
ನವದೆಹಲಿ(ಮಾ. 30) ನಾನು ಸಂಸದೆಯಾಗಿ ತಿಂಗಳು ಬಂದರೆ ಮೂರು ವರ್ಷ ಆಗುತ್ತಿದೆ. ನನ್ನ ಜರ್ನಿಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಲ್ಲರಿಗೂ ಧನ್ಯವಾದ. ಮಾಧ್ಮಮದವರು ಎಲ್ಲಾ ವಿಚಾರವನ್ನ ಜನರಿಗೆ ತಲುಪಿಸಿದ್ದಿರಿ. 52 ವರ್ಷದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೇನೆ. ಸಿನಿಮಾ (Sandalwood) ನಟಿ ಇವರಿಗೆನು ಅನುಭವ, ಎನು ಕೆಲಸಮಾಡ್ತಾರೆ ಅಂತ ಕಮೆಂಟ್ಸ್ ಬರ್ತಿತ್ತು. ಇಂಡಿಪೆಂಡೆಂಟ್ ಆಗಿ ಏನ್ ಮಾಡ್ತಾರೆ, ಗೆದ್ದು ಹೊಗ್ತಾರಷ್ಟೆ ಅಂದ್ರು ಎನ್ನುತ್ತ ಮೂರು ವರ್ಷಗಳ ತಾವು ಮಾಡಿರೋ ಕೆಲಸದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ವರದಿ ನೀಡಿದರು.
ಸಂಸದೆಯಾಗಿ ಆರುತಿಂಗಳಲ್ಲಿ ಮಂಡ್ಯದ ರೈಲಿನ ಅಂಡರ್ ಬ್ರಿಡ್ಜ್ ಕೆಲಸ ಮಾಡಿದೆ ಸಚಿವರಾದ ಸುರೇಶ್ ಅಂಗಡಿ (Suresh Angadi) ಮತ್ತು ಪಿಯೂಷ್ ಗೊಯಲ್ ರನ್ನ ಮೂರ್ನಾಲ್ಕು ಬಾರಿ ಭೇಟಿ ಮಾಡಿದ್ದೆ. ಜಲಜೀವನ್ ಮಿಷನ್ ಹಣನ್ನು ಶಿವರಾಮೇಗೌಡ ಮತ್ತು ಪುಟ್ಟರಾಜು ಬಳಕೆ ಮಾಡಲಿಲ್ಲ. ಆ ಹಣವನ್ನ ನಾನು ತಂದು ಕೆಲಸ ಮಾಡಿಸಿದೆ. ಬಿಮ್ಸ್ ನಲ್ಲಿ ಆಂಬುಕೆನ್ಸ್ ಗೆ ಹಣ ನೀಡಲಾಗಿದೆ ಬಟನ್ ಒತ್ತಿದ ತಕ್ಷಣ ಹಣ ಬರಲ್ಲ, ಅದನ್ನ ತರಲು ಹರಸಾಹಸಪಟ್ಟೆ. ಮೊದಲ ವರ್ಷದಲ್ಲೆ ಇಡಿ ರಾಜ್ಯದಲ್ಲಿ ಅತಿ ಹೆಚ್ಚು ಅನುದಾನ ತಂದು ಕೆಲಸ ಮಾಡಿದ ಎರಡನೆ ಸಂಸದೆ ನಾನು ಎಂದರು.
ಪ್ರಗತಿ ಪರಿಶೀಲನಾ ಸಭೆ ಮಾಡಿರುವ ಸಂಸದರಲ್ಲೆ ಮೂರು ವರ್ಷಗಳ ಕಾಲ ನಾನು ಮೊದಲ ಸ್ಥಾನದಲ್ಲಿದ್ದೆನೆ. ಇಡಿ ರಾಜ್ಯದ ರಾಜಕಾರಣವೆ ಬೇರೆ ಮಂಡ್ಯ ರಾಜಕೀಯವೆ ಬೇರೆ ಮೈಶುಗರ್ ಕಾರ್ಖಾನೆ ಅವರದೆ ಸರ್ಕಾರವಿದ್ದಾಗ ಯಾಕೆ ಆರಂಭ ಮಾಡಿಲ್ಲ? ನನ್ನ ಹೋರಾಟದ ಹಿನ್ನಲೆ ಕಳೆದ ಬಾರಿಯ ಬಜೆಟ್ ನಲ್ಲಿ ಮೈಶುಗರ್ ಬಗ್ಗೆ ಪ್ರಸ್ತಾಪಿಸಲಾಗಿದೆ ಕೋವಿಡ್ ಸಂದರ್ಭದಲ್ಲಿ ಸಂಸದರು ಏನ್ ಮಾಡಿದ್ರು ಅಂತ ಕೇಳ್ತಾರ ನಾಗಮಂಗಲದ ಮತ್ತು ಮಳವಳ್ಳಿ ಶಾಸಕರು ಕೋವಿಡ್ ಸೆಂಟರ್ ನಲ್ಲಿ ಡ್ಯಾನ್ಸ್ ಮಾಡಿರೋದೆ ಅವರ ಸಾಧನೆ ಎನ್ನುತ್ತ ಶಾಸಕರಾದ ಸುರೇಶ್ ಗೌಡ ಮತ್ತು ಅನ್ನದಾನಿಗೆ ಟಾಂಗ್ ಕೊಟ್ಟರು.
ದಿಶಾ ಸಭೆಯಲ್ಲಿ ನಮ್ಮನ್ನ ಕರೆದಿಲ್ಲ ಅಂತ ಕೆಲವರು ದೊಡ್ಡ ಸುದ್ದಿಮಾಡ್ತಿದ್ದಾರೆ. ಇವರು ಈ ಹಿಂದೆ ಎಷ್ಟು ಸಭೆಯಲ್ಲಿ ಬಂದಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ನಾನು ಅಕ್ರಮ ಗಣಿಗಾರಿಕೆ ವಿಚಾರ ದನಿ ಎತ್ತಿದಾಗ ಆ ಸಭೆಗೆ ಎಲ್ಲಾ ಶಾಸಕರು ಬಂದ್ರು. ಸಭೆಗೆ ಬಂದು ರಾಜಕೀಯ ವಿಚಾರ ಚರ್ಚೆ ಮಾಡಿದ್ರು ಮೇನಲ್ಲಿ ಚುನಾವಣೆ ಬರುತ್ತಿರೋ ಕಾರಣ ನನ್ನ ವಿರುದ್ದ ಆರೋಪ ಮಾಡ್ತಿದ್ದಾರೆ ಚುನಾವಣೆಯಲ್ಲಿ ಜನ ಯಾವರೀತಿ ಉತ್ತರ ಕೊಟ್ಟಿದ್ದಾರೆ ಅಂತ ಮರೆತಿದ್ದಾರೆ. ಸುಮಲತಾ ಅಂಬರಿಷ್ ಬಗ್ಗೆ ಮಾತನಾಡಿದ್ರೆ ಟಿವಿಯಲ್ಲಿ ಮೈಲೇಜ್ ಸಿಗುತ್ತೆ ಅಂತ ಅವರಿಗೆ ಗೊತ್ತು. ಹೈಡ್ ಲೈನ್ ಸುದ್ದಿ ಆಗುತ್ತೆ ಅಂತ ಜೆಡಿಎಸ್ ಯುವ ನಾಯಕರಿಗೆಗೊತ್ತು. ನಾನು ಯಾವ ಚಾಲೆಂಜ್ ಗೆ ಬೇಕಾದ್ರು ಚರ್ಚೆಗೆ ಸಿದ್ದ. ನನ್ನ ವಿರುದ್ದ ಭ್ರಷ್ಟಾಚಾರದ ಕಪ್ಪು ಇದ್ರೆ ಹೇಳಿ. ಶಾಸಕರಾದ ಸುರೇಶ್ ಗೌಡ ಮತ್ತು ಅನ್ನದಾನಿ ಕೊವೀಡ್ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿ ಬಂದರು ಕೊವೀಡ್ ಹೋರಾಟದಲ್ಲಿ ನೀವ್ ಏನ್ ಮಾಡಿದ್ರಿ ಎಂದು ನನ್ನ ಪ್ರಶ್ನಿಸಿದರು. ನಾನು ಆಕ್ಸಿಜನ್ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆರೋಗ್ಯ ಸಚಿವರ ಜೊತೆಗೂಡಿ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಿಸಿದ್ದೇನೆ ಎನ್ನುತ್ತ ಜೆಡಿಎಸ್ ನಾಯಕರ ಮೇಲೆ ಸಮರ ನಡೆಸಿದರು.
ಸಾಲಿಗ್ರಾಮದಲ್ಲಿ ಎಸ್ಸಿ - ಎಸ್ಟಿ ಕಾಲೋನಿಗಳಲ್ಲಿ ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆಗೆ ತೆರಳಿದಾಗ ಬೆದರಿಕೆ ಹಾಕಿದ್ದರ ಸಾ.ರಾ ಮಹೇಶ್ ಕಡೆಯ ಬೆಂಬಲಿಗರು ಜೀವ ಬೆದರಿಕೆ ಹಾಕಲು ಬಂದಿದ್ದರು ಸ್ಥಳೀಯ ಮಹಿಳೆಯರು ನನ್ನ ಬೆಂಬಲಕ್ಕೆ ಬಂದಿದ್ದರು. ರವೀಂದ್ರ ಶ್ರಿಕಂಠಯ್ಯ ಅಂಬರೀಶ್ ಸಂಸದರಾಗಿದ್ದಾಗ ಮಂಡ್ಯ ಏನು ಅಭಿವೃದ್ಧಿ ಯಾಗಿಲ್ಲ. ಪಕ್ಕದ ಹಾಸನವನ್ನ ನೋಡಿ ಅಂತ ಹೇಳಿದ್ದಾರೆ. ಅಂಬರೀಶ್ 16 ವರ್ಷ ಅಧಿಕಾರದಲ್ಲಿದ್ದರು. ನಿಮ್ಮ ಪಕ್ಷದವರೆ ಎರಡು ಬಾರಿ ಸಿಎಂ ಆಗಿದ್ರು ಯಾಕೆ ಮಂಡ್ಯ ಅಭಿವೃದ್ಧಿ ಯಾಗಿಲ್ಲ? ಹಾಸನ ಯಾಕೆ ಅಭಿವೃದ್ದಿಯಾಗಿದೆ ಅಂತ ನೀವು ಯೋಚನೆ ಮಾಡಿ ಸಂಸದರಿಗೆ 8 ಕೋಟಿ ಮಾತ್ರ ಅನುದಾನ ನೀಡ್ತಾರ ಪ್ರತಿ ಕ್ಷೇತ್ರಕ್ಕೆ 80 ಲಕ್ಷ ಮಾತ್ರ ಬರುತ್ತೆ ಅದೇ ಶಾಸಕರಿಗೆ ಎರಡು ಕೋಟಿ ಅನುದಾನ ಬರುತ್ತೆ ಎಂಬುದನ್ನು ನೆನಪಿಸಿದರು.
ರಾಜ್ಯ ರಾಜಕಾಣಕ್ಕೆ ಬರುವ ಬಗ್ಗೆ ಸ್ಪಷ್ಟನೆ ಕೊಟ್ಟ ಸುಮಲತಾ
ಮೈಶುಗರ್ ಕಾರ್ಖಾನೆ ಆರಂಭಕ್ಕೂ ವಿರೋಧ ಮಾಡ್ತಾರೆ ಮುಂದಿನ ವಿಧಾನಸಭೆಯಲ್ಲಿ ಈ ಎಲ್ಲಾ ಶಾಸಕರನ್ನ ತಿರಸ್ಕಾರ ಮಾಡ್ತಾರೆ. ಇಲ್ಲಿರೋ ಎಲ್ಲಾ ಶಾಸಕರನ್ನ ತಿರಸ್ಕಾರ ಮಾಡಲೇ ಬೇಕು ರವೀಂದ್ರ ಶ್ರಿಕಂಠಯ್ಯ ಅಂಬರೀಶ್ ಸಂಸದರಾಗಿದ್ದಾಗ ಮಂಡ್ಯ ಏನು ಅಭಿವೃದ್ಧಿ ಯಾಗಿಲ್ಲ. ಪಕ್ಕದ ಹಾಸನವನ್ನ ನೋಡಿ ಅಂತ ಹೇಳಿದ್ದಾರೆ. ಅಂಬರೀಶ್ 16 ವರ್ಷ ಅಧಿಕಾರದಲ್ಲಿದ್ರು. ನಿಮ್ಮ ಪಕ್ಷದವರೆ ಎರಡು ಬಾರಿ ಸಿಎಂ ಆಗಿದ್ರು ಯಾಕೆ ಮಂಡ್ಯ ಅಭಿವೃದ್ಧಿ ಯಾಗಿಲ್ಲ. ಹಾಸನ ಯಾಕೆ ಅಭಿವೃದ್ದಿಯಾಗಿದೆ ಅಂತ ನೀವು ಯೋಚನೆ ಮಾಡಿ ಎಂದು ಸವಾಲೆಸೆದರು.
ನಾನು ನ್ಯಾಯಬದ್ಧವಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಸಂಸತ್ ನಲ್ಲಿ ನನ್ನ ಜಿಲ್ಲೆಯ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಯಾರೇ ಬೇಕಾದ್ರು ಯಾವುದೇ ಸಂಸದರ ಜೊತೆಗೆ ಹೋಲಿಕೆ ಮಾಡಿ ನೋಡಿ. ಸಣ್ಣ ಪುಟ್ಟ ತಪ್ಪುಗಳಿದ್ದರೇ ಸಲಹೆ ನೀಡಿದ್ರೆ ಖಂಡಿತಾ ಸರಿಪಡಿಸಿಕೊಳ್ಳಬೇಕು ಅದನ್ನು ಬಿಟ್ಟು ಈ ರೀತಿಯಾಗಿ ಟಾರ್ಗೆಟ್ ಮಾಡಬಾರದ ಈ ಟಾರ್ಗೆಟ್, ಚೀಫ್ ರಾಜಕೀಯ ನಿಲ್ಲಬೇಕು ಅಂದ್ರೆ ಚುನಾವಣೆ ಬರಬೇಕು ಜನರು ಇಂತಹ ಶಾಸಕರನ್ನು ಸೋಲಿಸಬೇಕು. ಮಂಡ್ಯ ಶಾಸಕರ ವಿರುದ್ಧ ಸುಮಲತಾ ವಾಗ್ದಾಳಿ. ಮೂರು ವರ್ಷಗಳ ಹಿಂದಿನ ಚುನಾವಣೆ ಫಲಿತಾಂಶ ನಿಮ್ಮ ಕೈಯಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. :ಕೆಆರ್‌ಎಸ್ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ತೆಗೆದುಕೊಂಡಿದ್ದಕ್ಕೆ ಅಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದೆ. ಇದರಿಂದ ಕೆಲವರಿಗೆ ನೋವು ಕಷ್ಟವಾಗಿದೆ ನಾನು ಮೂರು ವರ್ಷದಲ್ಲಿ ಇಷ್ಟು ಸವಾಲು ಎದುರಿಸಿದ್ದೇವೆ. ಜೀವ ಬೆದರಿಕೆ ನಡುವೆ ಇಷ್ಟೇಲ್ಲ ಕೆಲಸ ಮಾಡಿದ್ದೇನೆ. ಜನರು ನನ್ನ ಜೊತೆಗೆ ಇರ್ತೇವೆ ಎಂದು ಭರವಸೆ ನೀಡಿದ್ದಾರೆ ನಿಖಿಲ್ ಕುಮಾರಸ್ವಾಮಿ ಬಾರಿ ರಾಜಕೀಯ ಅನುಭವಿಯಂತೆ ಸಲಹೆ ನೀಡಿದ್ದಾರೆ. ಏನು ಸಾಧನೆ, ಏನು ಕೊಡುಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ಚಿಕ್ಕವರಾದರೂ ಪರವಾಗಿಲ್ಲ, ನನ್ನಿಂದ ತಪ್ಪಾಗಿದ್ರೆ ಸಲಹೆ ಸ್ವೀಕರಿಸುವೇ. ಆದರೆ ಪ್ಯಾಕ್ಟ್ ಇಟ್ಟುಕೊಂಡು ಮಾತನಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು ನೀಡಿದರು.
ನನಗೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಆಫರ್ ಬಂದಿತ್ತು. ಆದರೆ ನಾನು ಆ ಕಡೆಗೆ ಹೊಗಲಿಲ್ಲ, ಅದಕ್ಕೆ ಬೇರೆಯೆ ಕಾರಣವಿದೆ. ಮುಂದಿನ ದಿನಗಳಲ್ಲಿ ಆ ವಿಚಾರ ನೋಡೊಣ ಅಭಿಷೇಕ್ ಸ್ಪರ್ಧೆ ಮಾಡುವ ಭಯ ಎದುರಾಳಿಯಲ್ಲಿ ಇರಬಹುದು ಈ ಎಲ್ಲಾ ಕಾರಣಕ್ಕೆ ಎದುರಾಳಿಗಳು ಟೀಕೆ ಮಾಡ್ತಿದ್ದಾರೆ ಎನಿಸುತ್ತದೆ.
ನಾನು ವಿಧಾನಸಭೆ ಸ್ಪರ್ಧೆ ಮಾಡುವುದಿಲ್ಲ ಮಂಡ್ಯದಲ್ಲಿ ಅಭಿಷೇಕಗೆ ಜನರ ಪ್ರೀತಿ ಸಿಗುತ್ತಿದೆ ಚುನಾವಣೆ ಸ್ಪರ್ಧೆ ಮಾಡಿ ಎಂದು ಜನರು ಎಲ್ಲ ಕಡೆ ಹೇಳುತ್ತಿದ್ದಾರೆ. ಎಲ್ಲ ಪಕ್ಷಗಳು ಟಿಕೆಟ್ ನೀಡಲು ಸಿದ್ದವಿದೆ ಆದರೆ ಸದ್ಯ ಅಭಿಷೇಕ ರಾಜಕೀಯದ ಬಗ್ಗೆ ನಿರ್ಧಾರ ಮಾಡಿಲ್ಲ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಿದ್ದಾನೆ. ಮಾರ್ಚ್ ಎಪ್ರೀಲ್ ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಕುಟುಂಬ ರಾಜಕಾರಣವನ್ನ ವಿರೋಧಿಸಿ ಚುನಾವಣೆಗೆ ನಿಂತಿದ್ದೆ ನನ್ನ ತಪ್ಪಾ? ಅವರು ಯುನಾನಿಮಸ್ ಆಗಿ ಗೆಲ್ಲೋದಕ್ಕೆ ಬಿಡಬೇಕಾ..? ಅವರು ವಿರೋಧ ಮಾಡ್ತಿದ್ದಾರೆ ಆದ್ರೆ ನಾನು ವಿರೋಧ ಮಾಡ್ತಿಲ್ಲ.. ಮಹಿಳೆಯರ ಜೊತೆ ಮಿನಿಮಮ್ ಮ್ಯಾನರ್ಸ್ ಕೊಡ್ತಾರೆ .. ಅವರು ಏನೆಲ್ಲಾ ನನ್ನ ಬಗ್ಗೆ ಮಾತನಾಡಿದ್ರು ಅದಕ್ಕೆ ನನ್ನ ಉತ್ತರ ಕೊಡ್ತಿನಿ.. ಕೆಆರ್ ಎಸ್ ನಲ್ಲಿ ತೆಗೆದುಕೊಂಡು ಹೋಗಿ ಮಲಗಿಸಲಿ ಅಂತಾರೆ.. ನಿಖಿಲ್ ಕುಮಾರಸ್ವಾಮಿ ನನಗೆ ಆತ್ಮಾವಲೋಕಮಾಡಲಿ ಅಂತ ಹೇಳ್ತಾರೆ.. ಅವರು ಆತ್ಮಅವಲೋಕನ ಮಾಡಿಕೊಳ್ಳಲಿ. ಅವರ ತಂದೆ, ದೊಡ್ಡಪ್ಪ ಮಾತನಾಡಿರೋ ಬಗ್ಗೆ ಆತ್ಮ ಅವಲೋಕನ ಮಾಡಿಕೊಳ್ಳಲಿ. ಪಕ್ಷಬಿಟ್ಟು, ತಂದೆ ತಾತನ ಹೆಸರು ಬಿಟ್ಟು ಜಿಲ್ಲಾ ಪಂಚಾಯತ್ ಚುನಾವಣೆ ಗೆಲ್ಲಲ್ಲ ಆಮೇಲೆ ಬಂದು ನನಗೆ ಸಲಗೆ ನೀಡಲಿ. ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy)ಸುಮಲತಾ ಅಂಬರೀಶ್ ನೇರ ಸವಾಲು ಎಸೆಸದರು.
ಜೆಡಿಎಸ್ ಪಕ್ಷ ಬಿಟ್ಟು ಗೆದ್ದು ಬರಲಿ. ನಿಖಿಲ್ ಕುಮಾರಸ್ವಾಮಿಗೆ ನಾನು ನೇರ ಸವಾಲು ಹಾಕುತ್ತೇನೆ ಜಿಲ್ಲಾ ಪಂಚಾಯತ್ ಗೆದ್ದು ಬಂದು ಮಾತನಾಡಲಿ ಎಂದು ನಿಖಲ್ ವಿರುದ್ಧ ಗುಡುಗಿದರು.
ಸಲಾಂ ಆರತಿ ವಿಚಾರ: ಹಿಜಾಬ್ ನಿಂದ ಹಿಡಿದು ಟಿಪ್ಪು ಸಲಾಂ ಆರತಿ ವಿಚಾರಗಳ ತನಕ ಬೇರೆ ಬೇರೆ ರೀತಿಯಲ್ಲಿ ತಿರುವು ಪಡೆದುಕೊಂಡಿವೆ. ಹಿಜಬ್ ವಿಚಾರದಲ್ಲಿ ಕೋಟ್೯ ಆದೇಶ ಅಂತಿಮ. ಇದನ್ನು ಎಲ್ಲರೂ ಪಾಲಿಸಬೇಕು. ಈ ವಿಚಾರಗಳು ಇಲ್ಲಿಗೆ ನಿಲ್ಲಬೇಕಿತ್ತು. ಆದರೆ ಈ ವಿಚಾರಗಳು ಬೇರೆ ಬೇರೆ ರೀತಿ ತಿರುವು ಪಡೆದುಕೊಳ್ಳುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಈಗ ನಾನು ಮಾತಾಡಿ ಮತ್ತೊಂದು ವಿವಾದ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಸುಮಲತಾ ಹೇಳಿದರು.
ಅಭಿಷೇಕ (Abishek Ambareesh) ಅವರ ಅಪ್ಪನ ಮಗ: ಅಭಿಷೇಕ್ ಚುನಾವಣೆ ಸ್ಪರ್ಧೆ ಬಗ್ಗೆ ಅವನೇ ನಿರ್ಧರಿಸುತ್ತಾನೆ. ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಅಭಿಷೇಕ ಸ್ಪರ್ಧೆ ಮಾಡುವುದರ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಅಭಿಷೇಕ್‌ಗೆ ಆಹ್ವಾನ ಬಂದಿದೆ. ರೈತ ಸಂಘದಿಂದಲೂ ಸ್ಪರ್ಧಿಸಲು ಜನರು ಮನವಿ ಮಾಡಿದ್ದಾರೆ. ಅಭಿಷೇಕ ಭೇಟಿ ನೀಡುವ ಎಲ್ಲ ಊರುಗಳಲ್ಲೂ ಜನರು ತಮ್ಮ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಅಭಿಷೇಕ ಈವರೆಗೂ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಈ ಬಗ್ಗೆ ನಾನು ಚರ್ಚಿಸುವ ಪ್ರಯತ್ನ ಮಾಡಿದರೂ ಅದಕ್ಕೆ ಅಭಿಷೇಕ ಉತ್ತರಿಸಿಲ್ಲ. ಹಾಗಾಗಿ ಕೆಲವು ದೊಡ್ಡ ನಾಯಕರು ನನ್ನ ಮೇಲೆ ಬೇಸರವಾಗಿದ್ದಾರೆ. ಸದ್ಯ ಸಿನಿಮಾ ಬಗ್ಗೆ ಹೆಚ್ಚು ಮಹತ್ವ ನೀಡುತ್ತಿದ್ದು ಮುಂದಿನ ವರ್ಷ ಮಾರ್ಚ್ - ಏಪ್ರಿಲ್ ನಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸುಮಲತಾ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.