
ಮಂಗಳೂರು(ಡಿ.04): ಪೊಲೀಸ್ ಇಲಾಖೆಯ ಮೇಲೆ ಕಾಂಗ್ರೆಸ್ ಒತ್ತಡ ಹೇರಿ ಕೇಸು ಹಾಕಿಸುತ್ತಿದೆ. ಹಿಂದು ಯುವತಿಯ ಜತೆಗಿದ್ದವನನ್ನು ಕೇವಲ ವಿಚಾರಿಸಿದ ಮಾತ್ರಕ್ಕೆ ಕೇಸು ಹಾಕುವುದಾದರೆ ನಿಮ್ಮದೂ ಹಿಂದೂಗಳ ಮೇಲೆ ನೈತಿಕ ಪೊಲೀಸ್ ಗಿರಿಯೆ ಎಂದು ಕಾಂಗ್ರೆಸ್ ಆಡಳಿತವನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಮೈ ಕೈ ಮುಟ್ಟದೆ ಪ್ರಶ್ನಿಸಿದರೂ ಕೇಸು, ಹೊಡೆದರೂ ಕೇಸು ಹಾಕುವುದಾದರೆ ಹಿಂದೂ ಕಾರ್ಯಕರ್ತರಿಗೆ ನೀವೇ ಪರೋಕ್ಷವಾಗಿ ಪ್ರೇರಣೆ ನೀಡುತ್ತಿಧ್ದಿರಿ ಎಂದಿದ್ದಾರೆ.
ಇಂಡಿಯಾ ಮೈತ್ರಿಕೂಟದ ಜಿಹಾದಿ ಮನಸ್ಥಿತಿ: ವೇದವ್ಯಾಸ್ ಕಾಮತ್
ಹಿಂದೂ ಸಮಾಜದ ಒಳಿತಿಗಾಗಿ, ನಮ್ಮ ಸಹೋದರಿಯರ ಮಾನ, ಪ್ರಾಣ ರಕ್ಷಣೆಗೆ ಮುಂದೆಯೂ ನಮ್ಮ ಪಕ್ಷ, ನಮ್ಮ ಹಿಂದೂ ಸಂಘಟನೆಯ ಕಾರ್ಯಕರ್ತರು ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ. ದುಷ್ಟ ಸಂಚನ್ನು ನಮ್ಮ ಕಾರ್ಯಕರ್ತರು ಮುಂದೆಯೂ ಬಯಲಿಗೆಳೆಯುತ್ತಾರೆ. ನಿಮ್ಮಿಂದ ಆಗುವುದಾದರೆ ತಡೆಯಿರಿ ಶಾಸಕ ಡಾ.ಭರತ್ ಶೆಟ್ಟಿ ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.