
ಮೈಸೂರು (ಏ.18): ಹೆತ್ತ ತಾಯಿ ಹೆಂಡತಿ ಬಗ್ಗೆ ಅನುಮಾನ ಪಡಬೇಕು ಅಂತ ಹೇಳಿರುವ ಡಿಕೆ ಶಿವಕುಮಾರ ಪರಮ ನೀಚ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಗುಡುಗಿದರು.
ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅಂತವರ ಬಗ್ಗೆ ಮಾತನಾಡಬೇಕಾ? ಹೆಣ್ಣಿನ ಬಗ್ಗೆ ಅವರ ಭಾವನೆ ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಮಕ್ಕಳು ಹೊರಗೆ ಹೋದಾಗ ಕಣ್ಣಿಟ್ಟಿರಬೇಕು ಅಂತ ಹಿರಿಯರು ಹೇಳಿದ್ದಾರೆ ಎಂದರು.
ಕುಮಾರಸ್ವಾಮಿ ಹೇಳಿಕೆಯಿಂದ ಹೆಣ್ಣು ಕುಲಕ್ಕೆ ಅಪಮಾನ: ಡಿ.ಕೆ.ಶಿವಕುಮಾರ್ ಆಕ್ರೋಶ
20-30 ರೂ ಕೊಟ್ಟು ಕಾಂಗ್ರೆಸ್ ನವರನ್ನು ಕರೆಸಿಕೊಂಡು ಗೋ ಬ್ಯಾಕ್ ಅಂತಿದ್ದಾರೆ. ಇಂತವರ ಜೊತೆ ಚರ್ಚೆ ಮಾಡಬೇಕಾ ಎಂದು ಅವರು ಪ್ರಶ್ನಿಸಿದರು.
ದೇವೇಗೌಡರ ಕುಟುಂಬಬಸ್ಥರು ಕಲ್ಲು ಒಡೆಯುತ್ತಿದ್ದರು ಎಂಬ ಡಿಕೆ ಸುರೇಶ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ ಅವರು, ಯಾರು ಕಲ್ಲು ಒಡೆಯುತ್ತಿದ್ದರು ತೋರಿಸೋಕೆ ಹೇಳಲಿ. ಸಾವಿರಾರು ಜನ ಕಲ್ಲಿನ ಬಿಸಿನೆಸ್ ಮಾಡುತ್ತಾರೆ. ಸರ್ಕಾರದ ರೆಕಾರ್ಡ್ ತಿದ್ದಿ, ಅಮಾಯಕರ ಭೂಮಿಯನ್ನ ಧಮ್ಕಿ ಹಾಕಿ ದಬ್ಬಾಳಿಕೆಯಿಂದ ಕಿತ್ತು ಕಲ್ಲು ಒಡೆಯುತ್ತಿದ್ದರಲ್ಲ ಅದನ್ನ ಮಾಡಿದವರು ಯಾರು ಅಂತ ಹೇಳಿ ಎಂದು ಪ್ರಶ್ನಿಸಿದರು.
7-8 ತಿಂಗಳಲ್ಲಿ ಕರ್ನಾಟಕದಲ್ಲಿ ರೈತ ಪರ ಸರ್ಕಾರ: ಕುಮಾರಸ್ವಾಮಿ
ಕದ್ದು ಒಡೆದರಲ್ಲ ಅದು ಯಾರ ಅಂತ ಹೇಳಲಿ. ಕಾನೂನು ಬಾಹಿರವಾಗಿ ಯಾರು ಕಲ್ಲು ಒಡೆದರು ಅಂತ ದಾಖಲೆ ಬಿಡುಗಡೆ ಮಾಡಲಿ. ನಮ್ಮ ಕುಟುಂಬಸ್ಥರು ಅಥವಾ ಬೇರೆ ಯಾರ ಕುಟುಂಬಸ್ಥರು ಈ ಕೆಲಸ ಮಾಡಿದ್ದಾರೆ ಎಂಬುದು ತಿಳಿಯಬೇಕಿದ್ದರೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನಾನು ಆ ವ್ಯವಹಾರ ಮಾಡಿಲ್ಲ. ನನ್ನ ಕುಟುಂಬ ಎಂದರೆ ನಾನು, ನನ್ನ ಹೆಂಡತಿ, ಮಗ,ಸೊಸೆ ಮೊಮ್ಮಗ ಅಷ್ಟೆ ಎಂದರು. ಇದೇ ಸುಮಲತಾ ಅವರು ಪ್ರಚಾರಕ್ಕೆ ಬರ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು ಬರುವ ವಿಚಾರ ಇನ್ನೂ ತೀರ್ಮಾನ ಆಗಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.