್ತಾರೆ. ಅದು ಹಾಗೆ ಇದ್ದಂತೆ ಕಾಣುತ್ತದೆ ಎಂದರು. ಜಾತಿ ಗಣತಿ ವರದಿಯ ಕುರಿತು ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಅದರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
undefined
‘ಯರಗೋಳ್’ ಯೋಜನೆ ಫಲ ಕಾಂಗ್ರೆಸ್‌ಗೇ ಸಲ್ಲಬೇಕು: ಶಾಸಕ ಎಸ್.ಎನ್.ನಾರಾಯಣಸ್ವಾಮಿ
ಸಚಿವ ತಿಮ್ಮಾಪುರ ಕಾರಿಗೆ ರೈತರ ಮುತ್ತಿಗೆ ಯತ್ನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಐಸಿಸಿ ಸಭೆ ನಡೆಯುವ ಆಲಮಟ್ಟಿಯ ಕೆಬಿಜೆಎನ್ಎಲ್ ಎಂಡಿ ಕಚೇರಿ ಎದುರು ಬೆಳಗ್ಗೆಯಿಂದಲೇ ಬೇರೆ ಬೇರೆ ಭಾಗದಿಂದ ಬಂದಿದ್ದ ನೂರಾರು ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಪೊಲೀಸರು ತಡೆದರು. ಕಾಲುವೆಯ ಕೊನೆ ಭಾಗದವರೆಗೂ ನೀರು ಹರಿಸಬೇಕು. ಹಿಂಗಾರು ಹಂಗಾಮಿಗೆ ಮಾರ್ಚ್ ಅಂತ್ಯದವರೆಗೂ ನೀರು ಹರಿಸಬೇಕು ಎಂಬುವುದೇ ಬಹುತೇಕ ರೈತರ ಬೇಡಿಕೆಯಾಗಿತ್ತು.
ಹಿಂಗಾರಿಗೆ ನೀರಿಲ್ಲ ಎಂದು ತೀರ್ಮಾನವಾದೊಡನೆ ಶಾಂತವಾಗಿದ್ದ ರೈತರು ಕೆಬಿಜೆಎನ್ಎಲ್ ಎಂಡಿ ಕಚೇರಿಯ ಸಭಾಂಗಣದ ಗೇಟ್ ಹೊರಕ್ಕೆ ಯಾದಗಿರಿಯಿಂದ ಬಂದಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಹೊರಕ್ಕೆ ಬಿಡಲಿಲ್ಲ. ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಅವರ ವಾಹನ ಹೊರಬಿಟ್ಟರು. ಆದರೆ, ನಂತರ ಕೆಬಿಜೆಎನ್ಎಲ್ ಅಧಿಕಾರಿಗಳನ್ನು ಸಭೆ ನಡೆಯುವ ಹೊರ ಗೇಟ್‌ನಲ್ಲಿ ರೈತರು ಹೊರ ಹೋಗದಂತೆ ತಡೆಗಟ್ಟಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಮರ್ಥ ಆಡಳಿತ ನಡೆಸಲು ವಿಫಲ: ಕೋಟ ಶ್ರೀನಿವಾಸ ಪೂಜಾರಿ
ಜೇವರ್ಗಿ ರೈತರ ಪ್ರತಿಭಟನೆ: ಕಲಬುರಗಿ ಜಿಲ್ಲೆಯ ಜೇವರ್ಗಿ, ಕಾಚಾಪುರ, ಯಡ್ರಾಮಿ, ಮಳ್ಳಿ, ವಡಗೇರ, ಸುಂಬಡ ಭಾಗದಿಂದ ಆಗಮಿಸಿದ್ದ ನೂರಾರು ರೈತರು, 2024 ರ ಮಾರ್ಚ್ ಅಂತ್ಯದವರೆಗೂ ನೀರು ಹರಿಸಬೇಕು ಎಂದು ಅವರು ಪ್ರತಿಭಟನೆ ನಡೆಸಿದರು. ಕಾಲುವೆ ಸಮರ್ಪಕ ನೀರು ಹರಿಸದ ಕಾರಣ ಮುಂಗಾರು ಹಂಗಾಮಿಗೆ ಬೆಳೆದ ಈಗಾಗಲೇ ತೊಗರಿ, ಹತ್ತಿ ಬೆಳೆ ನಾಶವಾಗಿದೆ. ಈಗ ಮೆಣಸಿನಕಾಯಿ, ಕಡಲೆ, ಜೋಳ, ಕುಶಬಿ ಬೆಳೆಗೆ ನೀರು ಅಗತ್ಯವಿದೆ ಎಂದುಪ್ರತಿಭಟನೆ ನಡೆಸಿದರು. ನಾರಾಯಣಪುರ ಎಡದಂಡೆ ಕಾಲುವೆಯ ಕೊನೆ ಭಾಗಕ್ಕೆ ನೀರು ಹರಿಸಬೇಕು. ಕಾಲುವೆಯ ದುರಸ್ತಿ ಹಾಗೂ ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಾಸುದೇವ ಮೇಟಿ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಕೂಡಾ ಪ್ರತಿಭಟನೆ ನಡೆಸಿದರು.