ಹಕ್ಕುಪತ್ರ ಪಾಲಿಟಿಕ್ಸ್: ಜೆಡಿಎಸ್ ತಾಳಕ್ಕೆ ಕುಣಿಯುವ ಅಧಿಕಾರಿಗಳಿಗೆ ಸುಮಲತಾ ಕ್ಲಾಸ್

By Suvarna NewsFirst Published Feb 13, 2020, 5:14 PM IST
Highlights

ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆದ್ದು 8 ತಿಂಗಳುಗಳು ಕಳೆದಿವೆ. ಆದರೂ ಮಂಡ್ಯದಲ್ಲಿ ಜೆಡಿಎಸ್​ ವರ್ಸಸ್ ಸುಮಲತಾ ಫೈಟ್ ಇನ್ನೂ ಮುಂದುವರಿದಿದೆ. 

ಮಂಡ್ಯ, (ಫೆ.13):  ಜೆಡಿಎಸ್​ ವರ್ಸಸ್ ಸುಮಲತಾ ಫೈಟ್ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲೂ  ರಾಜಕೀಯ ಶುರುವಾಗಿದ್ದು, ಇದಕ್ಕೆ ಸಂಸದೆ, ಅಧಿಕಾರಿಗಳಿಗೆ ಫುಲ್ ಕ್ಲಾಸ್ ನೀಡಿದ್ದಾರೆ.

ಮಂಡ್ಯದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು (ಗುರುವಾರ) ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದೆ ಸುಮಲತಾ ಅಂಬರೀಶ್ ಶಿಷ್ಟಾಚಾರದ ಪಾಠ ಮಾಡಿದ್ದಾರೆ.

ಇದು ನನ್ನ ಮನವಿ ಅಂತಾ ಅಂದುಕೊಳ್ಳಿ‌ ಇಲ್ಲ ನಿರ್ಧಾರ ಅಂದುಕೊಳ್ಳಿ. ಶಿಷ್ಟಾಚಾರದ ವಿಷಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇಂದ್ರ ಹಾಗೂ ಯಾವುದೇ ಕಾರ್ಯಕ್ರಮಗಳಾದರು ನನಗೆ ತಿಳಿಸಬೇಕು. ಸದ್ಯ ಯಾಕೆ ನೀವು ಶಿಷ್ಟಾಚಾರದ ಪಾಲನೆ ಮಾಡುತ್ತಿಲ್ಲ ಗೊತ್ತಿಲ್ಲ. ಇನ್ನೂ ಮುಂದೆ ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಅಭಿವೃದ್ಧಿಯೇ ಗುರಿ, ರಾಜಕಾರಣ ಮಾಡಲ್ಲ: ಸುಮಲತಾ

ಸುಮಲತಾ ಗರಂ ಆಗಿದ್ದೇಕೆ..? 
ಮಂಡ್ಯದ ಹನಕೆರೆಯಲ್ಲಿ ಹಕ್ಕು ಪತ್ರವಿತರಣೆ ಕಾರ್ಯಕ್ರಮ ಇಂದು ನಡೆಯಬೇಕಾಗಿತ್ತು. ನಿಗದಿಯಾಗಿದ್ದ ಕಾರ್ಯಕ್ರಮವನ್ನು ಶಾಸಕ ಶ್ರೀನಿವಾಸ್ ಶಿಷ್ಟಾಚಾರ ಕಾರಣ ಇಟ್ಟು ಮುಂದೂಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಇದರಂತೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮುಂದೂಡಿತ್ತು.

ಕಾರ್ಯಕ್ರಮ ಮುಂದೂಡಿದ ವಿಚಾರವಾಗಿ ಸಂಸದೆ ಸುಮಲತಾ ಅವರು ಅಧಿಕಾರಿಗಳ ಬಳಿ ವಿಚಾರಿಸಿದ್ದಲ್ಲದೆ, ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. 

ಮನೆಗೆ ಹೋದ ಅಧಿಕಾರಿಗಳನ್ನು ವಾಪಸ್ ಕರೆಸಿ ಸಂಸದೆ ತರಾಟೆ

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಅಂದಿನ ಸಿಎಂ ಆಗಿದ್ದ ಎಚ್‌.ಡಿ.ಕುಮಾರಸ್ಬಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದ್ರೆ ಚುನಾವಣೆ ವೇಳೆ ಜೆಡಿಎಸ್ ಆಡಿದ ಆಟಗಳು ಅಷ್ಟೀಷ್ಟಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

click me!